ಅಂತರಾಷ್ಟ್ರೀಯ

ಚೀನಾ ಖಾಸಗಿ ವಿಶ್ರಾಂತಿ ಗೃಹದಲ್ಲಿ ಆಕಸ್ಮಿಕ ಬೆಂಕಿ 38 ಬಲಿ.

Pinterest LinkedIn Tumblr

china_fire_agehome_1

ಬೀಜಿಂಗ್, ಮೇ.26:  ಕೇಂದ್ರ ಚೀನಾದ ಹೆನಾನ್ ಪ್ರಾಂತ್ಯದ ಖಾಸಗಿ ವಿಶ್ರಾಂತಿ ಗೃಹದಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ 38 ಮಂದಿ ಮೃತಪಟ್ಟಿದ್ದಾರೆ.ಸೋಮವಾರ ಮಧ್ಯರಾತ್ರಿ ಕೇಂದ್ರ ಚೀನಾದ ಹೆನಾನ್ ಪ್ರಾಂತ್ಯದ ಪಿಂಗ್ ಡಿಂಗ್ ಶಾನ್ ನಗರದ ಖಾಸಗಿ ವಿಶ್ರಾಂತಿ ಗೃಹ ಕೆಂಗ್ಲೆಯುವಾನ್‌ನಲ್ಲಿ ಭಾರಿ ಬೆಂಕಿ ಅನಾಹುತ ಸಂಭವಿಸಿದೆ.ಇದರಲ್ಲಿ 38 ಮಂದಿ ಮೃತಪಟ್ಟು, ಆರು ಮಂದಿ ತೀವ್ರ ಗಾಯಗೊಂಡಿದ್ದಾರೆ ಎಂದು ಚೀನಾ ಸರ್ಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ಜಿನ್ಹುಲಾ ಹೇಳಿದೆ.

china_fire_agehome_2

ಸದ್ಯಕ್ಕೆ ಬೆಂಕಿ ಅನಾಹುತಕ್ಕೆ ಕಾರಣ ಗೊತ್ತಾಗಿಲ್ಲ. ಪರಿಹಾರ ಕಾರ್ಯ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

Write A Comment