ಕನ್ನಡ ವಾರ್ತೆಗಳು

ಅಬ್ಬಾ..ಮಹಾತಾಯಿ..! ರೈಲ್ವೆ ನಿಲ್ದಾಣದ ಶೌಚಾಲಯದಲ್ಲಿ ಗಂಡು ಮಗುವಿಗೆ ಜನ್ಮ..!

Pinterest LinkedIn Tumblr

ಉಡುಪಿ : ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣದ ಶೌಚಾಲಯದಲ್ಲಿ ಮಹಿಳೆಯೊಬ್ಬಳು ಗಂಡು ಮಗುವನ್ನು ಹೆತ್ತ ಘಟನೆ ಮಂಗಳವಾರ ನಡೆದಿದೆ.

Udp_Railway_child Udp_Railway_child (1) Udp_Railway_child (2) Udp_Railway_child (3)

ಆಕೆ ವಿಜಯಾ (36). ಕುಮಟಾದ ಕಿಮಾನಿ ಗ್ರಾಮದವರಾದ ಇವರು ರಾಜು ಎನ್ನುವವರ ಪತ್ನಿ. ಪತಿ ರಾಜು ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದಾರೆ. ಕಾರವಾರದಿಂದ ಉಡುಪಿಗೆ ರೈಲಿನಲ್ಲಿ ಮಂಗಳವಾರ ಬೆಳಗ್ಗೆ ಬಂದಿದ್ದರು. ತುಂಬು ಗರ್ಬಿಣಿಯಾಗಿದ್ದ ಇವರನ್ನು ಕಂಡು ರೈಲ್ವೆ ಸಿಬಂದಿ ಅಂಬಲಪಾಡಿ ವಿಶಾಲ್ ಶೆಟ್ಟಿ ಮತ್ತು 108 ಆಂಬುಬುಲೆನ್ಸ್‌ನವರಿಗೆ ದೂರವಾಣಿ ಕರೆ ನೀಡಿದರು. ವಿಶಾಲ್ ಶೆಟ್ಟಿಯವರು ಬರುವಾಗ ರೈಲ್ವೆ ನಿಲ್ದಾಣದ ವಿಶ್ರಾಂತಿಗೃಹದ ಶೌಚಾಲಯದಲ್ಲಿ ಹೆರಿಗೆ ಆಗಿತ್ತು. ಸ್ಥಳೀಯ ಮಹಿಳೆಯೋರ್ವರ ಸಹಕಾರದಿಂದ ಆಕೆಯನ್ನು ನಾಜೂಕಾಗಿ 108 ಆಂಬುಲೆನ್ಸ್‌ನಲ್ಲಿ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಯಿತು.

ತಾಯಿ ಮಗುವನ್ನು ಪರೀಕ್ಷಿಸಿದ ವೈದ್ಯರು ಮಗು 2.5 ಕೆ.ಜಿ. ತೂಕವಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆಂದು ಮಾಹಿತಿ ನೀಡಿದ್ದಾರೆ.

ಗಂಡನಿಗೆ ದೂರವಾಣಿ ಕರೆಯಲ್ಲಿ ವಿಶು ಶೆಟ್ಟಿಯವರು ವಿಷಯ ತಿಳಿಸಿದ್ದು ಬುಧವಾರ ಆಸ್ಪತ್ರೆಗೆ ಬರುವುದಾಗಿ ತಿಳಿಸಿದರು.

Write A Comment