ಕನ್ನಡ ವಾರ್ತೆಗಳು

ಚೈಲ್ಡ್‌ಲೈನ್-1098 ವತಿಯಿಂದ ಮಕ್ಕಳ ಬೇಸಿಗೆ ಶಿಬಿರ

Pinterest LinkedIn Tumblr

child_line_workshop_1

ಮಂಗಳೂರು,ಮೇ.26 :  ಮಕ್ಕಳ ಹಕ್ಕುಗಳ ರಕ್ಷಣೆಗಾಗಿ, ದೂರವಾಣಿ ಮೂಲಕ ಸೇವೆಯನ್ನು ನೀಡುತ್ತಿರುವ, ಚೈಲ್ಡ್‌ಲೈನ್-1098 ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಚೈಲ್ಡ್‌ಲೈನ್-1098 ಕುರಿತು ಮಾಹಿತಿ ಕಾರ್ಯಕ್ರಮವನ್ನು ಜಪ್ಪಿನಮೊಗರು ಲಯನ್ಸ್ ಕ್ಲಬ್ ಸಬಾಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ ಇದರ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಇವರ ವತಿಯಿಂದ ನಡೆಯಿತು.

child_line_workshop_2

ಚೈಲ್ಡ್‌ಲೈನ್ ಮಂಗಳೂರು-1098ರ ಕೇಂದ್ರ ಸಂಯೋಜನಾಧಿಕಾರಿಯಾದ ಶ್ರೀ.ಸಂಪತ್ ಕಟ್ಟಿರವರು ಮಕ್ಕಳಿಗೆ, ಮಕ್ಕಳ ಹಕ್ಕುಗಳ ಬಗ್ಗೆ ಹಾಗೂ ಚೈಲ್ಡ್‌ಲೈನ್-1098ರ ಕುರಿತು ಹಾಗೂ ಚೈಲ್ಡ್‌ಲೈನ್-1098ರ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ತೊಂದರೆಯಲ್ಲಿರುವ ಮಕ್ಕಳ ರಕ್ಷಣೆಗಾಗಿ ಸಾರ್ವಜನಿಕರು ಹಾಗೂ ಮಕ್ಕಳು, ಚೈಲ್ಡ್‌ಲೈನ್-1098 ದೂರವಾಣಿ ಕರೆಯನ್ನು ಮಾಡಿ ದೂರು ನೀಡಬಹುದು, ಚೈಲ್ಡ್‌ಲೈನ್-1098ದಿನದ 24 ಗಂಟೆಯೂ ಕಾರ್ಯನಿರತವಾಗಿರುತ್ತದೆ ಮತ್ತ ಇದು ಉಚಿತ ದೂರವಾಣಿ ಸಂಖ್ಯೆಯಾಗಿರುತ್ತದೆ ಎಂದ ಅವರು, ಮಕ್ಕಳ ಸಹಾಯವಾಣಿಯ ಕಾರ್ಯಚಟುವಟಿಕೆಯನ್ನು ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಪ್ರಮುಖ ಅಂಶಗಳನ್ನು ವಿವರಿಸಿದರು. ಮಾಹಿತಿ ಕಾರ್ಯಕ್ರಮದ ಕೊನೆಯಲ್ಲಿ ಮಕ್ಕಳಿಂದ ಲೈಲ್ಡ್‌ಲೈನ್ -1098 ಕ್ಕೆ ಕರೆ ಮಾಡಿಸಿ ಪ್ರಾತ್ಯಕ್ಷಿಕೆಯನ್ನು ನೀಡುವುದರ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಚೈಲ್ಡ್‌ಲೈನ್ ಮಂಗಳೂರು-1098 ರ ತಂಡ ಸದಸ್ಯೆ ಶ್ರೀಮತಿ.ಅಸುಂತ ಡಿ’ಸೋಜ, ನಗರ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಶ್ರೀಮತಿ.ಗುಲಾಬಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಶ್ರೀ.ವಜಿರ್ ಅಹಮದ್ ಹಾಗೂ ಕು.ವನಿತ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 60ಕ್ಕೂ ಹೆಚ್ಚು ಮಕ್ಕಳು ಬಾಗವಹಿಸಿದ್ದರು.

Write A Comment