ಕನ್ನಡ ವಾರ್ತೆಗಳು

ಕಾನೂನು ಬಾಹಿರ ಡೊನೇಷನ್ ಹಾವಳಿ ವಿರುದ್ಧ ಪೋಷಕರ ಪ್ರತಿಭಟನೆ.

Pinterest LinkedIn Tumblr

Donation_agant_protest_1

ಮಂಗಳೂರು,ಮೇ.26:  ಜಿಲ್ಲೆಯ ವಿವಿಧೆಡೆ ಕೆಲ ಶಾಲೆಗಳಲ್ಲಿ ಕಾನೂನು ಬಾಹಿರವಾಗಿ ಡೊನೇಷನ್ ಪಡೆಯುತ್ತಿದ್ದಾರೆಂದು ಆರೋಪಿಸಿ ಮಕ್ಕಳ ಹಕ್ಕು ಹೋರಾಟಗಾರ ಮತ್ತು ಪೋಷಕರ ಸಂಘದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭ ಮಕ್ಕಳ ಹಕ್ಕು ಹೋರಾಟಗಾರ ಮತ್ತು ಪೋಷಕ ಸಂಘದ ಅಧ್ಯಕ್ಷ ದಿನೇಶ್ ಹೆಗ್ಡೆ ಉಳೆಪಾಡಿ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಸರ್ಕಾರಿ ಆದೇಶಗಳಿಗೆ ಯಾವುದೇ ಬೆಲೆ ನೀಡದೆ ತಮ್ಮಿಷ್ಟದಂತೆ ಡೊನೇಷನ್ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ವಸೂಲು ಮಾಡುತ್ತಿವೆ.ಇದರಿಂದಾಗಿ ವಿದ್ಯಾರ್ಥಿಗಳು, ಪೋಷಕರು ಶಾಲಾ ಶುಲ್ಕ ಕಟ್ಟಲು ಕಷ್ಟ ಪಡುವಂತಾಗಿದೆ ಎಂದರು.

Donation_agant_protest_2 Donation_agant_protest_3 Donation_agant_protest_4 Donation_agant_protest_5 Donation_agant_protest_6 Donation_agant_protest_7 Donation_agant_protest_8 Donation_agant_protest_9 Donation_agant_protest_10

ಈ ಬಗ್ಗೆ ಶಿಕ್ಷಣ ಇಲಾಖೆಗೆ ಮಾಹಿತಿಯಿದ್ದರೂ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಸುಮ್ಮನಿದೆ ಎಂದು ಆರೋಪಿಸಿದ ಅವರು, ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ಶುಲ್ಕ ವಸೂಲು ಮಾಡುವ ಶಾಲೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಸ್‍ಎಫ್‍ಐ ಜಿಲ್ಲಾ ಅಧ್ಯಕ್ಷ ನಿತಿನ್ ಕುತ್ತಾರ್, ಸಂಘದ ಸದಸ್ಯರಾದ ರಾಮದಾಸ್, ಅಕ್ಷತಾ ಶೆಟ್ಟಿ, ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.

Write A Comment