ಮಂಗಳೂರು,ಮೇ.20 : ನಗರದ ಸ್ಟೇಟ್ ಬ್ಯಾಂಕ್ ಬಳಿ ರಾಜ್ಯ ಸರ್ಕಾರಿ ನೌಕರರ ಸಂಘದ ಕಟ್ಟಡದಲ್ಲಿ ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯ ಅಬಕಾರಿ ರಕ್ಷಕರ ಹಾಗೂ ಮುಖ್ಯ ರಕ್ಷಕರ ಸಂಘದ ನೂತನ ಕಚೇರಿಯನ್ನು ದ.ಕ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಉದ್ಘಾಟಿಸಿ ಸರಕಾರಿ ಸಿಬ್ಬಂದಿಗಳ ಸೇವೆ ಕಷ್ಟಕರವಾದದ್ದು ಅಂತಹ ಸಂದರ್ಭದಲ್ಲೂ ಅಬಕಾರಿ ಇಲಾಖೆಯ ರಕ್ಷಕರು ಕಚೇರಿ ತೆರೆದಿರುವುದು ಶ್ಲಾಘನೀಯ ಎಂದು ಹೇಳಿದರು. ಈ ಸಂಧರ್ಭದಲ್ಲಿ ಜಿಲ್ಲೆಯ ಅಬಕಾರಿ ಇಲಾಖೆ ಉಪ ಆಯುಕ್ತರಾದ ಜಾರ್ಜ್ ಪಿಂಟೋ ಅವರನ್ನು ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಸನ್ಮಾನಿಸಿದರು.
ವೇದಿಕೆಯಲ್ಲಿ ಎ.ಜೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಎ.ಜೆ. ಶೆಟ್ಟಿ, ಶ್ರೀ ದೇವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ಮಂಗಳೂರು ವಿಭಾಗದ ಅಬಕಾರಿಯ ಜಾರಿ ಮತ್ತು ತನಿಖೆಯ ಜಂಟಿ ಆಯುಕ್ತ ಎಸ್.ಎಲ್.ರಾಜೇಂದ್ರಪ್ರಸಾದ್, ಅಬಕಾರಿ ರಕ್ಷಕರು ಮತ್ತು ಮುಖ್ಯ ರಕ್ಷಕರ ಸಂಘದ ಅಧ್ಯಕ್ಷ ಜಯಪ್ಪ ಲಮಾಣಿ, ಅಬಕಾರಿ ರಕ್ಷಕರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಸತೀಶ್ ಕುಮಾರ್ ಕುದ್ರೋಳಿ ಸಂಘದ ಕಾರ್ಯದರ್ಶಿ ಪ್ರಕಾಶ್ ನಾಯಕ್, ಪ್ರಮುಖರಾದ ಭೀಮಪ್ಪ, ಬೆಂಗಳೂರು ಘಟಕದ ಅಧ್ಯಕ್ಷ ಮಾದೇಶ್ ಉಪಸ್ಥಿತರಿದ್ದರು.








