ಕುಂದಾಪುರ: ತೀರಾ ಕುಗ್ರಾಮವಾದ ಉಪ್ಪಿನಕುದ್ರುವಿನ ಕೃಷಿಕ ದಂಪತಿಗಳ ಪುತ್ರಿ ಮಹಾಲಕ್ಷ್ಮಿ 558 ಅಂಕಗಳನ್ನು ಪಡೆಯುವ ಮೂಲಕ ಕಲಾ ವಿಭಾಗದಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಮಹಾಲಕ್ಷ್ಮಿ ಕಲಾ ವಿಭಾಗದಲ್ಲಿ ಓದುತ್ತಿರುವ ಪ್ರತಿಭಾವಂತ ವಿದ್ಯಾರ್ಥಿ.
ಎಸ್.ಎಸ್.ಎಲ್.ಸಿಯಲ್ಲಿ ೯೪% ಶೇಕಡಾ ಅಂಕ ಇದ್ದರು ಸಹ ವಿಜ್ಞಾನ ಮತ್ತು ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿಕೊಳ್ಳದೆ ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಂಡು ಐ.ಎ.ಎಸ್. ಮಾಡುವ ಮಹತ್ವಾಕಾಂಕ್ಷಿಯ ವಿದ್ಯಾರ್ಥಿ. ಅರ್ಥ ಶಾಸ್ತ್ರದಲ್ಲಿ ಎಂ.ಎ. ಮಾಡಿ ಅರ್ಥ ಶಾಸ್ತ್ರದಲ್ಲಿ ಸಂಶೋಧನೆ ಮುಂದುವರೆಸುವ ಇಚ್ಚೆಯುಳ್ಳದ್ದಾಗಿದೆ.
ಮಧ್ಯಮ ವರ್ಗದ ಕುಟುಂಬದಿಂದ ಬಂದ ಈಕೆ ಹೆತ್ತವರ ಜೊತೆ ಊರಿಗೆ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾಳೆ. ಪ್ರಾಂಶುಪಾಲರ, ಅಧ್ಯಾಪಕರ ಪ್ರೇರಣೆ ನನಗೆ ಸ್ಪೂರ್ತಿ ತಂದಿದೆ ಎಂದು ಆಕೆ ತನ್ನ ಅನಿಸಿಕೆ ಹೇಳಿಕೊಂಡಳು.