ಕನ್ನಡ ವಾರ್ತೆಗಳು

ಭೂಸ್ವಾಧೀನ ಸುಗ್ರೀವಾಜ್ಞೆ ವಿರೋಧಿಸಿ ಸಿಪಿಐ ಕಾರ್ಯಕರ್ತರಿಂದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ.

Pinterest LinkedIn Tumblr

Cpi_m_Protest_1

ಮಂಗಳೂರು, ಮೇ 15 : ಭೂಸ್ವಾಧೀನ ಸುಗ್ರೀವಾಜ್ಞೆ ವಿರುದ್ಧ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ರಾಷ್ಟ್ರವ್ಯಾಪಿ ನಡೆಸಲಾಗುವ ಪ್ರತಿಭಟನೆಯ ಭಾಗವಾಗಿ ಸಿಪಿಐ ದ.ಕ.ಜಿಲ್ಲಾ ಸಮಿತಿ ನೇತೃತ್ವದಲ್ಲಿ ಗುರುವಾರ ದ.ಕ. ಜಿಲ್ಲಾಧಿಕಾರಿ ಕಚೇರಿಗೆ ಕಾರ್ಯಕರ್ತರು ಮುತ್ತಿಗೆ ಹಾಕಿದರು. ಅದಕ್ಕೂ ಮೊದಲು ಕಾರ್ಯಕರ್ತರು ಪುರಭವನದಿಂದ ಮೆರವಣಿಗೆ ನಡೆಸಿದರು.

ರೈತರ ಭೂಮಿಯನ್ನು ಅತೀ ಕಡಿಮೆ ಬೆಲೆಗೆ ಖರೀದಿಸಲು ಕೇಂದ್ರ ಸರಕಾರ ಈ ಸುಗ್ರೀವಾಜ್ಞೆ ಹೊರಡಿಸಿದೆ. ಇದರ ವಿರುದ್ಧ ಪ್ರಬಲ ಹೋರಾಟ ಮಾಡದಿದ್ದರೆ ದೇಶದ ರೈತರ ಸ್ಥಿತಿ ಶೋಚನೀಯವಾಗಲಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

Cpi_m_Protest_2 Cpi_m_Protest_3 Cpi_m_Protest_4 Cpi_m_Protest_5 Cpi_m_Protest_6 Cpi_m_Protest_7 Cpi_m_Protest_8 Cpi_m_Protest_9 Cpi_m_Protest_10

ಪ್ರತಿಭಟನಕಾರರನ್ನು ಉದ್ದೇಶಿಸಿ ಪಕ್ಷದ ಮುಖಂಡರಾದ ವಿ.ಕುಕ್ಯಾನ್, ವಿ.ಎಸ್. ಬೇರಿಂಜ ಮಾತನಾಡಿದರು. ಪ್ರತಿಭಟನೆಯ ನೇತೃತ್ವವನ್ನು ಬಿ.ಕೆ.ಕೃಷ್ಣಪ್ಪ, ಎಚ್. ವಿ.ರಾವ್, ಎಂ.ಕರುಣಾಕರ್, ಸುಧಾಕರ್ ಕೆ., ತಿಮ್ಮಪ್ಪ, ಡಿ.ಭುಜಂಗ, ಎಂ.ಶಿವಪ್ಪ ಕೋಟ್ಯಾನ್, ಚಿತ್ರಾಕ್ಷಿ, ವೀರಮ್ಮ, ವಸಂತಿ ಶೆಟ್ಟಿ, ಶಶಿಕಲ, ಕಲ್ಯಾಣಿ, ಸೀತಾ ಸಾಲ್ಯಾನ್, ಹೈರುನ್ನಿಸಾ, ಮೇರಿ ಡಿಸೋಜ, ರೂಪಾ ದೇವದಾಸ್ ವಹಿಸಿದ್ದರು.

Write A Comment