ಕನ್ನಡ ವಾರ್ತೆಗಳು

CMSS ಯೋಜನೆಯಡಿ 300 ಕೋಟಿ ವೆಚ್ಚದ ಕಳಪೆ ಗುಣಮಟ್ಟದ ಕಾಂಡೋಮ್‌ ಪೂರೈಕೆ ಹಗರಣ  ಪತ್ತೆ.

Pinterest LinkedIn Tumblr

Condom_septurm_photo

ನವದೆಹಲಿ,ಮೇ.07 : ಭಾರತದಲ್ಲಿ ಯೋಜನೆಗಳಿಗೂ ಹಾಗೂ ಹಗರಣಗಳಿಗೂ ಗಳಸ್ಯ ನಂಟಸ್ಯ ಸಂಬಂಧ. ನೆಹರು ಕಾಲದ ಜೀಪು ಖರೀದಿ ಹಗರಣದಿಂದ ಆರಂಭವಾಗಿ ಇತ್ತೀಚಿನ 2ಜಿ, ಕಲ್ಲಿದ್ದಲು ಹಗರಣಗಳವರೆಗೆ ನೂರಾರು ಹಗರಣಗಳು ನಡೆದಿವೆ. ಇವುಗಳ ಸಾಲಿಗೆ ಮತ್ತೊಂದು ಹಗರಣ ಸೇರ್ಪಡೆ ಆಗಿದೆ. ಅದು… ಕಾಂಡೋಮ್‌‌ಗಳ ಪೂರೈಕೆಯಲ್ಲಿ ಆದ ಹಗರಣ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಸ್ವಸ್ಥ ಹಾಗೂ ಸುಂದರ ಕುಟುಂಬ ಯೋಜನೆಯಲ್ಲಿ ಹಗರಣ ನಡೆದಿದೆ. ಕೇಂದ್ರ ಔಷಧ ಸೇವಾ ಸೊಸೈಟಿ (CMSS) ಕುಟುಂಬ ನಿಯಂತ್ರಣ ಯೋಜನೆಯಡಿ 300 ಕೋಟಿ ಮೊತ್ತದ ಕೆಟ್ಟ ಹಾಗೂ ಕಳಪೆ ಗುಣಮಟ್ಟ ಔಷಧಿಗಳನ್ನು ಮತ್ತು ಕಾಂಡೋಮ್‌ಗಳನ್ನು ಪೂರೈಕೆ ಮಾಡಿದ ಬಗ್ಗೆ ವರದಿಯಾಗಿದೆ.

ಬೇನಾಮಿ ಹೆಸರಿನಲ್ಲಿ ಮಧ್ಯವರ್ತಿಗಳ ಮೂಲಕ ಕಂಡ ಕಂಡವರು 300 ಕೋಟಿ ಮೊತ್ತದ ಕಾಂಡೋಮ್‌‌ ಸರಬರಾಜು ಟೆಂಡರ್‌ಗಳನ್ನು ಹಿಡಿದಿದ್ದಾರೆ. ಇವರಿಗೆ ಆರೋಗ್ಯ ಕ್ಷೇತ್ರದಲ್ಲಿ ಯಾವುದೇ ಹೇಳಿಕೊಳ್ಳುವಂಥ ಅನುಭವವಾಗಿಲಿ, ಅಥವಾ ಜ್ಞಾನವಾಗಲಿ ಇಲ್ಲ. ಇಂಥವರಿಂದ ಇನ್ನೆಂಥ ಕ್ವಾಲಿಟಿಯನ್ನು ನಿರೀಕ್ಷಿಸಬಹುದು ನೀವೇ ಯೋಚಿಸಿ. ಹೀಗಾಗಿ ಅವರು ಪೂರೈಕೆ ಮಾಡಿದ ಔಷಧಿ ಹಾಗೂ ಕಾಂಡೋಮ್‌ಗಳ ಗುಣಮಟ್ಟವನ್ನು ತಜ್ಞ ಡಾಕ್ಟರ್‌ಗಳು ಹಾಗೂ ಅಧಿಕಾರಿಗಳು ಪರೀಕ್ಷಿಸಿ, ತಪ್ಪನ್ನು ಕಂಡುಹಿಡಿದಿದ್ದಾರೆ.

ಆದರೆ ಈ ಆರೋಪಗಳ ಕುರಿತಂತೆ ಲಿಖಿತ ಹೇಳಿಕೆ ನೀಡಿರುವ ಸಿಎಂಎಸ್‌ಎಸ್‌‌, ಖರೀದಿ ಪ್ರಕ್ರಿಯೆಯಲ್ಲಿ ಯಾವುದೇ ತಪ್ಪುಗಳು ನಡೆದಿಲ್ಲ ಎಂದಿದೆ. ಮತ್ತೊಂದೆಡೆ ಕೇಂದ್ರ ಆರೋಗ್ಯ ಇಲಾಖೆ ಮಾತ್ರ ಈ ಕಳಪೆ ಔಷಧ ಪೂರೈಕೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಹಗರಣದ ಸಂಪೂರ್ಣ ತನಿಖೆಗೆ ಆದೇಶಿಸಿದೆ.

ಇದೀಗ ಬೆಳಕಿಗೆ ಬಂದಿರುವ ಕಾಂಡೋಮ್‌ ಹಗರಣದಲ್ಲಿ ಯಾವ್ಯಾವ ಏಜೆಂಟರಿಂದ 300 ಕೋಟಿ ಮೊತ್ತದ 700 ಮಿಲಿಯನ್‌ ಕಾಂಡೋಮ್‌‌ಗಳನ್ನು ಖರೀದಿಸಿದ್ದರೋ ಅವೆಲ್ಲವೂ ಕಳಪೆ ಗುಣಮಟ್ಟದ್ದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಷ್ಟೆಲ್ಲಾ ಆದಮೇಲೆ ಕೇಂದ್ರ ಸರ್ಕಾರ ಈ ಟೆಂಡರ್‌ ಪ್ರಕ್ರಿಯೆಯ ಕುರಿತಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಜೊತೆಯಲ್ಲಿ ಅವುಗಳ ಗುಣಮಟ್ಟ ಪರೀಕ್ಷೆ ನಡೆಸಿಯೇ ಕಾಂಡೋಮ್‌‌ಗಳನ್ನು ಖರೀಸಿದಬೇಕೆಂಬ ಎಚ್ಚರಿಕೆಯನ್ನೂ ಸಂಬಂಧಪಟ್ಟ ಇಲಾಖೆಗೆ ನೀಡಿದೆ.

ವಿಶೇಷ ಎಂದರೆ ಕೇಂದ್ರ ಆರೋಗ್ಯ ಇಲಾಖೆ ಕೆಲ ದಿನಗಳ ಹಿಂದೆ ಬಿಡುಗಡೆ ಮಾಡಿರುವ ಪ್ರಮುಖ ಔಷಧಿಗಳ ಪಟ್ಟಿಯಲ್ಲಿ ಕಾಂಡೋಮ್‌ ಅನ್ನೂ ಸೇರಿಸಿದೆ. ಹೀಗಾಗಿ ಕಾಂಡೊಮ್‌‌ಗಳೂ ಔಷಧಗಳ ಸ್ಥಾನ ಪಡೆದುಕೊಂಡಿದೆ.

Write A Comment