ಕನ್ನಡ ವಾರ್ತೆಗಳು

ಮಗಳ ಆಸೆಗೆ ತಾಯಿಯನ್ನೇ ಮಟಾಶ್ ಮಾಡಿದ ಕಟುಕ; ‘ಲಾಡ್ಜ್‌ನಲ್ಲಿ ಮರ್ಡರ್’-ಸುದ್ಧಿಗೋಷ್ಟಿಯಲ್ಲಿ ಘಟನೆ ವಿವರಿಸಿದ ಎಸ್ಪಿ

Pinterest LinkedIn Tumblr

ಕುಂದಾಪುರ : ಕಳೆದ ಎಂಟು ವರ್ಷಗಳಿಂದ ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆ ಎಂದು ವಿವಾಹಿತ ಮಗಳ ಜೊತೆಗಿನ ಸಂಬಂದವನ್ನು ಹೇಳಿಕೊಂಡಾಗ ನಿರಾಕರಿಸಿದ ತಾಯಿಯ ಕುತ್ತಿಗೆಗೆ ದಪ್ಪದ ವಯರ್ ಸುತ್ತಿ ಕೊಲೆಗೈದು ನಂತರ ಯಾರಿಗೂ ಗೊತ್ತಾಗಬಾರದು ಎನ್ನುವ ಕಾರಣಕ್ಕೆ ಟವೆಲ್ಲೊಂದನ್ನು ಆಕೆಯ ಕುತ್ತಿಗೆಗೆ ಸುತ್ತಿ., ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ, ಕೈಯಲ್ಲಿದ್ದ ಬಳೆಗಳನ್ನು ಅಪಹರಿಸಿ ನಾಪತ್ತೆಯಾಗಿದ್ದ, ಕುಂದಾಪುರ ಪೊಲೀಸರ ಸತತ ಕಾರ್ಯಚರಣೆ ಮೂಲಕ ಕಂಬಿ ಹಿಂದೆ ಹೋಗಲು ರೆಡಿ ಆಗಿದ್ದಾನೆ.

kundapura_Lodge_Crime (8)

Kundapura_Lodge_Murder (8) Kundapura_Lodge_Murder (10)

ಹೌದು ಈತನೇ ಕುಂದಾಪುರದ ಜೆ.ಕೆ. ಟವರ್‍ಸ್ ಲಾಡ್ಜ್‌ನಲ್ಲಿ ಗಂಗೊಳ್ಳಿ ನಿವಾಸಿ ಲಲಿತಾ ದೇವಾಡಿಗ ಅವರನ್ನು ಕೊಂದ ಕೊಲೆಗಡುಕ. ಇತನ ಹೆಸರು ಅಜರ್ ಫಝಲ್ ಖಾನ್ ಯಾನೆ ಅಜಯ್ ಬಾಬು ಹದಿನೆಂಟು ದಿನಗಳ ನಂತರ ಪೊಲೀಸರ ಅತಿಥಿಯಾಗಿ ನಿಂತಿದ್ದಾನೆ.

ಈತ ಮಾಡಿದ ಕ್ರೈಮ್ ಹೇಗಿತ್ತು ಎಂಬುದರ ಬಗ್ಗೆ ಉಡುಪಿ ಎಸ್ಪಿ ಕೆ. ಅಣ್ಣಾಮಲೈ ಹೇಳಿದ್ದು ಹೀಗೆ..

ಇಪ್ಪತ್ತು ವರ್ಷಗಳ ಹಿಂದೆ ಆರೋಪಿ ಅಝರ್ ಫಜಲ್ ಖಾನ್ ಹಾಗೂ ಲಲಿತಾ ದೇವಾಡಿಗರ ಮಗಳು ವೈಷ್ಣವಿ ಇಬ್ಬರೂ ಮುಂಬೈಯ ಎಂಬ್ರಾಯಿಡರಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಆಗಲೇ ಆತನಿಗೆ ವೈಷ್ಣವಿ ಜೊತೆಗೆ ಪ್ರೇಮಾಂಕುರವಾಗಿತ್ತು. ಆದರೆ ವೈಷ್ಣವಿಗೆ ಈ ಬಗ್ಗೆ ಏನೂ ತಿಳಿದಿರಲಿಲ್ಲ. ಹೀಗೇ ಸುಮಾರು ಹದಿನೈದು ವರ್ಷಗಳ ನಂತರ ಆತ ಬೇರೊಂದು ಕಂಪೆನಿಗೆ ಕೆಲಸಕ್ಕೆ ಸೇರುತ್ತಾನೆ. ಈ ಸಂದರ್ಬ ಇಬ್ಬರೂ ದೂರವಾಗುತ್ತಾರೆ. ಕಳೆ ಒಂದೂವರೆ ವರ್ಷಗಳ ನಂತರ ಮತ್ತೆ ಇಬ್ಬರಿಗೂ ಪರಿಚಯವಾಗುತ್ತದೆ. ಈ ಸಂದರ್ಭ ವೈಷ್ಣವಿಗೆ ಮರಾಠಿ ಮೂಲದ ವಿಜಯ ಎಂಬುವನ ಜೊತೆಗೆ ವಿವಾಹವಾಘಿದ್ದು, ಇಬ್ಬರು ಮಕ್ಕಳಾಗಿರುತ್ತದೆ. ಆಧರೂ ಆತ ಆಕೆಯನ್ನು ಓಲೈಸಿ ಮದುವೆಗೆ ಪ್ರಯತ್ನಿಸುತ್ತಾನೆ. ಆಧರೆ ವೈಷ್ಣವಿ ಈ ಬಗ್ಗೆ ಅಮ್ಮ ಒಪ್ಪಿದರೆ ಗಂಡನನ್ನು ಬಿಟ್ಟು ಬರುವುದಾಗಿ ಸೂಚಿಸುತ್ತಾಳೆ. ಇದೇ ಕಾರಣಕ್ಕಾಗಿ ಹಲವು ಬಾರಿ ಅಝರ್ ಗಂಗೊಳ್ಳಿಗೆ ಬಂದು ಹೋಗುವುದು ಮಾಡುತ್ತಾನೆ.

Kundapura_Lodge_Murder (9) Kundapura_Lodge_Murder (7) Kundapura_Lodge_Murder (6) Kundapura_Lodge_Murder (5) Kundapura_Lodge_Murder (4) Kundapura_Lodge_Murder (3) Kundapura_Lodge_Murder (2) Kundapura_Lodge_Murder (1) Kundapura_Lodge_Murder Kundapura_Lodge_Murder (12) Kundapura_Lodge_Murder (11)

ನಂತರ ಒಂದು ದಿನ ದೂರವಾಣಿಯಲ್ಲಿ ಮಗಳ ವಿವಾಹದ ಬಗ್ಗೆ ಮಾತುಕತೆ ನಡೆಸುತ್ತಾನೆ. ಆದರೆ ವೈಷ್ಣವಿ ತಾಯಿ ಲಲಿತಾ ದೇವಾಡಿಗ ಇದಕ್ಕೆ ಒಪ್ಪಿಗೆ ಸೂಚಿಸುವುದಿಲ್ಲ. ನಂತರ ಏಪ್ರಿಲ್ 5 ರಂದು ವೈಷ್ಣವಿಯೊಂದಿಗೆ ಮಾತುಕತೆ ನಡೆಸಿ ತಾಯಿಯನ್ನು ಒಪ್ಪಿಸಿ ಬರುವುದಾಗಿ ಹೇಳಿ ಕುಂದಾಪುರಕ್ಕೆ ಬರುತ್ತಾನೆ. ಇದೇ ಸಂದರ್ಬ ಗಂಗೊಳ್ಳಿಯ ಶ್ರೀ ಜಟ್ಟಿಗೇಶ್ವರ ದೇವಸ್ಥಾನಕ್ಕೆ ಒಂದೂವರೆ ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ತಿಳಿಸಿರುತ್ತಾನೆ. ಏಪ್ರಿಲ್ ಏಳರಂದು ಕುಂದಾಪುರದ ಹೃದಯ ಭಾಗದಲ್ಲಿರುವ ವಸತಿಗೃಹವೊಂದರಲ್ಲಿ ಕೋಣೆಯನ್ನು ಬಾಡಿಗೆ ಪಡೆದು ಏಪ್ರಿಲ್ ೧೫ರಂದು ಲಲಿತಾ ದೇವಾಡಿಗರನ್ನು ವಸತಿ ಗೃಹಕ್ಕೆ ದೇವಸ್ಥಾನಕ್ಕೆ ದೇಣಿಗೆ ನೀಡುವ ಹಣವನ್ನು ಕೊಡುವುದಾಗಿ ಹೇಳಿ ಕರೆತರುತ್ತಾನೆ. ಅಲ್ಲಿ ಮಧ್ಯಾಹ್ನ ಊಟ ಮುಗಿಸಿ ಮತ್ತೆ ಮದುವೆಯ ವಿಚಾರ ಪ್ರಸ್ತಾಪ ಮಾಡುತ್ತಾನೆ. ಆದರೆ ಆ ಸಂದರ್ಭ ಆಕೆ ವಿರೋಧ ವ್ಯಕ್ತಪಡಿಸಿದ್ದ ಕಾರಣ ಮಾತಿಗೆ ಮಾತು ಬೆಳೆದು ಆರೋಪಿ ತಾನು ತಂದಿದ್ದ ವಯರ್‌ನ್ನು ಆಕೆಯ ಕುತ್ತಿಗೆಗೆ ಸುತ್ತಿ ಕೊಲೆ ಮಾಡುತ್ತಾನೆ. ಅಷ್ಟು ಹೊತ್ತಿಗಾಗಲೇ ರೂಂ ಬಾಯ್ ಬಂದಾಗ ಗಾಬರಿಗೊಂಡ ಆರೋಪಿ ಆಕೆಯ ಕುತ್ತಿಗೆಗೆ ಗಾಯ ತೋರದಂತೆ ಟವೆಲ್ಲೊಂದನ್ನು ಕಟ್ಟುತ್ತಾನೆ ಮತ್ತು ತಾನು ತಂದಿದ್ದ ವಯರನ್ನು ಕಿಟಕಿಯ ಮೂಲಕ ಎಸೆಯುತ್ತಾನೆ. ಮತ್ತು ಆಕೆ ಧರಿಸಿದ್ದ ಸಿನ್ನದ ಸರ ಹಾಗೂ ಬಳೆಯನ್ನು ಅಪಹರಿಸಿ ಮುಂಬೈಗೆ ಪರಾರಿಯಾಗುತ್ತಾನೆ.

ಈ ನಡುವೆ ಸಮೀಪದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಸಹಾಯ ಪಡೆದು ಕನ್ನಡದಲ್ಲಿ ಕೊಲೆಗೀಡಾದ ಲಲಿತಾ ದೇವಾಡಿಗರ ಹೆಸರಿನಲ್ಲಿ ಆತ್ಮಹತ್ಯೆ ಪತ್ರವೊಂದನ್ನು ಸಿದ್ಧಪಡಿಸಿ ಮುಂಬೈಗೆ ಕೊಂಡೊಯ್ಯುತ್ತಾನೆ. ಅಲ್ಲಿ ಚಿನ್ನದ ಸರ ಹಾಗೂ ಬಳೆಗಳನ್ನು ಮಾರಾಟ ಮಾಡಿ ನಲ್ವತ್ತೊ ಸಾವಿರ ರೂಪಾಯಿ ಪಡೆದು ಆತ್ಮಹತ್ಯೆ ಪತ್ರವನ್ನು ವೈಷ್ಣವಿಗೆ ತೋರಿಸಿ ಆಕೆಯೊಂದಿಗೆ ಇಬ್ಬರು ಮಕ್ಕಳ ಸಹಿತ ಗುಜರಾತ್‌ನ ಅಹಮ್ಮದಾಬಾದ್‌ನಲ್ಲಿರು ಸನ್ಮಾನ ಎನ್ನುವ ಲಾಡ್ಜ್‌ನಲ್ಲಿ ಉಳಿದುಕೊಳ್ಳುತ್ತಾರೆ.

ಡಿವೈ‌ಎಸ್ಪಿ ಕಚೇರಿಯಲ್ಲಿ ಸುದ್ಧಿ ಗೋಷ್ಟಿಯಲ್ಲಿ ಮಾತನಾಡಿದ ಸಂದರ್ಭ ಆರೋಪಿ ಅಝರ್ ಪಝಲ್ ಖಾನ್ ಹಾಗೂ ಆತನಿಗೆ ರಕ್ಷಣೆ ನೀಡಿದ ಆರೋಪದಲ್ಲಿ ವೈಷ್ಣವಿ ಯಾನೇ ಶೋಭಾಳನ್ನು ಪತ್ರಕರ್ತರ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿ ಅಝರ್ ವಿರುದ್ಧ ಕೊಲೆ ಹಾಗೂ ಸುಲಿಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವೈಷ್ಣವಿ ವಿರುದ್ಧ ಆರೋಪಿಗೆ ಬೆಂಬಲ ನೀಡಿರುವುದರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪೊಲೀಸರಿಗೆ ಬಹುಮಾನ : ಕಳೆದ ಹದಿನೈದು ದಿನಗಳಿಂದ ಆರೋಪಿಯ ಬಂಧನಕ್ಕೆ ಬಲೆ ಬೀಸಿ ಆರೋಪಿ ಬಂಧಿಸುವಲ್ಲಿ ಕೆಲಸ ಮಾಡಿದ ಪೊಲೀಸ್ ತಂಡಕ್ಕೆ ತಲಾ ಐದು ಸಾವಿರ ರೂಪಾಯಿಗಳ ಬಹುಮಾನ ನೀಡುವ ಬಗ್ಗೆ ಮೇಲಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದವರು ಹೇಳಿದರು.

ಕಾರ್ಯಾಚರಣೆ ಹೀಗಿತ್ತು: ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆ ನಿವಾಸಿ ಲಲಿತಾ ದೇವಾಡಿಗರ ನಿಗೂಢ ಸಾವನ್ನು ಕೊಲೆ ಪ್ರಕರಣವೆಂದು ಮನೆಯವರು ನೀಡಿದ ದೂರಿನ ಆಧಾರದಲ್ಲಿ ಕುಂದಾಪುರ ಪೊಲೀಸರು ಆರೋಪಿಯ ಪತ್ತೆಗಾಗಿ ಎರಡೆರಡು ತಂಡಗಳಲ್ಲಿ ಮುಂಬೈ ಹಾಗೂ ಅಹಮದಾಬಾದ್‌ನಲ್ಲಿ ಶೋಧ ನಡೆಸಿದ್ದರಾದರೂ ಆರೋಪಿ ಅಝರ್ ಫಝಲ್ ಖಾನ್ ಯಾನೇ ಅಜಯ್‌ಬಾಬುವನ್ನು ಹಾಗೂ ವೃದ್ಧೆಯ ಮಗಳು ಶೋಭಾ ಯಾನೇ ವೈಷ್ಣವಿಯನ್ನು ವಾರ ಕಳೆದರೂ ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ.

ಆರೋಪಿ ಮುಂಬೈಗೆ ತರಳಿರುವ ಬಗ್ಗೆ ಕುಂದಾಪುರ ಪೊಲೀಸರಿಗೆ ಮಾಹಿತಿ ಲಭಿಸಿದ ಕೂಡಲೇ ಒಂದು ತಂಡ ಮುಂಬೈಗೆ ಪ್ರಯಾಣಿಸಿತ್ತು. ಆಧರೆ ಅದಾಗಲೇ ಆರೋಪಿ ಅಝರ್, ಆತನ ಪ್ರೇಯಸಿ ಕೊಲೆಯಾದ ಲಲಿತಾ ದೇವಾಡಿರ ಮಗಳು ವೈಷ್ಣವಿಯೊಂದಿಗೆ ಅಹಮದಾಬಾದ್‌ಗೆ ತೆರಳಿರುವ ಬಗ್ಗೆ ಮಾಹಿತಿ ಪಡೆದು ಅಹಮದಾಬಾದ್‌ಗೆ ನಡೆದಿತ್ತು. ಅಷ್ಟು ಹೊತ್ತಿಗಾಗಲೇ ಅಝರ್ ಹಾಗೂ ವೈಷ್ಣವಿ ಮಕ್ಕಳನ್ನು ಬಿಡಲು ಮುಂಬೈಗೆ ಬಂದಿದ್ದರು. ಪುನಃ ಪೊಲೀಸರು ಮುಂಬೈಗೆ ಬಂದಾಗ ಅವರು ಅಲ್ಲಿಂದ ತಪ್ಪಿಸಿಕೊಂಡಿದ್ದರು.

ಕಳೆದ ಎಂಟು ವರ್ಷಗಳ ಹಿಂದೆ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕಿದ್ದ ಆರೋಪಿ ಅಝರ್ ಅಂಗಡಿಯಿಂದ ಒಂದೂವರೆ ಲಕ್ಷ ರೂಪಾಯಿ ಲಪಟಾಯಿಸಿ ನಾಪತ್ತೆಯಾಗಿದ್ದ ಎಂದು ತನಿಖೆಯ ವೇಳೆ ತಿಳಿದು ಬಂದಿದೆ. ಅಲ್ಲದೇ ಆತ ಎಲ್ಲೆಡೆಯಲ್ಲಿಯೂ ತಾನು ಶ್ರೀಮಂತ ಎಂದು ನಂಬಿಸಿದ್ದನಾದರೂ ಆತನೊಬ್ಬ ಕ್ರಿಮಿನಲ್ ಎಂಬುದಾಗಿ ತಿಳಿದು ಬಂದಿದೆ. ಕೊಲೆಗೀಡಾದ ಲಲಿತಾ ದೇವಾಡಿಗರೂ ಲಾಡ್ಜ್‌ಗೆ ಬಂದಿದ್ದಾಗ ಸುಮಾರು ಹನ್ನೆರಡು ಪವನ್ ಬಂಗಾರದ ಸರ ಧರಿಸಿದ್ದು, ಕೈಬಳೆ ಧರಿಸಿದ್ದರು. ಅದನ್ನು ಲಪಟಾಯಿಸಿ ಮುಂಬೈಯ ಅಂಗಡಿಯೊಂದರಲ್ಲಿ ಮಾರಿದ್ದಾನೆ ಎಂಬುದಾಗಿಯೂ ತಿಳಿದು ಬಂದಿದೆ. ಅಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಆರೋಪಿ ಅಝರ್ ಹಾಗೂ ವೈಷ್ಣವಿಗೆ ಪರಿಚಿತವಿರುವ ಮಹಿಳೆಯೊಬ್ಬಳು ವೈಷ್ಣವಿ ಮನೆಯಿಂದ ಹೊರಟ ರಾತ್ರಿ ಆಕೆಗೆ ಹಾಗೂ ಮಕ್ಕಳಿಗೆ ಉಳಿದುಕೊಳ್ಳಲು ಮನೆಯಲ್ಲಿಯೇ ಅವಕಾಶ ನೀಡಿರುವುದು ಬೆಳಕಿಗೆ ಬಂದಿತ್ತು.

ಆಕೆಯನ್ನೇ ಅಸ್ತ್ರವನ್ನಾಗಿ ಬಳಸಿಕೊಂಡ ಪೊಲೀಸರು ಆಕೆಯನ್ನು ನಾಪತ್ತೆಯಾಧವರ ಜೊತೆ ಸಂಪರ್ಕದಲ್ಲಿರುವಂತೆ ತಾಕೀತು ಮಾಡಿದ್ದರು. ಈ ನಡುವೆ ವೈಷ್ಣವಿ ಇನ್ನೊಂದು ಮೊಬೈಲ್ ಬಳಸುತ್ತಿದ್ದು, ಅದನ್ನು ರೀಚಾರ್ಜ್ ಮಾಡಿದ ನಂತರ ಸಹಾಯ ಮಾಡಿದ ಮಹಿಳೆಗೆ ವೈಷ್ಣವಿ ಕರೆ ಮಾಡಿದ್ದು, ಮೂವತ್ತು ಸಾವಿರ ರೂಪಾಯಿ ಹೊಂದಿಸಿಕೊಡುವಂತೆ ಕೋರಿಕೊಂಡಿದ್ದಳು. ಇದನ್ನೇ ಬಳಸಿಕೊಂಡ ಪೊಲೀಸರು ಆರೋಪಿಗಳು ಮುಂಬೈಗೆ ಆಗಮಿಸುತ್ತಿದ್ದಂತೆ ವಶಕ್ಕೆ ಪಡೆದುಕೊಂಡಿದ್ದು, ಭಾನುವಾರ ಸಂಜೆ ಆರೋಪಿಗಳನ್ನು ಕುಂದಾಪುರ ಠಾಣೆಗೆ ಕರೆತಂದಿದ್ದಾರೆ.

ಇತ ಎ.6 ರಂದು ಮುಂಬೈಯಿಂದ ಕುಂದಾಪುರಕ್ಕೆ ಬಂದಿದ್ದ. ಕುಂದಾಪುರ ಲಾಡ್ಜ್‌ನಲ್ಲಿ ಉಳಿದಿದ್ದ ಈತ ತನ್ನ ಬ್ಯಾಗ್‌ನಲ್ಲಿ ದಪ್ಪನೆಯ ವಯರ್ ಹಿಡಿದು ಬಂದಿದ್ದ. ಆತನ ಉದ್ದೇಶ ಕೊಲೆ ಮಾಡೋದೇ ಆಗಿತ್ತು ಎಂಬುದು ಇದ್ರಲ್ಲೆ ತಿಳಿಯುತ್ತೆ.

ಕಳೆದ ಹದಿನೆಂಟು ದಿನಗಳಿಂದ ನಾಪತ್ತೆಯಾಗಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿ ಅಝರ್ ಮತ್ತು ವೈಷ್ಣವಿ ಬಂಧನಕ್ಕೆ ಕುಂದಾಪುರದ ಡಿವೈ‌ಎಸ್ಪಿ ಎಂ. ಮಂಜುನಾಥ ಶೆಟ್ಟಿ ಮಾರ್ಗದರ್ಶನದಲ್ಲಿ ಜಾಲ ಬೀಸಿದ್ದ ವೃತ್ತ ನಿರೀಕ್ಷಕ ಪಿ.ಎಂ ದಿವಾಕರ ಹಾಗೂ ಕುಂದಾಪುರ ಉಪನಿರೀಕ್ಷಕ ನಾಸೀರ್ ಹುಸೇನ್ ನಿರಂತರವಾಗಿ ಕಾರ್ಯಾಚರಣೆ ನಡೆಸಿದ್ದರು. ಕಳೆದ ಒಂದು ವಾರದಿಂದ ಉಪ ನಿರೀಕ್ಷಕ ನಾಸೀರ್ ಹುಸೇನ್ ಸಂಪೂರ್ಣವಾಗಿ ಆರೋಪಿಗಳ ಪತ್ತೆಗಾಗಿ ಜಾಲ ರೂಪಿಸುವ ಮೂಲಕ ಲಲಿತಾ ದೇವಾಡಿಗ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Write A Comment