ಅಂತರಾಷ್ಟ್ರೀಯ

ನಿದ್ದೆ ಬಾರದೇ ಇದ್ದವರಿಗೆ ನೋವು ಸಹಿಸುವ ಶಕ್ತಿ ಕಡಿಮೆ!

Pinterest LinkedIn Tumblr

sleep

ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎಂಬ ಗಾದೆ ಮಾತೇ ಇದೆ. ಆದರೆ, ಇಂದಿನ ಒತ್ತಡದ ಯುಗದಲ್ಲಿ ನಿದ್ರಾಹೀತನೆ ಅನೇಕರನ್ನು ಕಾಡುತ್ತಿದೆ. ಏನೇ ಮಾಡಿದರೂ ಕಣ್ಣುಗಳು ನಿದ್ದೆಗೆ ಜಾರುವುದೇ ಇಲ್ಲ. ಹೀಗೆ ನಿದ್ದೆ ಸರಿಯಾಗಿ ಬಾರದೇ ಕನವರಿಸುವವರಿಗೆ ನೋವನ್ನು ತಡೆದುಕೊಳ್ಳುವ ಶಕ್ತಿಯೂ ಕಡಿಮೆ. ಹಾಯಾಗಿ ನಿದ್ದೆ ಮಾಡುವವರು ಹೆಚ್ಚಿನ ಪ್ರಮಾಣ ನೋವನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ ಎಂದು ಇತ್ತೀಚಿನ ಸಮೀಕ್ಷೆಯೊಂದು ತಿಳಿಸಿದೆ.

ಇಲ್ಲಿ ನೀವು ಎಷ್ಟು ಸಮಯ ನಿದ್ದೆ ಮಾಡಿದ್ದೀರಿ ಎನ್ನುವುದು ಮುಖ್ಯವಲ್ಲ. ಕಡಿಮೆ ನಿದ್ದೆ ಮಾಡಿದರೂ ಬೇಗನೆ ನಿದ್ದೆಗೆ ಜಾರಬೇಕು. ಮಲಗಿದರೆ ನಿದ್ದೆ ಬರಲು ವಿಳಂಬವಾದಷ್ಟೂ ದೇಹದ ಸೂಕ್ಷ್ಮತೆ ಹೆಚ್ಚಾಗುತ್ತಾ ಹೋಗುತ್ತದೆ ಎಂದು ನಾರ್ವೆಯ ಸಂಶೋಧಕರು ಅಧ್ಯಯನದ ಮೂಲಕ ಕಂಡುಕೊಂಡಿದ್ದಾರೆ. ಇದಕ್ಕೊಂದು ಪರೀಕ್ಷೆಯನ್ನು ಸಂಶೋಧಕರು ನಡೆಸಿದ್ದರು. 10,000 ಜನರಿಗೆ 106 ಸೆಕೆಂಡ್‌ಗಳ ಕಾಲ ಐಸ್‌ ನೀರಿನಲ್ಲಿ ಕೈಯನ್ನು ಅದ್ದಲು ಹೇಳಲಾಯಿತು. ಕೇವಲ ಶೇ. 32ರಷ್ಟು ಜನರು ಅಷ್ಟು ಸಮಯ ಕೈಯನ್ನು ತಂಪುನೀರಿನಲ್ಲಿ ಹಿಡಿದುಕೊಂಡಿದ್ದರು. ಆದರೆ, ನಿದ್ರಾ ಹೀತನೆಯಿಂದ ಬಳಲುತ್ತಿರುವವರು ಐಸ್‌ ನೀರಿನಿಂದ ಬೇಗನೆ ತಮ್ಮ ಕೈಗಳನ್ನು ಹೊರತೆಗೆದರು.
ಅಷ್ಟೇಅಲ್ಲ, ದಿನದಲ್ಲಿ 7 ಗಂಟೆಗಿಂತ ಕಡಿಮೆ ನಿದ್ದೆ ಮಾಡುವವರಿಗೆ ಶೇ.30ರಷ್ಟು ಹೆಚ್ಚು ಬೊಜ್ಜಿನ ಸಮಸ್ಯೆ ಕಾಡುತ್ತದೆ ಎಂದು ಸಂಶೋಧರು ತಿಳಿಸಿದ್ದಾರೆ.
-ಉದಯವಾಣಿ

Write A Comment