ಕನ್ನಡ ವಾರ್ತೆಗಳು

ಫೆಡರೇಶನ್ ಕಪ್ : ಅಂತಿಮ ದಿನದ ಕ್ರೀಡಾಕೂಟದಲ್ಲಿ ಚಿನ್ನಗೆದ್ದ ಪೂವಮ್ಮ : ಬಹುನಿರೀಕ್ಷೆ ಹುಟ್ಟಿಸಿದ ಟಿಂಟು ಲುಕಾ ತೃತೀಯ ಸ್ಥಾನಕ್ಕೆ ತೃಪ್ತಿ

Pinterest LinkedIn Tumblr

Poovamma_Gold_Winn_1

ಮಂಗಳೂರು: ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 19ನೇ ರಾಷ್ಟ್ರೀಯ ಫೆಡರೇಶನ್ ಕಪ್ ಹಿರಿಯರ ಆ್ಯಥ್ಲೆಟಿಕ್ ಕ್ರೀಡಾಕೂಟದ ಕೊನೆಯ ದಿನದ 400 ಮೀ. ಓಟದಲ್ಲಿ ಕರ್ನಾಟಕದ ಪೂವಮ್ಮ(53.41) ಚಿನ್ನದ ಪದಕ ಪಡೆದಿದ್ದಾರೆ.

Poovamma_Gold_Winn_2 Poovamma_Gold_Winn_3

ಕೇರಳದ ಅನು ಆರ್.(54.27) ದ್ವಿತೀಯ, ಬಹಳ ನಿರೀಕ್ಷೆ ಹುಟ್ಟಿಸಿದ ಕೇರಳದ ಟಿಂಟು ಲುಕಾ(54.31) ತೃತೀಯ ಸ್ಥಾನ ಪಡೆದಿದ್ದಾರೆ. ಅಲ್ಲದೆ ಪುರುಷರ ವಿಭಾಗದ 400 ಮೀ. ಓಟದಲ್ಲಿ ಆರ್ಮಿಯ ಆರೋಕ್ಯ ರಾಜೀವ್(46.24)ಪ್ರಥಮ, ವಾಯು ಸೇನೆಯ ವಿ.ಸಜೀನ್(46.94) ದ್ವಿತೀಯ, ತಮಿಳುನಾಡಿನ ಎ. ಧರುಣ್(47.25) ತೃತೀಯ ಸ್ಥಾನ ಪಡೆದಿದ್ದಾರೆ.

ಪುರುಷರ ವಿಭಾಗದ ಡಿಸ್ಕಸ್ ಥ್ರೋ ನಲ್ಲಿ ಟಾಟಾ ಮೋಟಾರ್ಸ್ ನ ಅರ್ಜುನ್ ಸಿಂಗ್ (58.51ಮೀ.) ಪ್ರಥಮ, ಇಂಡಿಯನ್ ಆರ್ಮಿಯ ಧರ್ಮರಾಜ್ ಯಾದ ( 58.41ಮೀ.) ದ್ವಿತೀಯ, ಒಎನ್ ಜಿಸಿ ಯ ಕೃಪಾಲ್ ಸಿಂಗ್(53.54ಮೀ.)ತೃತೀಯ ಸ್ಥಾನ ಪಡೆದಿದ್ದಾರೆ.

Poovamma_Gold_Winn_4 Poovamma_Gold_Winn_5 Poovamma_Gold_Winn_6 Poovamma_Gold_Winn_7 Poovamma_Gold_Winn_8 Poovamma_Gold_Winn_10

100 ಮೀ.ಮಹಿಳೆಯರ ಹಾರ್ಡಲ್ಸ್ ನಲ್ಲಿ ತಮಿಳುನಾಡಿನ ಗಾಯತ್ರಿ(13.67)ಪ್ರಥಮ, ತಮಿಳುನಾಡಿನ ದಿಪೀಕಾ(13.76) ದ್ವಿತೀಯ, ಕರ್ನಾಟಕದ ಮೇಘನಾ ಶೆಟ್ಟಿ(13.88) ತೃತೀಯ ಸ್ಥಾನ ಪಡೆದಿದ್ದಾರೆ. ಪುರುಷರ ವಿಭಾಗದ 110 ಮೀ. ಹಾರ್ಡಲ್ಸ್ ನಲ್ಲಿ ಒಎನ್ ಜಿಸಿ ಯ ಸಿದ್ಧಾರ್ಥ್ ಥಿಂಗಾ (13.92) ಪ್ರಥಮ, ತಮಿಳುನಾಡಿನ ಸುರೇಂದರ್(14.17)ದ್ವಿತೀಯ, ತೆಲಂಗಾಣದ ಕೆ. ಪ್ರೇಮ್ ಕುಮಾರ್(14.26)ತೃತೀಯ ಸ್ಥಾನ ಪಡೆದಿದ್ದಾರೆ.

1500 ಮೀ. ಓಟದ ಪುರುಷರ ವಿಭಾಗದಲ್ಲಿ ಆರ್ಮಿಯ ಜೀನ್ಸನ್ ಜೋನ್ಸನ್(3:4698)ಪ್ರಥಮ, ಆರ್ಮಿಯ ಸಂದೀಪ್ ಕುಮಾರ್(3:47.71)ದ್ವಿತೀಯ, ಅಸ್ಸಾಂ ನ ಅಜಯ್ ಕೆ.ಆರ್. ಸರೋಜ್(3:48.86)ತೃತೀಯ ಸ್ಥಾನ ಪಡೆದಿದ್ದಾರೆ. ಮಹಿಳೆಯರ 1500 ಮೀ. ಓಟದಲ್ಲಿ ಹರಿಯಾಣದ ಸುಷ್ಮಾ ದೇವಿ(4:27.50) ಪ್ರಥಮ, ಕೇರಳದ ಚೈತ್ರಾ ಪಿ.ಯು(4:27.50)ದ್ವಿತೀಯ, ಪಶ್ಚಿಮ ಬಂಗಾಳದ ಸಿಪ್ರಾ ಸರ್ಕಾರ್(4:28.62) ತೃತೀಯ ಸ್ಥಾನ ಪಡೆದಿದ್ಧಾರೆ.
100 ಮೀ ರಿಲೇ ಮಹಿಳೆಯರ ವಿಭಾಗದಲ್ಲಿ ಕರ್ನಾಟಕಕ್ಕೆ ಚಿನ್ನ , ತಮಿಳುನಾಡಿಗೆ ಬೆಳ್ಳಿ, ಮಹಾರಾಷ್ಟ್ರಕ್ಕೆ ಕಂಚಿನ ಪದಕ ದೊರೆತಿದೆ. ಅಂತೆಯೇ ಪುರುಷರ ವಿಭಾಗದಲ್ಲಿ ಆರ್ಮಿಗೆ ಚಿನ್ನ, ತಮಿಳುನಾಡಿಗೆ ಬೆಳ್ಳಿ, ಕರ್ನಾಟಕಕ್ಕೆ ಕಂಚು ದೊರೆತಿದೆ.

Poovamma_Gold_Winn_9a Poovamma_Gold_Winn_14a

Poovamma_Gold_Winn_11 Poovamma_Gold_Winn_12 Poovamma_Gold_Winn_13 Poovamma_Gold_Winn_15 Poovamma_Gold_Winn_16 Poovamma_Gold_Winn_17 Poovamma_Gold_Winn_18

ಪುರುಷರ ವಿಭಾಗ್ ಟ್ರಿಪಲ್ ಜಂಪ್ ನಲ್ಲಿ ಒಎನ್ ಜಿ.ಸಿ ಯ ಅರ್ಪಿಂದರ್ ಸಿಂಗ್ (16.13ಮೀ.) ಪ್ರಥಮ, ಟಾಟಾ ಮೋಟಾರ್ಸ್ ನ ಎಸ್. ಎನ್. ಮೊಹಮ್ಮದ್(15.86)ದ್ವಿತೀಯ, ವಾಯುಸೇನೆಯ ಯು.ಕಾರ್ತಿಕ್(15.82ಮೀ.) ತೃತೀಯ ಸ್ಥಾನ ಪಡೆದಿದ್ದಾರೆ.

400 ಮೀ. ಪುರುಷರ ವಿಭಾಗದ ರಿಲೇಯಲ್ಲಿ ಆರ್ಮಿಗೆ ಚಿನ್ನ, ವಾಯುಸೇನೆಗೆ ಬೆಳ್ಳಿ, ಹರಿಯಾಣಗೆ ಕಂಚು ದೊರೆತಿದೆ. ಮಹಿಳೆಯರ ವಿಭಾಗದಲ್ಲಿ ಪಶ್ಚಿಮ ಬಂಗಾಳಕ್ಕೆ ಚಿನ್ನ, ತಮಿಳುನಾಡಿಗೆ ಬೆಳ್ಳಿ, ಕೇರಳಕ್ಕೆ ಕಂಚು ದೊರೆತಿದೆ.

Write A Comment