ಕನ್ನಡ ವಾರ್ತೆಗಳು

ಬಜ್ಪೆ ವಿಮಾನ ನಿಲ್ದಾಣ ಮೇ.1ರಿಂದ ಸನ್ನದ್ಧ.

Pinterest LinkedIn Tumblr

bajpe_airport_taxxetx_1

ಮಂಗಳೂರು,ಮೇ.01 : ನಗರದ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಗಲ್ಫ್ ವಿಮಾನ ಸೇವಾ ವಿಭಾಗ ಸಹಿತ ಎಲ್ಲ ವಿಭಾಗಗಳಲ್ಲಿ 24 ಗಂಟೆಗಳ ಕಾರ್ಯನಿರ್ವಹಣೆಯನ್ನು ಇಂದಿನಿಂದ ಪುನರಾರಂಭಿಸಲಿದೆ.

ಗಲ್ಫ್ ವಿಮಾನ ಸೇವಾ ವಿಭಾಗದ ದಮಾಂ, ದುಬೈ, ಮಸ್ಕತ್ ವಿಮಾನ ಯಾನದ ವೇಳಾ ಪಟ್ಟಿಯಲ್ಲಿ ಕೆಲವು ಬದಲಾವಣೆಗಳಾಗಿವೆ. ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ಐಎಕ್ಸ್ 886 ಮಂಗಳೂರು- ದಮಾಂ- ಮಂಗಳೂರು, ಐಎಕ್ಸ್ 814 ಮಂಗಳೂರು- ದುಬೈ- ಮಂಗಳೂರು ಮತ್ತು ಐಎಕ್ಸ್ 817 ಮಂಗಳೂರು- ಮಸ್ಕತ್- ಮಂಗಳೂರು ವಿಮಾನಗಳ ವೇಳಾ ಪಟ್ಟಿ ಬದಲಾಗಿದೆ.

ಜೆಟ್ ಏರ್ವೇಸ್ ವಿಮಾನಗಳ ಗಲ್ಫ್ ವಿಮಾನ ಸೇವಾ ವಿಭಾಗದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕೊಳಂಬೆ ಪ್ರದೇಶದಲ್ಲಿ 6 ತಿಂಗಳ ಹಿಂದೆ ಕೈಗೆತ್ತಿಕೊಂಡಿದ್ದ ಓವರ್ ರನ್ವೇ ನಿರ್ಮಾಣ ಕಾಮಗಾರಿಯ ಎಲ್ಲ ಕೆಲಸಗಳು ಪೂರ್ಣಗೊಂಡಿವೆ.

Write A Comment