ಕನ್ನಡ ವಾರ್ತೆಗಳು

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 79ನೇ ನೂತನ ಶಾಖೆ ಆರಂಭ.

Pinterest LinkedIn Tumblr

SCDCC_new_branch_1

ಮಂಗಳೂರು, ಎ.27: ನಗರದ ಹೊರವಲಯದ ವಾಮಂಜೂರಿನಲ್ಲಿ ಸೋಮವಾರ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 79ನೇ ನೂತನ ಶಾಖೆಯನ್ನು ಮಂಗಳೂರು ಉತ್ತರ ವಲಯದ ಶಾಸಕ ಬಿ.ಎ.ಮೊಹಿದ್ದೀನ್ ಬಾವಾ ಅವರು ಉದ್ಘಾಟಿಸಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ರಾಜ್ಯದಲ್ಲೇ ಅತ್ಯಂತ ಹೆಚ್ಚು ಸಮರ್ಥವಾಗಿ ಮುನ್ನಡೆಯುತಿದ್ದು ಲಾಭಾಂಶ ಗಳಿಕೆಯಲ್ಲು ರಾಜ್ಯದಲ್ಲೇ ಮುಂಚೂಣಿಯಲ್ಲಿದೆ ಎಂದು ಈ ಸಂಧರ್ಭದಲ್ಲಿ ಹೇಳಿದರು.

ಕರಾವಳಿ ಭಾಗದ ಜನರ ಜೊತೆ ಅವಿನಾಭಾವ ಸಂಬಂಧ ಇಟ್ಟುಕೊಂಡು ಜನರಿಗೆ ಅತ್ಯುತ್ತಮ ಸೇವೆ ನೀಡುತ್ತಿರುವ ಬ್ಯಾಂಕ್ ನೂತನ ಶಾಖೆ ಕೂಡಾ ಗ್ರಾಹಕರ ಮೆಚ್ಚುಗೆಗಳಿಸಿ ಮುನ್ನಡೆಯಲಿ ಎಂದು ಹಾರೈಸಿದರು.

SCDCC_new_branch_2 SCDCC_new_branch_3 SCDCC_new_branch_4 SCDCC_new_branch_5 SCDCC_new_branch_6 SCDCC_new_branch_8

ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ವಹಿಸಿದ್ದರು. ಸಮಾರಂಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.

Write A Comment