ಕನ್ನಡ ವಾರ್ತೆಗಳು

ನೇಪಾಳ ದುರಂತ : ಶಾಂತಿಗಾಗಿ ಕದ್ರಿ ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ.

Pinterest LinkedIn Tumblr

kadri_pooje_photo_1

ಮಂಗಳೂರು,ಎಪ್ರಿಲ್.27: ನೇಪಾಳದಲ್ಲಿ ನಡೆದದಂತಹ ಭೂಕಂಪದಲ್ಲಿ ಮೃತರಾದವರ ಆತ್ಮಕ್ಕೆ ಶಾಂತಿ ಕೋರಿ ಹಾಗೂ ಅವರ ಕುಟುಂಬಕ್ಕೆ ಈ ದುಃಖವನ್ನು ತಡೆಯುವಂತಹ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಆಡಳಿತ ಮೊಕ್ತೇಸ್ತರ ಎ. ಜಗನ್ನಾಥ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಪಾಲಿಕೆ ಸದಸ್ಯರಾದ ಆಶೋಕ್ ಕೆ ಡಿ, ಭಾಸ್ಕರ ಮೊಯ್ಲಿ, ಎ.ಜೆ ಆಸ್ಪತ್ರೆಯ ಅಧ್ಯಕ್ಷ ಮತ್ತು ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ  ಎ.ಜೆ.ಶೆಟ್ಟಿ ಎಲ್ಲರೂ ಸೇರಿ ವಿಶೇಷ ಪೂಜೆ ಕೈಗೊಂಡರು.

kadri_pooje_photo_2 kadri_pooje_photo_3 kadri_pooje_photo_4 kadri_pooje_photo_5

ಪ್ರಪಂಚದಲ್ಲಿ ನಡೆಯುವಂತ ಪೃಕತಿಯ ವಿಕೋಪಕ್ಕೆ ಶ್ರೀಮಂತ, ಬಡವ ಎಂಬ ಯಾವುದೇ ಬೇಧಭಾವವಿಲ್ಲ. ಆದರೆ ನೇಪಾಳದಲ್ಲಿ ನಡೆದ ಈ ದುರಂತದಿಂದಾಗಿ ಅನೇಕ ಭಾರತೀಯರನ್ನು ಘಾಸಿ ಮಾಡಿದೆ. ನಮ್ಮ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಸಂಧರ್ಭದಲ್ಲಿ ತುರ್ತು ಪರಿಹಾರಕ್ಕೆ ಧಾವಿಸಿರುವು ನಿಜಕ್ಕೂ ಶ್ಲಾಘಿಸಬೇಕು ಎಂದು ಈ ಸಂಧರ್ಭದಲ್ಲಿ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.

Write A Comment