ಕನ್ನಡ ವಾರ್ತೆಗಳು

ಎಂಡೋ ಸಂತ್ರಸ್ತರಿಗಾಗಿ ಕೈಗೊಂಡ ಕಲ್ಯಾಣ ಯೋಜನೆಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ ಕೈಬಿಟ್ಟಿದೆ : ಬಿಜೆಪಿ ನಾಯಕ ಮೋನಪ್ಪ ಭಂಡಾರಿ

Pinterest LinkedIn Tumblr

Endo_againt_protest_1

ಮಂಗಳೂರು,ಎಪ್ರಿಲ್.27: ಸ್ಥಗಿತಗೊಂಡಿರುವ ಎಂಡೋ ಸಂತ್ರಸ್ತರ ಮಾಸಾಶನ ನೀಡಬೇಕು ಮತ್ತು ನ್ಯಾಯಾಲಯದ ಆದೇಶ ಜಾರಿಗೆ ಅಗ್ರಹಿಸಿ ಎಂಡೋ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರು ಸೊಮವಾರ ದ.ಕ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಿದರು.

Endo_againt_protest_2 Endo_againt_protest_3 Endo_againt_protest_4 Endo_againt_protest_5 Endo_againt_protest_6 Endo_againt_protest_7

ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ನಾಯಕ ಮೋನಪ್ಪ ಭಂಡಾರಿ, ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಎಂಡೋ ಸಂತ್ರಸ್ತರನ್ನು ಕಡೆಗಣಿಸಿದೆ, ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಎಂಡೋ ಸಂತ್ರಸ್ತರಿಗಾಗಿ ಕೈಗೊಂಡ ಕಲ್ಯಾಣ ಯೋಜನೆಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ ಕೈಬಿಟ್ಟಿದೆ. ಎಂಡೋ ಸಂತ್ರಸ್ತರನ್ನು ಕಡೆಗಣಿಸಿ ಈ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ. ಎಂಡೋ ಸಂತ್ರಸ್ತರ ಬೇಡಿಕೆಗಳನ್ನು ಕೂಡಲೇ ಅನಿಷ್ಠಾನಗೊಳಿಸಿ ಇಲ್ಲವಾದಲ್ಲಿ ಎಂಡೊ ಸಂತ್ರಸ್ತರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಹೋರಾಟಗಾರರಾದ ಕುಶಾಲಪ್ಪ ಗೌಡ , ನವೀನ್ ಕುಲಾಲ್ , ಹಿಂದೂ ಮಹಾಸಭಾದ ಧರ್ಮೇಂದ್ರ ಭಾಗವಹಿಸಿದ್ದರು.

Write A Comment