ಕನ್ನಡ ವಾರ್ತೆಗಳು

ಮಹಿಳಾ, ಮಕ್ಕಳ ಮತ್ತು ಹಿರಿಯ ನಾಗರಿಕರ ಸಹಾಯವಾಣಿಗೆ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಸ್.ಡಿ.ಶರಣಪ್ಪ ಚಾಲನೆ.

Pinterest LinkedIn Tumblr

Child_Help_Line_1

ಮಂಗಳೂರು,ಎಪ್ರಿಲ್. 27: ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆ ಹಾಗೂ ಸರಕಾರೇತರ ಸಂಸ್ಥೆಗಳ ಸಹಕಾರದೊಂದಿಗೆ ಈ ಸಹಾಯವಾಣಿಯನ್ನು ತೆರೆಯಲಾಗಿದೆ. ಜನರು ಇಲ್ಲಿಗೆ ಬಂದು ಸಮಸ್ಯೆಗಳನ್ನು ಹೇಳಿದರೆ ಅವರಿಗೆ ಸಂಬಂಧಪಟ್ಟ ಇಲಾಖೆಗೆ ಅಥವಾ ಸ್ಥಳಕ್ಕೆ ತೆರಳಲು ವಾಹನ ಸೌಲಭ್ಯಗಳನ್ನು ಮಾಡಿ ಕೊಡಲಾಗುತ್ತದೆ. ದೂರುದಾರರ ಸಮಸ್ಯೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿ ಕ್ರಮ ಕೈಗೊಳ್ಳುತ್ತೇವೆ ಎಂದು ಮಹಿಳಾ, ಮಕ್ಕಳ ಮತ್ತು ಹಿರಿಯ ನಾಗರಿಕರ ಸಹಾಯವಾಣಿಯನ್ನು ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಸ್.ಡಿ.ಶರಣಪ್ಪ ಉದ್ಘಾಟಿಸಿದರು.ಹೇಳಿದರು.

Child_Help_Line_2 Child_Help_Line_3 Child_Help_Line_4 Child_Help_Line_5 Child_Help_Line_6

2013ರಲ್ಲಿ ಜಿಲ್ಲೆಯಲ್ಲಿ 26 ಅತ್ಯಾಚಾರ ಪ್ರಕರಣಗಳು, 2014ರಲ್ಲಿ 42 ಪ್ರಕರಣಗಳು ವರದಿಯಾಗಿದೆ. ಶೇ.50ರಷ್ಟು ಅತ್ಯಾಚಾರ ಪ್ರಕರಣಗಳು ಪ್ರೇಮ ಪ್ರಕರಣಗಳಿಂದ ನಡೆಯುತ್ತದೆ. ನಮ್ಮ ಗಮನಕ್ಕೆ ಬಂದ ತಕ್ಷಣ ಸೂಕ್ತ ಕ್ರಮ ಜರಗಿಸುತ್ತೇವೆ ಎಂದರು. 10 ಮಹಿಳಾ ಹಾಗೂ 40 ಪುರುಷ ಕಾನ್ ಸ್ಟೇಬಲ್ ಗಳನ್ನು ನೇಮಕ ಮಾಡಲಾಗಿದ್ದು, ಮಹಿಳೆಯರಲ್ಲಿ 9 ಕಾನಸ್ಟೇಬಲ್, ಪುರುಷರಲ್ಲಿ ಕೇವಲ 7 ಮಂದಿ ಸ್ಥಳೀಯರಾಗಿದ್ದಾರೆ. ಸ್ಥಳೀಯ ಯುವಕರು ಪೊಲೀಸ್ ಇಲಾಖೆಗೆ ಸೇರಲು ಇಚ್ಚಿಸುತ್ತಿಲ್ಲ ಎನ್ನುವುದೇ ಬೇಸರದ ಸಂಗತಿ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿಯೇ ಸಹಾಯವಾಣಿ ಕಚೇರಿ ಇದ್ದು, ಬೆಳಿಗ್ಗೆ 10ರಿಂದ 5.30ವರೆಗೆ ಸಹಾಯವಾಣಿಯಲ್ಲಿ ಎನ್ ಜಿ ಒ ಸಿಬ್ಬಂದಿಗಳಿರುತ್ತಾರೆ. 1098 ಸಂಖ್ಯೆಗೆ ಕರೆ ಮಾಡಿ ನಾಗರಿಕರು ತಮ್ಮ ಸಮಸ್ಯೆಯನ್ನು ತಿಳಿಸಬಹುದಾಗಿದೆ. ಎಂದು ಈ ಸಂಧರ್ಭದಲ್ಲಿ ಹೇಳಿದರು.

Write A Comment