ಕನ್ನಡ ವಾರ್ತೆಗಳು

13 ನೇ ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು ಅಭಿಯಾನ

Pinterest LinkedIn Tumblr

Swach_bharath_abhiyan_1

ಮಂಗಳೂರು,ಎ.27 : ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ 40 ವಾರಗಳ ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು ಎಂಬ ಕಾರ್ಯಕ್ರಮದ 13 ನೇ ವಾರದ ಸ್ವಚ್ಚತಾ‌ ಅಭಿಯಾನವನ್ನು ಮಂಗಳೂರು ಮಹಾನಗರಪಾಲಿಕೆ‌ ಆವರಣ ಹಾಗೂ ಲಾಲಭಾಗ್‌ ಸುತ್ತಮುತ್ತ ಹಮ್ಮಿಕೊಳ್ಳಲಾಯಿತು. ಆಶ್ರಮದ ಮುಖ್ಯಸ್ಥರಾದ ಸ್ವಾಮಿಜಿತಕಾಮಾನಂದಜಿಯವರ ನೇತೃತ್ವದಲ್ಲಿ ಪರಿಸರ ಪ್ರೇಮಿ, ಕಲಾವಿದ ಶ್ರೀ ದಿನೇಶ್ ಹೊಳ್ಳ‌ ಅಭಿಯಾನಕ್ಕೆ ಚಾಲನೆ ನೀಡಿದರು.

ಎಂಆರ್‌ಪಿ‌ಎಲ್‌ಗ್ರೂಪ್‌ಜನರಲ್ ಮ್ಯಾನೆಜರ್ ಶ್ರೀ ಲಕ್ಷ್ಮೀನಾರಾಯನ್, ಬಿಜೆಪಿ ಮಹಿಳಾ ಮೋರ್ಚಾ‌ ಅಧ್ಯಕ್ಷೆ ಶ್ರೀಮತಿ ಕಾತ್ಯಾಯಿನಿ, ಡಾ ಸತೀಶ್‌ರಾವ್, ಸಮಾಜ ಕಾರ್ಯಕರ್ತ ಶ್ರೀ ಸುರೇಶ್ ಶೆಟ್ಟಿ ‌ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಅಂಬುಜಾ ಸಿಮೆಂಟ್ ನೌಕರರು, ಮಂಕಿಸ್ಟಾಂಡ್ ಫ್ರೆಂಡ್ಸ್, ಮಠದ ಭಕ್ತರು, ರಾಮಕೃಷ್ಣ ಮಿಷನ್ ಬಾಲಕಾಶ್ರಮದ ವಿದ್ಯಾರ್ಥಿಗಳು, ಮನಪಾ ಪೌರಕಾರ್ಮಿಕರು, ಸಾರ್ವಜನಿಕರು, ಹಿತೈಷಿಗಳು ಸ್ವಚ್ಚತಾಕೈಂಕರ್ಯದಲ್ಲಿ ಭಾಗವಹಿಸಿದರು.

Swach_bharath_abhiyan_2 Swach_bharath_abhiyan_3 Swach_bharath_abhiyan_4 Swach_bharath_abhiyan_5 Swach_bharath_abhiyan_6 Swach_bharath_abhiyan_7 Swach_bharath_abhiyan_8 Swach_bharath_abhiyan_9 Swach_bharath_abhiyan_10 Swach_bharath_abhiyan_11

ನಗರದಲ್ಲಿ ಫೆಡರೇಶನ್‌ಕಪ್‌ ಆಯೋಜನೆಯ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ ಯಾದರೂ‌ ಅಲ್ಲಿ ಸ್ವಚ್ಚತೆಗೆ ಪ್ರಾಮುಖ್ಯತೆ ನೀಡಬೇಕಿದೆಯೆಂದು ಸಾರ್ವಜನಿಕರ‌ ಅಭಿಪ್ರಾಯ. ಹಲವಾರು ದಿನಗಳಿಂದ ಮಾಧ್ಯಮಗಳು ಈ ವಿಷಯದತ್ತ ಗಮನ ಸೆಳೆಯುತ್ತಲೇ ಇವೆ. ಈ ಸಂದರ್ಭದಲ್ಲಿ ರಾಮಕೃಷ್ಣ ಮಿಷನ್‌ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು‌ ಅಭಿಯಾನವನ್ನು ಲಾಲಭಾಗ್ ಹಾಗೂ ಕರಾವಳಿ ಮೈದಾನದ ಸುತ್ತಮುತ್ತ ಕೈಗೊಂಡಿತು. ಪ್ರಥಮವಾಗಿ ಸ್ವಾಮಿಜಿತಕಾಮಾನಂದಜಿಯರ ನೇತೃತ್ವದಲ್ಲಿ ಮನಪಾ ಮುಂಭಾಗ ಹಾಗೂ ಮೂಲೆಯಲ್ಲಿ ಶೇಖರಗೊಂಡಿದ್ದ ಕಸವನ್ನು ತೆಗೆದು ಶುಚಿಗೊಳಿಸಲಾಯಿತು. ಸ್ವತ: ಸ್ವಾಮಿಜಿ ಹಾರೆ ಪೊರಕೆ ಹಿಡಿದು ಮನಪಾ ಮುಂಭಾಗವನ್ನು ಸ್ವಚ್ಚಗೊಳಿಸಿದರು.ಅತ್ತ ಬಾಲಕಾಶ್ರಮದ ವಿದ್ಯಾರ್ಥಿಗಳು ಮನಪಾ ಎದುರಿಗಿರುವ ಬಸ್ ತಂಗುದಾಣವನ್ನು ಶುಚಿಗೊಳಿಸಿ ಬಣ್ಣ ಬಳಿದು ಅಂದಗೊಳಿಸಿದರು.

Swach_bharath_abhiyan_12 Swach_bharath_abhiyan_13 Swach_bharath_abhiyan_14 Swach_bharath_abhiyan_15 Swach_bharath_abhiyan_16 Swach_bharath_abhiyan_17 Swach_bharath_abhiyan_18 Swach_bharath_abhiyan_19 Swach_bharath_abhiyan_20 Swach_bharath_abhiyan_21 Swach_bharath_abhiyan_22 Swach_bharath_abhiyan_23

ಕರಾವಳಿ ಮೈದಾನದ ಪುಟ್ಫಾತ್‌ ದುರಸ್ತಿ – ಲಾಲಭಾಗ್ ಪಬ್ಬಾಸ್ ನಿಂದ ಹಿಡಿದು ಲೇಡಿಹಿಲ್ ವರೆಗೆ ಮಂಗಳಾ ಕ್ರೀಡಾಂಗಣಕ್ಕೆತಾಗಿಕೊಂಡಿರುವ ಪುಟ್ಫಾತ್‌ ಅಲ್ಲಲ್ಲಿ ಕಿತ್ತುಹೋಗಿ ಸಾರ್ವಜನಿಕರಿಗೆ,ಕ್ರೀಡಾಸಕ್ತರಿಗೆ ತೊಂದರೆಯಾಗುತ್ತಿತ್ತು. ಸುಮಾರು ಹದಿನೈದು ಕಡೆ ಕಿತ್ತುಹೋಗಿರುವ ಪುಟ್ಫಾತ್‌ನ್ನು ಸರಿಮಾಡಲೇಬೇಕು ಎಂಬ ಹಠತೊಟ್ಟ ಸ್ವಚ್ಚ ಮಂಗಳೂರು ಅಭಿಯಾನದ ಹಿರಿಯ ಸ್ವಯಂ ಸೇವಕರು ಕಳೆದ ನಾಲ್ಕಾರು ದಿನಗಳಿಂದ ಯೋಜನೆಯನ್ನು ಜಾರಿಗೊಳಿಸಲು ಬೇಕಾದ ತಯಾರಿ ಮಾಡಿಕೊಂಡಿದ್ದರು. ಹೊಚ್ಚ ಹೊಸ ಸಿಮೆಂಟ್ ಸ್ಲಾಬ್ ಗಳನ್ನು ಹೊತ್ತುತಂದು‌ ಅಲ್ಲಿರುವ ಕಾಲುದಾರಿಗೆ ಸರಿಯಾಗಿ ಹೊಂದಿಸಿ ಗಣ್ಯರಿಂದ ಭೇಷ ಎನ್ನಿಸಿಕೊಂಡರು. ಹಿರಿಯಕಾರ್ಯಕರ್ತರಾದ ಶ್ರೀ ರಾಘವೇಂದ್ರ‌ಅಮೀನ್, ದಿಲ್ ರಾಜ್ ಆಳ್ವ, ಮುಖೇಶ್, ಸಲೀಂ ಮುತ್ತಿತರು ವಿಶೇಷ ಕಾಳಜಿ ವಹಿಸಿ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಿದರು.

ಲಾಲ್ ಭಾಗ್, ಬಲ್ಲಾಳಭಾಗ್, ಲೇಡಿಹಿಲ್ ಮುಂತಾದಕಡೆ ಮನೆಮನೆಗೆ ತೆರಳಿ ಸ್ವಚ್ಚತಾಕರಪತ್ರ ಹಂಚಿ, ಜಾಗ್ರತಾಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಎಂಆರ್‌ಪಿಲ್ ಈ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿಕೊಂಡಿತ್ತು.

Write A Comment