ಕನ್ನಡ ವಾರ್ತೆಗಳು

ಹೆಜಮಾಡಿ ವೀರಮಾರುತಿ ದೇವಸ್ಥಾನದ ಭ್ರಹ್ಮಕಲಶೋತ್ಸವ

Pinterest LinkedIn Tumblr

Hejamadi_Brahmakals_1

ವರದಿ : ಈಶ್ವರ ಎಂ. ಐಲ್ / ಚಿತ್ರ,: ದಿನೇಶ್ ಕುಲಾಲ್

ಮುಂಬಯಿ / ಮಂಗಳೂರು : ಹೆಜಮಾಡಿ ಶ್ರೀ ವೀರಮಾರುತಿ ದೇವಸ್ಥಾನದ ಪುನರ್ ಪ್ರತಿಷ್ಠೆ ಭ್ರಹ್ಮಕಲಶೋತ್ಸವವು ಎ. 22ರಂದು ಜರಗಿದ್ದು ಈ ಸಂದರ್ಭದಲ್ಲಿ ಜರಗಿದ ಧಾರ್ಮಿಕ ಸಭೆಯಲ್ಲಿ ಮುಂಬಯಿಯ ಸಾಧಕರನ್ನು ಸನ್ಮಾನಿಸಲಾಯಿತು.

ಕಸಪ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಎಚ್. ಬಿ. ಎಲ್. ರಾವ್ ಮತ್ತು ಶ್ರೀ ವೀರಮಾರುತಿ ದೇವಸ್ಥಾನದ ಮುಂಬಯಿ ಸಮಿತಿಯ ಅಧ್ಯಕ್ಷ ಓಂದಾಸ್ ಕನ್ನಂಗಾರ್ ಅವರನ್ನು ಉಪಸ್ಥಿತರಿದ್ದ ಗಣ್ಯರು ಸನ್ಮಾನಿಸಿದರು.

Hejamadi_Brahmakals_2 Hejamadi_Brahmakals_3

Hejamadi_Brahmakals_11 Hejamadi_Brahmakals_12 Hejamadi_Brahmakals_13 Hejamadi_Brahmakals_14

Hejamadi_Brahmakals_4 Hejamadi_Brahmakals_5 Hejamadi_Brahmakals_6 Hejamadi_Brahmakals_7 Hejamadi_Brahmakals_8 Hejamadi_Brahmakals_10

ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಲಾಲಾಜಿ ಮೆಂಡನ್ ಅವರು ವಹಿಸಿದ್ದು ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿಯ ಅಧ್ಯಕ್ಷ ಅಜಿತ್ ಸುವರ್ಣ ಅತಿಥಿಯಾಗಿ ಉಪಸ್ಥಿತರಿದ್ದು ಇದು ಕೇವಲ ಧಾರ್ಮಿಕ ಕೇಂದ್ರವಾಗಿರದೆ ಶೈಕ್ಷಣಿಕ, ಸಮಾಜಿಕ ಕೇಂದ್ರವಾಗಿರಲಿ ಎಂದು ಶುಭ ಹಾರೈಸಿದರು.

ಕೇಮಾರು ಶ್ರೀಯವರು ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಪ್ರದೀಪ್ ಕುಮಾರ್ ಕಲ್ಕೂರ, ಪಂಚಾಯತ್ ಸದಸ್ಯೆ, ಗೀತಾಂಜಲಿ, ಎಂ. ಎಸ್. ಅಬ್ಧುಲ್ ರಜಾಕ್, ಹರೀಸ್ ಎನ್. ಕೋಟ್ಯಾನ್, ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಅರುಣ್ ಕುಮಾರ್ ಸ್ವಾಗರಿಸಿದರು. ಓಂದಾಸ್ ಕಣ್ಣಂಗಾರ್ ಪ್ರಸ್ತಾವಿಕ ನುಡಿಗಳನ್ನಾಡಿದರು. ಶರತ್ ಕುಮಾರ್ ಮಟ್ಟು ವಂದಿಸಿದರು.

Write A Comment