ಕನ್ನಡ ವಾರ್ತೆಗಳು

ತಾಯ್ತನಕ್ಕೆ ಸೂಕ್ತ ವಯಸ್ಸು ಯಾವುದು?

Pinterest LinkedIn Tumblr

bhec25Ankur

-ಡಾ. ಎಸ್.ಎಸ್. ವಾಸನ್,   ಆ್ಯಂಡ್ರೊಲಜಿಸ್ಟ್
ನನ್ನ ಮದುವೆ ತಡವಾಗಿ ಆಯಿತು. ಈಗ ಮಗು ಮಾಡಿಕೊಳ್ಳಲು ಒಂದೆರಡು ವರ್ಷ ನಾನು ಕಾಯಬಹುದೆ?
ನನಗೀಗ ತಾನೇ ಮದುವೆಯಾಗಿದೆ. ಸದ್ಯಕ್ಕೆ ಮಗು ಪಡೆಯುವುದು ಬೇಕಾಗಿಲ್ಲ. ನಾವಿಬ್ಬರೂ ಬದುಕನ್ನು ಆನಂದಿಸಬೇಕೆಂದು ಬಯಸಿದ್ದೇವೆ. ಇದು ಸಾಧ್ಯವೇ?

25 ವರ್ಷ ವಯಸ್ಸಿನ ಹೆಣ್ಣುಮಕ್ಕಳು, ಅಥವಾ ಅದಕ್ಕಿಂತ ಚಿಕ್ಕವರಲ್ಲಿಯೂ ಇದೀಗ ಗರ್ಭಧಾರಣೆಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಕಳೆದ ದಶಕಕ್ಕೆ ಹೋಲಿಸಿದರೆ ಬಹುತೇಕ ದುಪ್ಪಟ್ಟು ಜನರಿಗೆ ಗರ್ಭಧಾರಣೆ ಅಸಾಧ್ಯವಾಗಿದೆ.

35 ವರ್ಷದೊಳಗಿನ ಮಹಿಳೆಯರಲ್ಲಿ ಶೇ 44ರಷ್ಟು ಜನರಿಗೆ ಗರ್ಭಧಾರಣೆಗೆ ವೈದ್ಯಕೀಯ ಸಹಾಯ ಅಗತ್ಯವಾಗಿದೆ. ಕಳೆದ ದಶಕದಲ್ಲಿ ಬಸಿರನ್ನು ಮುಂದೂಡುವುದರ ಬಗ್ಗೆ ಮಾತನಾಡುತ್ತಿದ್ದ ಮಹಿಳೆಯರು ಇದೀಗ ಮರುಯೋಚಿಸಬೇಕಾಗಿದೆ. ಕಾರಣ ಫಲವಂತಿಕೆಯ ಅವಧಿ 25 ರಿಂದ 35ರ ವರ್ಷಗಳೀಗೆ ಇಳಿದಿದೆ. ಇದೀಗ ಏನೂಟ ಮಾಡಬೇಕು ಎನ್ನುವುದರಿಂದ ಹಿಡಿದು ಯಾವಾಗ ಕೂಡಬೇಕು ಎನ್ನುವುದರವರೆಗೂ ಎಲ್ಲವೂ ಯೋಜಿತವಾಗಿರುತ್ತದೆ. ಈ ಯೋಜಿತ ಪಾಲಕತ್ವಕ್ಕೆ ಒಂದು ದಶಕದಿಂದಲೇ ತಯಾರಿ ಮಾಡಿಕೊಳ್ಳುತ್ತಿರುವುದೂ ಕಾರಣವಾಗಿದೆ.

ವಯಸ್ಸು ನಿಮಗಿಷ್ಟವಿರಲಿ ಇಲ್ಲದೇ ಇರಲಿ, ಗರ್ಭಧಾರಣೆಗೆ ವಯಸ್ಸು ಹೆಚ್ಚು ನಿರ್ಧಾರಕ ಅಂಶವಾಗಿದೆ. ನೀವೆಷ್ಟೇ ಮುಂಜಾಗೃತಾ ಕ್ರಮಗಳನ್ನು ಅನುಸರಿಸಿದರೂ ನಿಮ್ಮಲ್ಲಿರುವ ಅಂಡಾಣುಗಳಿಗೆ ವಯಸ್ಸಾಗುವುದನ್ನಂತೂ ತಡೆಯಲಾರಿರಿ ಎನ್ನುವುದು ಮಣಿಪಾಲ್‌ ಅಂಕುರ ಸಂಸ್ಥೆಯ ನಿರ್ದೇಶಕಿ ಡಾ. ಬೀನಾ ವಾಸನ್‌ ಅವರ ಅಭಿಪ್ರಾಯವಾಗಿದೆ.

ತಾಯ್ತನವನ್ನು ಮುಂದೂಡಬಾರದು ಏಕೆ ಎನ್ನಲು ಇಲ್ಲಿವೆ ಕೆಲವು ಕಾರಣಗಳು
ನಿಮ್ಮ ಅಂಡಾಣುಗಳಿಗೂ ಒಂದು ಜೀವಿತಾವಧಿ ಇದೆ ಎನ್ನುವುದು ಮರೆಯದಿರಿ. ಆರೋಗ್ಯವಂತ ಮಗು ಪಡೆಯಲು ಆರೋಗ್ಯವಂತ ಅಂಡಾಣುವಿನ ಅಗತ್ಯವಿರುತ್ತದೆ. ಆದರೆ ವಯಸ್ಸಾದಂತೆ ಆರೋಗ್ಯವಂತ ಅಂಡಾಣುಗಳ ಕೊರತೆ ಎದ್ದು ಕಾಣತೊಡಗುತ್ತದೆ.
ಹೆಣ್ಣುಮಕ್ಕಳು ಹುಟ್ಟುವಾಗಲೇ ಲಕ್ಷಾನುಗಟ್ಟಲೆ ಅಂಡಾಣುಗಳಿರುತ್ತವೆ. ಮಗು ಋತುಮತಿಯಾಗುವ ವಯಸ್ಸಿಗೆ ಬರುವುದರಲ್ಲಿಯೇ ಅರ್ಧದಷ್ಟು ಖಾಲಿಯಾಗಿರುತ್ತವೆ. ಇನ್ನುಳಿದವುಗಳಲ್ಲಿ ಬಹುತೇಕ ಅಂಡಾಣುಗಳು ಫಲಿತವಾಗಲು ಅರ್ಹವಾಗಿರುವುದಿಲ್ಲ. ಅರ್ಧದಷ್ಟು ಅಂಡಾಣುಗಳಲ್ಲಿ ವಂಶವಾಹಿ ದೋಷಗಳಿರುತ್ತವೆ.

ಪ್ರತಿ ವರ್ಷವೂ ನಿಮ್ಮ ಅಂಡಾಶಯದಲ್ಲಿರುವ ಅಂಡಾಣುಗಳ ಸಂಖ್ಯೆ ಕಡಿಮೆಯಾಗುತ್ತಲೇ ಇರುತ್ತದೆ. ಅಂಡಾಶಯದಿಂದ ಬಿಡುಗಡೆಯಾಗುವ  ಪ್ರತಿ ಅಂಡಾಣುವೂ ಫಲಿತಗೊಳ್ಳುತ್ತದೆ ಎನ್ನುವುದೂ ತಪ್ಪು ಕಲ್ಪನೆಯಾಗಿದೆ. ಬಿಡುಗಡೆಯಾಗುವ ಅಂಡಾಣುಗಳಲ್ಲಿ ಬಹುತೇಕ ಅಂಡಾಣುಗಳು ಕಡಿಮೆ ಜೀವಿತಾವಧಿ ಅಥವಾ ಕ್ರೋಮೊಸೋಮ್‌ ಸಮಸ್ಯೆಗಳನ್ನು ಹೊಂದಿರುತ್ತವೆ. ಹೆಣ್ಣುಮಕ್ಕಳಿಗೆ ವಯಸ್ಸಾದಂತೆ ಇಂಥ ಅಂಡಾಣುಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಅಮೆರಿಕದ ಸಂತಾನೋತ್ಪತ್ತಿ ವೈದ್ಯಕೀಯ ಸಂಸ್ಥೆಯ ಪ್ರಕಾರ, ವಯಸ್ಸಾದಂತೆ ಹೆಣ್ಣುಮಕ್ಕಳಲ್ಲಿ ಫಲಿತಗೊಳ್ಳುವಂಥ ಅಂಡಾಣುಗಳ ಕೊರತೆ ಕಂಡು ಬರುತ್ತದೆ. ಇದೊಂದು ಸಹಜ ಪ್ರಕ್ರಿಯೆಯಾಗಿದ್ದು ಇದಕ್ಕೆ ಯಾವುದೇ ಪರಿಹಾರೋಪಾಯಗಳಿಲ್ಲ ಎಂದು ಡಾ. ಬೀನಾ ಹೇಳುತ್ತಾರೆ.

ಹೆಣ್ಣುಮಕ್ಕಳು ತಮ್ಮ 20ನೇ ವಯಸ್ಸಿನ ನಂತರ ಫಲವಂತಿಕೆಯ ಉತ್ತುಂಗ ಶಿಖರದಲ್ಲಿರುತ್ತಾರೆ. 23 ರಿಂದ 31ರ ನಡುವಿನ ಅವಧಿಯು ತಾಯ್ತನವನ್ನು ಅನುಭವಿಸುವ ಉತ್ತಮ ಅವಧಿಯಾಗಿದೆ. ಮೂವತ್ತರ ಅಂಚಿನಲ್ಲಿ 27 ಅಥವಾ 28ರ ಸನಿಹದಲ್ಲಿ ಅಂಡಾಣುಗಳ ಆರೋಗ್ಯ ಕುಸಿಯಲಾರಂಭಿಸುತ್ತದೆ. 31ರ ನಂತರ ಈ ಬೆಳವಣಿಗೆ ಅತಿ ಕ್ಷಿಪ್ರಗತಿಯಲ್ಲಾಗುತ್ತದೆ.  ಪ್ರತಿ ವರ್ಷ ಶೇ 3ರಷ್ಟು ನಿಮ್ಮ ಫಲವಂತಿಕೆಯ ಸಾಧ್ಯತೆಗಳು ಕುಸಿಯಲಾರಂಭಿಸುತ್ತವೆ. ಈ ನಿಟ್ಟಿನಲ್ಲಿ 35ನೇ ವಯಸ್ಸಿಗೆ ಬಂದಾಗ ಕುಂಠಿತಗೊಳ್ಳುವ ವೇಗವೂ ಹೆಚ್ಚುತ್ತದೆ. 39ನೇ ವಯಸ್ಸಿನಲ್ಲಿ ಮಹಿಳೆಯೊಬ್ಬಳು ತನ್ನ 31ನೇ ವಯಸ್ಸಿನಲ್ಲಿ ಹೊಂದಿರುವ ಫಲವಂತಿಕೆಯ ಅರ್ಧದಷ್ಟು ಸಾಧ್ಯತೆಗಳನ್ನು ಹೊಂದಿರುತ್ತಾಳೆ.  42ರ ಹೊತ್ತಿಗೆ ಗರ್ಭಧಾರಣೆಯ ಸಾಧ್ಯತೆಗಳೂ ಮತ್ತೂ ಅರ್ಧದಷ್ಟು ಕಡಿಮೆಯಾಗುತ್ತವೆ ಎನ್ನುತ್ತಾರೆ ಅಡಾಮ್ಸನ್‌.

35 ವರ್ಷದ ಮಹಿಳೆಯರಲ್ಲಿ ಪ್ರತಿ ನಾಲ್ವರಲ್ಲಿ ಒಬ್ಬರು ಗರ್ಭಧಾರಣೆಯ ವೈಫಲ್ಯದಿಂದ ಬಳಲಬಹುದು. ಸರಾಸರಿ ಫಲವಂತಿಕೆಯನ್ನು ಹೊಂದಿರುವ ಮಹಿಳೆಯು 41ರ ವಯಸ್ಸಿನಲ್ಲಿಯೂ ಗರ್ಭಧರಿಸಬಹುದು. ಆದರೆ ನೆನಪಿರಲಿ ನಿಮ್ಮ ಋತುಚಕ್ರ ನಿಲ್ಲುವ ಒಂದು ದಶಕದ ಮೊದಲೇ ಸಹಜವಾಗಿ ಗರ್ಭಧಾರಣೆಯಾಗುವ ಸಾಮರ್ಥ್ಯವನ್ನು ನೀವು ಕಳೆದುಕೊಂಡಿರುತ್ತೀರಿ. ಆದರೆ ನಮ್ಮಲ್ಲಿ ಬದುಕನ್ನು ಬದಲಿಸಬಹುದಾದ ಈ ಋತುಚಕ್ರ ನಿಲ್ಲುವ ಸಮಯವನ್ನು ಲೆಕ್ಕ ಹಾಕುವ ಅಥವಾ ಊಹಿಸುವಂಥ ಯಾವುದೇ ತಪಾಸಣೆಗಳಾಗಲೀ ವೈದ್ಯಕೀಯ ಅನುಕೂಲಗಳಾಗಲೀ ಈವರೆಗೂ ಲಭ್ಯವಿಲ್ಲ.

ಆದರೆ ಲಭ್ಯ ಇರುವ ಎಲ್ಲ ಅಧ್ಯಯನಗಳ ಪ್ರಕಾರ ಮಹಿಳೆಯು ತನ್ನ 41ನೇ ವಯಸ್ಸಿನಲ್ಲಿ ಕೊನೆಯ ಸಹಜ ಗರ್ಭಧಾರಣೆಗೆ ಒಳಪಡಬಹುದಾಗಿದೆ. ಈ ವಯಸ್ಸು ಸರಾಸರಿ ವಯಸ್ಸಾಗಿದೆ ಎನ್ನುವುದು ಗಮನದಲ್ಲಿರಲಿ. ಕೆಲವರಿಗೆ ಇದು 30ನೇ ವರ್ಷವೂ ಆಗಿರಬಹುದು. ಕೆಲವರಿಗೆ 45 ವರ್ಷಗಳೂ ಆಗಿರಬಹುದು. ಸದ್ಯ ಫಲವಂತಿಕೆಯನ್ನು ಅಳೆಯಲು  ಲಭ್ಯ ಇರುವ ಒಂದೇ ಒಂದು ತಪಾಸಣೆಯೆಂದರೆ ಎಫ್‌ಎಸ್‌ಎಚ್‌ (F­SH) ಹಾರ್ಮೋನ್‌ ಪರೀಕ್ಷೆಯಾಗಿದೆ.

ಆದರೆ ಈ ತಪಾಸಣೆಯೂ ನಮಗೆ ಯಾವುದೇ ಆಶಾದಾಯಕ ಉತ್ತರಗಳನ್ನು ನೀಡುವುದಿಲ್ಲ. ಈ ತಪಾಸಣೆಯೂ ಮಹಿಳೆಯು ಫಲವಂತಿಕೆಯ ಎಷ್ಟು ವರ್ಷಗಳನ್ನು ಹೊಂದಿರುವಳು ಎನ್ನುವುದು ಹೇಳಲಾಗುವುದಿಲ್ಲ. ಈ ತಪಾಸಣೆ ಮಾಡಿಸುವ ಹಂತದಲ್ಲಿ ಆಗಲೇ ಅತಿ ವಿಳಂಬವಾಗಿರುತ್ತದೆ ಎನ್ನುವುದು ಗಮನಾರ್ಹ.

Write A Comment