ಕನ್ನಡ ವಾರ್ತೆಗಳು

ಆಲ್ ಮದೀನ ವತಿಯಿಂದ ಅನಾಥಾಲಯದ ನೂತನ ಕಟ್ಟಡ ಶಿಲಾನ್ಯಾಸ.

Pinterest LinkedIn Tumblr

Manjanady_almadina_1

ಉಳ್ಳಾಲ,ಎ.25 : ಅನಾಥ ಮಕ್ಕಳಿಗೆ ಉತ್ತಮ ಶಿಕ್ಷಣದ ವ್ಯವಸ್ಥೆ ಕಲ್ಪಿಸಿರುವ ಅಲ್ ಮದೀನ ಯತೀಂಖಾನ ಕಳೆದ 20 ವರ್ಷಗಳಿಂದ ಜನಪರ ಕೆಲಸ ಗಳನ್ನು ಮಾಡಿದೆ. ವಿವಿಧ ಶಿಕ್ಷಣ ಕೇಂದ್ರಗಳನ್ನು ಈಗಾಗಲೇ ತೆರೆದಿರುವ ಈ ಸಂಸ್ಥೆ ಜಾತಿ ಬೇಧವಿಲ್ಲದೇ ಎಲ್ಲರಿಗೂ ಸಮಾನ ರೀತಿಯಲ್ಲಿ ಶಿಕ್ಷಣ ಒದಗಿಸುತ್ತಿದೆ. ಅಬ್ಬಾಸ್ ಉಸ್ತಾದ್‍ರವರ ಸಾರಥ್ಯದಲ್ಲಿ ಅಸ್ತಿತ್ವಕ್ಕೆ ಬಂದ ಅಲ್ ಮದೀನ ಯತೀಂಖಾನ ಅಭಿವೃದ್ದಿಯತ್ತ ಹೆಜ್ಜೆ ಇಟ್ಟಿರುವುದು ಸ್ವಾಗತಾರ್ಹ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಅವರು ಮಂಜನಾಡಿ ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ವತಿಯಿಂದ ನಿರ್ಮಾಣಗೊಳ್ಳಲಿರುವ ನೂತನ ಅನಾಥಾಲಯ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಅನಾಥ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಅಲ್ ಮದೀನ ಸಂಸ್ಥೆ ನೂತನ ಅನಾಥಾಲಯ ಕಟ್ಟಡ ನಿರ್ಮಿಸಲು ಹೋರಟಿದೆ. ಇದಕ್ಕೆ ಸರಕಾರದಿಂದ ಸಾಧ್ಯವಾದಷ್ಟು ಆಗುವ ಧನ ಸಹಾಯ ಮಂಜೂರು ಮಾಡುವ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

Manjanady_almadina_2

ಸಚಿವರಾದ ರಮಾನಾಥ ರೈ, ಖಾದರ್, ಅಭಯಚಂದ್ರಜೈನ್, ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಐವನ್‍ಡಿ ಸೋಜ, ಕಮರುಲ್ ಇಸ್ಲಾಂ, ಮೊಯ್ದಿನ್ ಬಾವಾ, ಜೆ.ಆರ್.ಲೋಬೊ, ಇಬ್ರಾಹಿಂ ಕೋಡಿಜಾಲ್, ಜಿ.ಪಂ. ಸದಸ್ಯ ಎನ್.ಎಸ್.ಕರೀಂ, ಸಂತೋಷ್ ಕುಮಾರ್ ಬೋಳಿಯಾರ್, ಹೈದರ್ ಪರ್ತಿಪ್ಪಾಡಿ, ಅಲ್ ಮದೀನ ಮೆನೇಜರ್ ಅಬ್ದುಲ್ ಖಾದರ್ ಸಖಾಫಿ, ವಿನಯಕುಮಾರ್ ಸೊರಕೆ,ಮಜೀದ್ ಹಾಜಿ, ಆಲಿಕುಂಞ ಪಾರೆ, ಜಿ.ಎ. ಬಾವಾ, ಬಿ.ಎಚ್. ಖಾದರ್ ಉಪಸ್ಥಿತರಿದ್ದರು.

Write A Comment