ಕನ್ನಡ ವಾರ್ತೆಗಳು

ಅಕ್ರಮ ಮರಳುಗಾರಿಕೆ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಆದೇಶ

Pinterest LinkedIn Tumblr

DC_Census_Meet_1

ಮಂಗಳೂರು,ಎ.24:  ಜಿಲ್ಲೆಯಲ್ಲಿ ಬಿಗು ಕಾನೂನು ಕ್ರಮದ ನಡುವೆಯೂ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುರ ಹಿನ್ನೆಲೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜಂಟಿ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ ಎಂದು ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸಿಆರ್‍ಝೆಡ್ ಪ್ರದೇಶದ ನದಿ ಪಾತ್ರಗಳಲ್ಲಿ ಮರಳುಗಾರಿಕೆ ಹಾಗೂ ಸಾಗಾಣಿಕೆಗೆ ಅನುಮತಿ ನೀಡಲಾಗಿಲ್ಲ. ಹಾಗಿದ್ದರೂ ಸಿಆರ್‍ಝೆಡ್ ಪ್ರದೇಶದ ಪರವಾನಿಗೆ ಉಪಯೋಗಿಸಿ ಮರಳು ಗಣಿಗಾರಿಕೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ಮಾರ್ಚ್‍ನಿಂದ ಜಿಲ್ಲಾಡಳಿತವು ಕ್ರಿಯಾ ಪಡೆಯ ನೇತೃತ್ವದಲ್ಲಿ ಅಕ್ರಮ ಮರಳು ಗಾರಿಕೆ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದೆ ಎಂದರು.

DC_Census_Meet_2

ಕಳೆದ ಮಾರ್ಚ್ 15ರಿಂದ ಎಪ್ರಿಲ್ 15ರವರೆಗೆ ಅನಧಿಕೃತ ಮರಳು ಸಾಗಾಟಕ್ಕೆ ಸಂಬಂಧಿಸಿ 47 ಪ್ರಕರಣಗಳಲ್ಲಿ 5.83 ಲಕ್ಷ ರೂ. ದಂಡ, ಅಧಿಕ ಭಾರದ ಮರಳು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ 35 ಪ್ರಕರಣಗಳಲ್ಲಿ 2.64 ಲಕ್ಷ ರೂ., ಅನಧಿಕೃತ ಮರಳು ಗಣಿಗಾರಿಕೆ ಪ್ರದೇಶಕ್ಕೆ ಸಂಬಂಧಿಸಿ 4 ಪ್ರಕರಣಗಳಲ್ಲಿ 2.78 ಲಕ್ಷ ರೂ. ಹಾಗೂ ಕೇರಳ ರಾಜ್ಯಕ್ಕೆ ಮರಳು ಸಾಗಾಟಕ್ಕೆ ಸಂಬಂಧಿಸಿ ಆರು ಪ್ರಕರಣಗಳಲ್ಲಿ 1.45 ಲಕ್ಷ ರೂ. ದಂಡ ವಸೂಲು ಮಾಡಿದೆ ಎಂದರು.

DC_Census_Meet_3

ಅಕ್ರಮ ಮರಳುಗಾರಿಕೆ ಹಾಗೂ ಸಾಗಾಟಕ್ಕೆ ಸಂಬಂಧಿಸಿ ಮಂಗಳೂರು ತಾಲೂಕಿನಲ್ಲಿ 45, ಬೆಳ್ತಂಗಡಿಯಲ್ಲಿ 34, ಪುತ್ತೂರು 36, ಬಂಟ್ವಾಳ 46, ಮೂಡಬಿದ್ರೆ 15, ಕಡಬ 1 ಹಾಗೂ ಸುಳ್ಯ ತಾಲೂಕಿನಲ್ಲಿ 28 ಸೇರಿದಂತೆ ಒಟ್ಟು 205 ವಾಹನಗಳನ್ನು ವಶಪಡಿ ಸಿಕೊಳ್ಳಲಾಗಿದೆ.ಇದಲ್ಲದೆ ಮಂಗಳೂರು ತಾಲೂಕಿನಲ್ಲಿ 7 ಡೋಸರ್‍ಗಳು ಹಾಗೂ ಒಂದು ಜೆಸಿಬಿಯನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದರು.

Write A Comment