ಕನ್ನಡ ವಾರ್ತೆಗಳು

ಕರ್ನಾಟಕ ಒಪ್ಟಿಕಲ್‌ನ ಲ| ಭಾಸ್ಕರ್ ಕೆ.ಶೆಟ್ಟಿ ನಿಧನ

Pinterest LinkedIn Tumblr

Bhaskar-K.Shetty

ಮುಂಬಯಿ, ಎ.23: ಮಹಾನಗರದಲ್ಲಿನ ತುಳು-ಕನ್ನಡಿಗರ ಅಚ್ಚುಮೆಚ್ಚಿನ ಹೆಸರಾಂತ ಸಮಾಜ ಸೇವಕ, ಲೇಖಕ, ಕರ್ನಾಟಕ ಒಪ್ಟಿಕಲ್‌ನ ಮಾಲೀಕ ಲಯನ್ ಭಾಸ್ಕರ್ ಕೃಷ್ಣ ಶೆಟ್ಟಿ (71.) ಅವರು ಇಂದಿಲ್ಲಿ ಗುರುವಾರ ಮುಂಜಾನೆ ಅಂಧೇರಿ ಪೂರ್ವದ ಪಂಪ್‌ಹೌಸ್ ಅಲ್ಲಿನ ಸ್ವನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.

ಉಡುಪಿ ಜಿಲ್ಲೆಯ ಕಡೇಕಾರು ಮೂಲತಃ ಭಾಸ್ಕರ್ ಶೆಟ್ಟಿ ಅವರು ಮುಂಬಯಿಯಲ್ಲಿನ ಕರ್ನಾಟಕ ರಾತ್ರಿ ಶಾಲೆಯಲ್ಲಿ ಶಿಕ್ಷಣ ಪಡೆದು ಕ್ರಮೇಣ ಈ ಶಾಲೆಯ ಹಳೆ ವಿದ್ಯಾಥಿ ಸಂಘದ ಅಧ್ಯಕ್ಷರಾಗಿಯೂ ಶ್ರಮಿಸಿದ್ದರು. ಸಾಹಿತ್ಯ ಬಳಗ ಮುಂಬಯಿ ಇದರ ಸ್ಥಾಪಕಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅತೀವ ಸಾಮಾಜಿಕ ಕಾಳಜಿಯನ್ನು ಹೊಂದಿದ್ದ ಅವರು ಬೃಹನ್ಮುಂಬಯಿಯಲ್ಲಿನ ಹತ್ತಾರು ತುಳು-ಕನ್ನಡ ಸಂಘ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳ ಮುಖೇನ ಸಮಾಜಮುಖಿ ಸೇವೆ ಸಲ್ಲಿಸಿ ಜನಾನುರೆಣಿಸಿದ್ದರು.

ಮೃತರು ಪತ್ನಿ, ಎರಡು ಹೆಣ್ಣು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಭಾಸ್ಕರ್ ಶೆಟ್ಟಿ ನಿಧನಕ್ಕೆ ನಗರದ ಹತ್ತಾರು ಸಂಘಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದಿಲ್ಲಿ ಸಂಜೆ ಜೋಗೇಶ್ವರಿ ಪೂರ್ವದ ರುಧ್ರಭೂಮಿಯಲ್ಲಿ ನೆರವೇರಿಸಲಾಯಿತು.

ಶಿಮುಂಜೆ ಪರಾರಿ, ಜಿ.ಟಿ ಆಚಾರ್ಯ, ಚಿತ್ರಾಪು ಕೆ.ಎಂ.ಕೋಟ್ಯಾನ್, ಎಸ್.ಕೆ ಸುಂದರ್, ಡಿ.ಕೆ ಶೆಟ್ಟಿ, ಆರ್.ಸಿ ಶೆಟ್ಟಿ, ಜಯ ಎನ್.ಶೆಟ್ಟಿ, ಆರ್.ಕೆ ಮೂಲ್ಕಿ, ತೋನ್ಸೆ ವಿಜಯಕುಮಾರ್ ಶೆಟ್ಟಿ, ಕೇಶವ ಕೋಟ್ಯಾನ್, ಹರೀಶ್ ಜಿ.ಪೂಜಾರಿ, ಎಸ್.ಎಂ ಶೆಟ್ಟಿ, ರವೀಂದ್ರ ಪೂಂಜ, ಸಿದ್ಧು ಮುಳಗೆ ಸೇರಿದಂತೆ ಅನೇಕ ಗಣ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿ ಅಗಲಿದ ಮಹಾನ್ ಚೇತನಕ್ಕೆ ಶ್ರದ್ದಾಂಜಲಿ ಅರ್ಪಿಸಿದರು.

Write A Comment