ಕನ್ನಡ ವಾರ್ತೆಗಳು

ಜನತೆಗೆ ಶಾಂತಿಯ ಸಂದೇಶ ಸಾರಿ ಧರ್ಮದ ಬಗ್ಗೆ ಅರಿವು ಮೂಡಿಸುವ ಹಂತಕ್ಕೆ ಬೆಳೆದಿದೆ ನಮ್ಮ ದೇಶ : ಖಾಝಿ ಎಡಪ್ಪಾಲಂ ಮಹ್ಮೂದು ಮುಸ್ಲಿಯಾರ್

Pinterest LinkedIn Tumblr

ullala_uroos_photo

ಉಳ್ಳಾಲ,ಎಪ್ರಿಲ್.22:  ಆಧುನಿಕ ಯುಗಕ್ಕೆ ಕಾಲೇಜುಗಳು ದಹ್‌ವಾ ಕಾಲೇಜು, ಧಾರ್ಮಿಕ ಶಿಕ್ಷಣ ಕೇಂದ್ರಗಳು ಲೌಕಿಕ ಶಿಕ್ಷಣಕೇಂದ್ರ ಮತ್ತು ಸಮುದಾಯವನ್ನು ನಿಯಂತ್ರಿಸಲು ಖಾಝಿಗಳು ಅಗತ್ಯವಾಗಿದೆ. ಪ್ರವಾದಿಯವರ ಕಾಲದಲ್ಲಿ ಶಿಕ್ಷಣ ಕೇಂದ್ರಗಳು ಇರಲಿಲ್ಲ. ಆದರೆ ಅವರು ಆ ಕಾಲದಲ್ಲಿ ಲೋಕವನ್ನೇ ಅರ್ಥಮಾಡಿಕೊಂಡಿದ್ದರು. ಅದೇ ರೀತಿ ದಾರಿ ತಪ್ಪಿರುವ ಜನತೆಗೆ ಶಾಂತಿಯ ಸಂದೇಶ ಸಾರಿ ಧರ್ಮದ ಬಗ್ಗೆ ಅರಿವು ಮೂಡಿಸಿದ ಹಿನ್ನೆಲೆಯಲ್ಲಿ ದೇಶ ಈ ಹಂತಕ್ಕೆ ಬೆಳೆದಿದೆ ಎಂದು ಕೊಡಗು ಸಹಾಯಕ ಖಾಝಿ ಎಡಪ್ಪಾಲಂ ಮಹ್ಮೂದು ಮುಸ್ಲಿಯಾರ್ ಹೇಳಿದರು. ಅವರು ಉಳ್ಳಾಲ ಉರೂಸ್ ಪ್ರಯುಕ್ತ ಮಂಗಳವಾರ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ದೇಶದಲ್ಲಿ ಬೇಕಾದಷ್ಟುಶಿಕ್ಷಣ ಕೇಂದ್ರಗಳು ಈಗಿವೆ. ಆದರೆ ಅದೇ ಹಂತಕ್ಕೆ ದೇಶ ಬೆಳೆಯಲಿಲ್ಲ. ಮುಸ್ಲಿಂ ಸಮುದಾಯದಲ್ಲಿ ಬಹಳಷ್ಟು ಮಂದಿ ಹಿಂದುಳಿದಿದ್ದಾರೆ. ಮುಸ್ಲಿಂ ಸಮುದಾಯದ ನಿಯಂತ್ರಿಸಲು ಇರುವ ಖಾಝಿಗಳಿಗೆ ಬಹಳಷ್ಟು ಸ್ಥಾನಮಾನಗಳಿವೆ. ಆದರೆ ಆ ಸ್ಥಾನಮಾನ ಗೌರವವನ್ನು ನಾವು ನೀಡುತ್ತಿಲ್ಲ. ಖಾಝಿಗಳಿಗೆ,ತಂಙಳ್‌ಗೆ, ಔಲಿಯಾಗಳಿಗೆ ಸಲ್ಲಬೇಕಾದ ಗೌರವವನ್ನು ನಾವು ಕೊಡಬೇಕು ಎಂದರು.

ಮಳ್‌ಹರ್ ದ‌ಅವಾ ಕಾಲೇಜು ಪ್ರಾಂಶುಪಾಲ ಅನಸ್ ಸಿದ್ದೀಖಿ ಅಲ್ ಕಾಮಿಲ್ ಶಿರಿಯ,ರಹ್ಮತುಲ್ಲಾ ಸಖಾಫಿ ಎಳಮರಂ ಧಾರ್ಮಿಕ ಉಪನ್ಯಾಸ ನೀಡಿದರು. ಅಹ್ಮದ್ ಬಾವ ಮುಸ್ಲಿಯಾರ್ ದುವಾ ನೆರವೇರಿಸಿದರು. ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ಅಲ್‌ಬುಖಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಝಿಯಾದ್ ತಂಙಳ್ ಅತಿಥಿಗಳನ್ನು ಸ್ವಾಗತಿಸಿದರು. ಎಸಿ‌ಎಂ ಕಾಂತಪುರಂ, ಸಲಾಂ ತಂಙಳ್ ಪೂಂಜಾಳಕಟ್ಟೆ, ಅಮೀರ್ ತಂಙಳ್ ಅಮ್ಮೆಂಬಳ, ಮಜೀದ್ ಹಾಜಿ ಉಚ್ಚಿಲ, ಇಬ್ರಾಹಿಂ ಅಹ್ಸನಿ, ಅಝೀಝ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು.
ಆರಿಫ್ ಕಲ್ಲಕಟ್ಟ_

Write A Comment