ಕನ್ನಡ ವಾರ್ತೆಗಳು

ಕಾಂಗ್ರೇಸ್ ಮುಖಂಡ ಪೂಜಾರಿ ನೇತೃತ್ವದಲ್ಲಿ ಉಳ್ಳಾಲ ಉರೂಸ್ ಗೆ ಹೊರೆಕಾಣಿಕೆ

Pinterest LinkedIn Tumblr

Uroos_Hora_kanikke_1

ಮಂಗಳೂರು,ಎಪ್ರಿಲ್.20: ನಗರದ ನೆಹರೂ ಮೈದಾನದಿಂದ ಉಳ್ಳಾಲ ದರ್ಗಾದವರೆಗೆ ಕಾಂಗ್ರೆಸ್‌ ಕಾರ್ಯಕರ್ತರ ವತಿಯಿಂದ ಸಾಗಿದ ಹೊರೆಕಾಣಿಕೆ ಮೆರವಣಿಗೆಗೆ ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡ ಜನಾರ್ದನ ಪೂಜಾರಿ ಅವರು ಚಾಲನೆ ನೀಡಿದರು ,ಶಾಂತಿ ಸಾಮರಸ್ಯವನ್ನು ಜಗತ್ತಿಗೆ ಸಾರಿದ ಹಾಗೂ ಎಲ್ಲ ಧರ್ಮದ ಜನರ ಆರಾಧ್ಯ ಸ್ಥಳವಾಗಿರುವ ಉಳ್ಳಾಲ ದರ್ಗಾದಲ್ಲಿ ಪವಿತ್ರ ಊರೂಸ್‌ ನಡೆಯುತ್ತಿದ್ದು, ಎಲ್ಲ ಧರ್ಮದವರು ಕೂಡ ಇದರಲ್ಲಿ ಭಾಗವಹಿಸುತ್ತಿದ್ದಾರೆ. ಉಳ್ಳಾಲದ ಪ್ರತೀ ಐದು ವರ್ಷಕೊಮ್ಮೆ ನಡೇಯುವ ಉರೂಸು ಸಂದರ್ಭ ಹೊರೆಕಾಣಿಕೆ ಸಲ್ಲಿಸಲಾಗುತ್ತಿದ್ದು, ಈ ಬಾರಿಯೂ ಇದನ್ನು ನಡೆಸಲಾಗಿದೆ ಎಂದು ಅವರು ಈ ಸಂಧರ್ಭದಲ್ಲಿ ಹೇಳಿದರು.

Uroos_Hora_kanikke_2 Uroos_Hora_kanikke_3 Uroos_Hora_kanikke_4 Uroos_Hora_kanikke_5 Uroos_Hora_kanikke_6 Uroos_Hora_kanikke_7 Uroos_Hora_kanikke_8 Uroos_Hora_kanikke_9 Uroos_Hora_kanikke_10 Uroos_Hora_kanikke_11 Uroos_Hora_kanikke_12 Uroos_Hora_kanikke_14 Uroos_Hora_kanikke_15 Uroos_Hora_kanikke_18 Uroos_Hora_kanikke_19 Uroos_Hora_kanikke_20 Uroos_Hora_kanikke_21

ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಸೇರಿ ಒಟ್ಟು ಸುಮಾರು 1,000 ಮುಡಿ ಅಕ್ಕಿ ಹಾಗೂ ಇತರ ಸಾಮಾನುಗಳನ್ನು ಹೊರೆಕಾಣಿಕೆಯಲ್ಲಿ ಅರ್ಪಿಸಲಾಯಿತು.

ಶಾಸಕ ಜೆ.ಆರ್‌.ಲೋಬೋ, ಕುದ್ರೋಳಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಎಚ್‌.ಎಸ್‌.ಸಾಯಿರಾಂ, ಕೋಶಾಧಿಕಾರಿ ಪದ್ಮಾರಾಜ್‌ ಆರ್‌, ಮನಪಾ ಸದಸ್ಯರಾದ ಲ್ಯಾನ್ಸ್‌ಲಾಟ್‌ ಪಿಂಟೋ, ಪ್ರಕಾಶ್‌ ಸಾಲ್ಯಾನ್‌, ರಾಧಾಕೃಷ್ಣ, ದೀಪಕ್‌ ಪೂಜಾರಿ, ಕವಿತಾ, ಶೈಲಜಾ, ರತಿಕಲಾ, ನಾಗವೇಣಿ, ಅಪ್ಪಿ, ಪ್ರವೀಣ್‌ ಆಳ್ವ, ಮುಖಂಡರಾದ ವಿಜಯ್‌ ಕುಮಾರ್‌ ಶೆಟ್ಟಿ, ಎ.ಸಿ.ಭಂಡಾರಿ, ಈಶ್ವರ್‌ ಉಳ್ಳಾಲ್‌, ಹರಿಕೃಷ್ಣ ಬಂಟ್ವಾಳ್‌, ವಿಶ್ವಾಸ್‌ದಾಸ್‌, ನಾಗೇಂದ್ರ ಕುಮಾರ್‌, ಸುರೇಶ್‌ ಬಲ್ಲಾಳ್‌, ಕಮಲಾಕ್ಷ ಸಾಲ್ಯಾನ್‌, ಟಿ.ಕೆ.ಸುಧೀರ್‌, ಬದ್ರುದ್ದೀನ್‌, ನಝಿರ್‌ ಬಜಾಲ್‌ ಮುಂತಾದವರು ಉಪಸ್ಥಿತರಿದ್ದರು.

Write A Comment