ಕನ್ನಡ ವಾರ್ತೆಗಳು

ಡಿಸಿ‌ಐಬಿ ಪೊಲೀಸರ ಕಾರ್ಯಾಚರಣೆ: ಲ್ಯಾಪ್‌ಟಾಪ್ ಕಳ್ಳ ಸೆರೆ

Pinterest LinkedIn Tumblr

ಉಡುಪಿ: ಹಿರಿಯಡಕ ಠಾಣಾ ವ್ಯಾಪ್ತಿಯಲ್ಲಿ ಲ್ಯಾಪ್ ಟಾಪ್ ಕಳವು ಮಾಡಿದ ಆರೋಪಿಯನ್ನು ಉಡುಪಿ ಜಿಲ್ಲಾ ಅಪರಾಧ ಗುಪ್ತವಾರ್ತಾ ವಿಭಾಗದ (ಡಿಸಿ‌ಐಬಿ) ಪೊಲೀಸರು  ಬಂಧಿಸಿ ಲ್ಯಾಪ್‌ಟಾಪ್ ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರ್ಕಳ ಮುದ್ರಾಡಿಯ ರಾಜೇಂದ್ರ ಶೆಟ್ಟಿ (42) ಬಂಧಿತ ವ್ಯಕ್ತಿ.

Udp_Laptop_Theaft

 

ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ಬಳಿಯ ರಾಜಾರಾಮ ಅಡಿಗ ಅವರ ಜ್ಯೋತಿಷ ಕಚೇರಿಯಲ್ಲಿದ್ದ ಏಸರ್ ಕಂಪೆನಿಯ ಲ್ಯಾಪ್ ಟಾಪ್ ಅನ್ನು ಎ. 18ರಂದು ಯಾರೋ ಕಳವು ಮಾಡಿದ್ದರು.

ಉಡುಪಿ ಎಸ್‌ಪಿ ಅಣ್ಣಾಮಲೈ ಕೆ., ಹೆಚ್ಚುವರಿ ಎಸ್‌ಪಿ ಸಂತೋಷ್ ಕುಮಾರ್ ನಿರ್ದೇಶನ, ಡಿವೈ‌ಎಸ್‌ಪಿ ಚಂದ್ರಶೇಖರ್ ಕೆ.ಎಂ. ಮಾರ್ಗದರ್ಶನದಲ್ಲಿ ಡಿಸಿ‌ಐಬಿಯ ಎ‌ಎಸ್‌ಐ ರೊಸಾರಿಯಾ ಡಿ’ಸೋಜ ಅವರು ಹಿರಿಯಡಕ ಜಂಕ್ಷನ್ ಬಳಿ ಎ. 18ರಂದೇ ಆರೋಪಿ ರಾಜೇಂದ್ರ ಶೆಟ್ಟಿಯನ್ನು ಬಂಧಿಸಿದ್ದರು.

Write A Comment