ಮುಂಬಯಿ,ಎ.18: ಆಸಿಡ್ ದಾಳಿಗೆ ಬಲಿಪಶುಯಾದ ಯುವತಿ ಸೋನಾಲಿ ಮುಖರ್ಜಿ ಬುಧವಾರ ಸಿವಿಲ್ ಎಂಜಿನಿಯರಾದ ಚಿತ್ತರಂಜನ್ ತಿವಾರಿಯ ಕೈ ಹಿಡಿದ್ದಾರೆ.
ಸರಕಾರದ ಬಳಿ ತನಗೆ ಕೆಲಸ ನೀಡುವಂತೆ ಆಗ್ರಹಿಸಿ ಸೋನಾಲಿ ಮಾಧ್ಯಮದ ಮುಂದೆ ಬಂದಾಗ ಮತ್ತು ಕೆಬಿಸಿ ಕಾರ್ಯಕ್ರಮದ ಮೂಲಕ ಬಿಗ್ ಬಿ ಅಮಿತಾಬ್ ಬಚ್ಚನ್ ಅವರನ್ನು ಪ್ರಭಾವಿತಗೊಳಿಸಿದ್ದ ಸೋನಾಲಿಯ ಬಗ್ಗೆ ತಿಳಿದುಕೊಂಡಿದ್ದು, ಆಕೆಯ ಆತ್ಮವಿಶ್ವಾಸಕ್ಕೆ ಪ್ರಭಾವಿತನಾದ ಚಿತ್ತರಂಜನ್ ಫೇಸ್‌ಬುಕ್‌ನಲ್ಲಿ ಫ್ರೆಂಡ್‌ಶಿಪ್ ಮನವಿ ಕಳುಹಿಸಿದ್ದ. ಈ ರೀತಿ ಸ್ನೇಹಿತರಾದ ಅವರು ನಂತರ ಪ್ರೀತಿಸಿ ಮದುವೆಯಾದರು.
ನನ್ನ ಬದುಕು ಎಲ್ಲವನ್ನು ಕಳೆದುಕೊಂಡು ನನಗೆ ಚಿತ್ತರಂಜನ್ ನಾನು ಕಳೆದುಕೊಂಡ ಸಂತೋಷವನ್ನು ಮರಳಿ ತಂದ ಎಂದು ಸೋನಾಲಿ
ಹೇಳಿದರು. ಸೋನಾಲಿ 18 ವರ್ಷದವಳಿದ್ದಾಗ ಆಕೆಯ ಮೇಲೆ ಆಸಿಡ್ ದಾಳಿಯಾಗಿತ್ತು.