ಕನ್ನಡ ವಾರ್ತೆಗಳು

ನಾಳೆ ಕುಡ್ಲ ಕುದ್ರು ಐಲ್ಯಾಂಡ್‌ನಲ್ಲಿ “ಕುಡ್ಲ ಕುದ್ರು ಸೀ ಫುಡ್ ಫೆಸ್ಟಿವಲ್” – ಕರಾವಳಿಯ ತಾಜಾ ಮೀನುಗಳ ವಿಶೇಷ ಆಕರ್ಷಣೆ

Pinterest LinkedIn Tumblr

kudla_kudru_Fest_1

ಮಂಗಳೂರು : ರೆಡ್ ರಾಕ್ ರೆಸಿಡೆನ್ಸಿ ಮುಕ್ಕ, ಕ್ರೂಸ್ ಎನ್ ಡೈನ್ ಆಂಡ್ ಕ್ಯಾಪ್ಟನ್ ಕುಕ್ಕ್ ಫ್ಲೋಟಿಂಗ್ ರೆಸ್ಟೋರೆಂಟ್ಸ್ ಸಹಯೋಗದಲ್ಲಿ ನಾಳೆ (ಎಪ್ರಿಲ್. 19ರಂದು) ಸಂಜೆ 6  ಗಂಟೆಯಿಂದ ನಗರದ ಬೋಳೂರು, ಸುಲ್ತಾನ್ ಬತ್ತೇರಿ ಸಮೀಪದ ಕುಡ್ಲ ಕುದ್ರು ಐಲ್ಯಾಂಡ್ ನಲ್ಲಿ “ಕುಡ್ಲ ಕುದ್ರು ಸೀ ಫುಡ್ ಫೆಸ್ಟಿವಲ್” ಆಯೋಜಿಸಲಾಗಿದೆ ಎಂದು ಕುಡ್ಲ ಕುದ್ರು ಐಲ್ಯಾಂಡ್‌ ಹಾಗೂ ಕ್ರೂಸ್ ಎನ್ ಡೈನ್ ಆಂಡ್ ಕ್ಯಾಪ್ಟನ್ ಕುಕ್ಕ್ ಫ್ಲೋಟಿಂಗ್ ರೆಸ್ಟೋರೆಂಟ್ಸ್‌ನ ಆಡಳಿತ ನಿರ್ದೇಶಕ ಚರಣ್ ರಾಜ್ ಕರ್ಕೇರಾ ಬೋಳೂರು ತಿಳಿಸಿದ್ದಾರೆ.

ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯು ಕುಡ್ಲ ಕುದ್ರುವಿನ ಮೂಲಕ ಕರಾವಳಿಯ ಪ್ರವಾಸೋಧ್ಯಮಕ್ಕೆ ಹೊಸ ರೂಪ ನೀಡಿರುವುದು ಮಾತ್ರವಲ್ಲದೇ ವಾರಾಂತ್ಯದಲ್ಲಿ ಬೇರೆ ಬೇರೆ ಭಾಗದ ಪ್ರವಾಸಿಗರು ಮಂಗಳೂರಿನತ್ತ ಹೆಚ್ಚಿನ ಸಂಖೆಯಲ್ಲಿ ಬರುವಂತೆ ಮಾಡಿದೆ. ಕ್ರೂಸ್ ಎನ್ ಡೈನ್ ಕ್ಯಾಪ್ಟನ್ ಕುಕ್ ಸಂಸ್ಥೆಯು ಈಗಾಗಲೇ ಬೋಳೂರಿನಲ್ಲಿ ಫ್ಲೋಟಿಂಗ್ ರೆಸ್ಟೋರೆಂಟ್ಸ್ ನ್ನು ತೆರೆದಿದೆ. ಇದೀಗ ಕುಡ್ಲ ಕುದ್ರುವಿನಲ್ಲಿ ಕರಾವಳಿಯ ತಾಜಾ ಮೀನುಗಳ ವಿಶೇಷ ವೈವಿಧ್ಯಮ ಖಾದ್ಯಗಳನ್ನು ಉಣ ಬಡಿಸುವ ನಿಟ್ಟಿನಲ್ಲಿ ಕುಡ್ಲ ಕುದ್ರು ಸೀ ಫುಡ್ ಫೆಸ್ಟಿವಲ್ ಅನ್ನು ಹಮ್ಮಿಕೊಂಡಿದೆ ಎಂದರು.

kudla_kudru_Fest_2

ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೋ ಅವರು “ಕುಡ್ಲ ಕುದ್ರು ಸೀ ಫುಡ್ ಫೆಸ್ಟಿವಲ್ ಅನ್ನು ಉದ್ಘಾಟಿಸಲಿರುವರು. ಯೋಜಕದ ಇಂಡಿಯಾದ ಆಡಳಿತ ನಿರ್ದೇಶಕ ಜಗದೀಶ ಬೋಳೂರು, ಮಣಿರಾಜ್ ಶೆಟ್ಟಿ ಕೊಡಿಯಾಲ್ ಗುತ್ತು, ಕೆನರಾ ವಾಣಿಜ್ಯ ಮಂಡಳಿ ಅಧ್ಯಕ್ಷ ನಿಗಮ್ ವಾಸನಿ, ಗೋಲ್ಡ್ ಖಜಾನದ ಹಾಜಿ ಅಬ್ಬೂಬಕ್ಕರ್ ತುಮಿನಾಡು, ನಗರ ಪಾಲಿಕೆಯ ಸ್ಥಳೀಯ ಸದಸ್ಯೆ ಲತಾ ಕಮಾಲಾಕ್ಷ ಸಾಲಿಯಾನ್ ಮುಂತಾದವರು ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಅವರು ಹೇಳಿದರು.

“ಕುಡ್ಲ ಕುದ್ರು ಸೀ ಫುಡ್ ಫೆಸ್ಟಿವಲ್” ನಲ್ಲಿ ವೈವಿಧ್ಯಮಯ ಆಹಾರವನ್ನು ಸವಿಯಲು ತಲಾ ಒಬ್ಬರಿಗೆ ರೂ 500/ ಪ್ರವೇಶ ದರವನ್ನು ನಿಗದಿ ಪಡಿಸಲಾಗಿದೆ. ಸುಲ್ತಾನ್ ಬತ್ತೇರಿ ಸಮೀಪದ ಸೇಸಮ್ಮ ಗಾರ್ಡನ್‌ನಲ್ಲಿ ವಾಹನ ಪಾರ್ಕಿಂಗ್ ಹಾಗೂ ಬೋರ್ಡಿಂಗ್ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ವಿವರ ಹಾಗೂ ಪ್ರವೇಶಕ್ಕಾಗಿ ಮೊಬೈಲ್ ಸಂಖ್ಯೆ 9845608119 ಅನ್ನು ಸಂಪರ್ಕಿಸುವಂತೆ ಚರಣ್ ರಾಜ್ ಕರ್ಕೇರಾ ತಿಳಿಸಿದ್ದಾರೆ.

kudla_kudru_Fest_4 kudla_kudru_Fest_5 kudla_kudru_Fest_6 kudla_kudru_Fest_7 kudla_kudru_Fest_8

kudla_kudru_Fest_3

ಪತ್ರಿಕಾ ಗೋಷ್ಠಿಯಲ್ಲಿ ಗಿರಿಧರ್ ಕೋಟ್ಯಾನ್ ಹಾಗೂ ಜಗದೀಶ್ ಶೆಟ್ಟಿ   ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.

Write A Comment