ಕನ್ನಡ ವಾರ್ತೆಗಳು

ದ.ಕ. ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಅಕ್ರಮ ಮರಳುಗಾರಿಕೆ ವಿರುದ್ಧ ಮತ್ತಷ್ಟು ಕಠಿಣ ಕ್ರಮದ ಬಗ್ಗೆ ಚರ್ಚೆ

Pinterest LinkedIn Tumblr

Sand_Task_Meet_1

ಮಂಗಳೂರು, ಎ.17: ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಲು ಮತ್ತಷ್ಟು ಕಠಿಣ ಕ್ರಮಗಳನ್ನು ಅಳವಡಿಸುವ ಕುರಿತಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಚಿಂತನೆ ನಡೆಸಿದೆ. ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಅಧ್ಯಕ್ಷತೆಯಲ್ಲಿ ಇಂದು ನಡೆದ ದ.ಕ. ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಹಲವಾರು ಕಠಿಣ ಕ್ರಮಗಳ ಕುರಿತಂತೆ ಚರ್ಚಿಸಲಾಯಿತು. 

ಈಗಾಗಲೇ ಜಿಲ್ಲೆಯಲ್ಲಿ 10 ಚಕ್ರಗಳ ವಾಹನಗಳಲ್ಲಿ ಮರಳು ಸಾಗಾಟವನ್ನು ನಿಷೇಧಿಸಲಾಗಿದ್ದು, ಶೀಘ್ರ ದಲ್ಲೇ ಮರಳು ಸಾಗಾಟ ವಾಹನಗಳಿಗೆ ಜಿಪಿಎಸ್ ಕಡ್ಡಾಯಗೊಳಿಸಲು ಮಂಗಳೂರು ಪೊಲೀಸ್ ಆಯುಕ್ತ ಎಸ್. ಮುರುಗನ್ ಸಲಹೆ ನೀಡಿದರು.

ಮರಳುಗಾರಿಕೆ ನಡೆಯುವಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ : ಮರಳುಗಾರಿಕೆ ನಡೆಯುವ ನದಿ, ಸಮುದ್ರ ತೀರಗಳಲ್ಲಿ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಕಾರ್ಪಸ್ ನಿಧಿಯಿಂದ ಸಿಸಿ ಕ್ಯಾಮೆರಾಗಳನ್ನು ಅಳವ ಡಿಸಿದರೆ, ಲಾರಿಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಅಧಿಕ ವಾಗಿ ಮರಳು ತುಂಬಿಸುವುದು, ಯಂತ್ರಗಳ ಬಳಕೆ ಬಗ್ಗೆ ನಿಗಾ ವಹಿಸಲು ಸಾಧ್ಯವಾಗಲಿದೆ ಎಂದು ಜಿಲ್ಲಾ ಎಸ್ಪಿ ಡಾ.ಶರಣಪ್ಪ ಎಸ್. ಡಿ. ಸಲಹೆ ನೀಡಿದರು.

Sand_Task_Meet_2

ಅಧಿಕ ಪ್ರಮಾಣದಲ್ಲಿ ಮರಳು ಸಾಗಾಟದ ವಾಹನಗಳ ಪರವಾನಿಗೆ ರದ್ದು : ನಿಯಮದ ಪ್ರಕಾರ ಪರವಾನಿಗೆ ಇರುವ ಲಾರಿ ಯಲ್ಲಿ 10 ಟನ್ ಮರಳು ಸಾಗಾಟಕ್ಕೆ ಅವಕಾಶವಿದೆ. ಆದರೆ ಜಿಲ್ಲೆಯಲ್ಲಿ ಮರಳು ಸಾಗಾಟದ ಬಹುತೇಕ ಲಾರಿಗಳು ತಮ್ಮ ವಾಹನದ ಎತ್ತರವನ್ನು ಹೆಚ್ಚಿಸಿ ಕೊಂಡು ಅಕ್ರಮವಾಗಿ ಅಧಿಕ ಪ್ರಮಾಣದಲ್ಲಿ ಮರಳು ಸಾಗಾಟ ನಡೆಸುತ್ತಿರುವುದು ಸರ್ವೇ ಸಾಮಾನ್ಯವಾ ಗಿದೆ. ಈ ಹಿನ್ನೆಲೆಯಲ್ಲಿ ಅಂತಹ ಲಾರಿಗಳನ್ನು ವಶಪ ಡಿಸಿಕೊಂಡು ವಾಹನದ ಪರವಾನಿಗೆಯನ್ನು ರದ್ದುಪಡಿ ಸಬೇಕೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಪೊಲೀಸ್ ಆಯುಕ್ತ ಎಸ್. ಮುರುಗನ್ ನಿರ್ದೇಶನ ನೀಡಿದರು.

ಜಿಪಿಎಸ್ ಅಳವಡಿಸದ ವಾಹನಗಳನ್ನು ವಶಪಡಿಸಿ ಕೊಳ್ಳುವ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಆಯುಕ್ತ ಎಸ್.ಮುರುಗನ್ ಸೂಚಿಸಿದಾಗ, ಮರಳು ಸಾಗಾಟದಾರರು ಪರವಾನಿಗೆ ಹಾಜರುಪಡಿಸುವ ಸಾಧ್ಯತೆ ಇರುತ್ತದೆ ಎಂದು ಅಧಿಕಾರಿಗಳು ಅಂಜಿಕೆ ವ್ಯಕ್ತಪಡಿಸಿದರು. ಅದರ ಬಗ್ಗೆ ಚಿಂತೆ ಬೇಡ, ನೀವು ನೇರವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ ಎಫ್‌ಐಆರ್ ದಾಖಲಿಸಿಕೊಳ್ಳಿ. ಎಫ್‌ಐಆರ್ ದಾಖಲಿಸ ದಿದ್ದರೆ ನನಗೆ ನೇರವಾಗಿ ದೂರು ನೀಡಿ ಎಂದು ಎಸ್.ಮುರುಗನ್ ತಿಳಿಸಿದರು.

Sand_Task_Meet_3

ವಾಹನ ಪರವಾನಿಗೆ ರದ್ದುಪಡಿಸಿ : ಆರ್‌ಟಿಒ ಅಧಿಕಾರಿಗಳಿಗೆ ತಾಕೀತು

ಅಧಿಕ ಪ್ರಮಾಣದಲ್ಲಿ ಮರಳು ಸಾಗಾಟ ಮಾಡುವ ಲಾರಿಗಳಿಗೆ ದಂಡ ಹಾಕುವುದರಿಂದ ಏನೂ ಪ್ರಯೋಜನವಾಗದು. ಅವರು ದಂಡ ತುಂಬಿ ಅದೇ ವಾಹನದಲ್ಲಿ ಮತ್ತೆ ಮರಳು ಸಾಗಾಟ ಮುಂದು ವರಿಸುತ್ತಾರೆ. ಆ ದಂಡದ ಹಣವನ್ನೂ ಗ್ರಾಹಕರಿಂದಲೇ ವಸೂಲು ಮಾಡುವ ಸಂಭವವೇ ಅಧಿಕ. ಹಾಗಾಗಿ ವಾಹನಗಳ ಪರವಾನಿಗೆ ರದ್ದುಪಡಿಸಿದರೆ, ಇಂತಹ ಅಕ್ರಮ ತಪ್ಪುತ್ತದೆ ಎಂದು ಎಸ್.ಮುರುಗನ್ ಆರ್‌ಟಿಒ ಅಧಿಕಾರಿಗಳಿಗೆ ತಾಕೀತು ಮಾಡಿದರು.

2014-15ನೆ ಸಾಲಿನಲ್ಲಿ ಅಕ್ರಮ ಮರಳು ಗಣಿಗಾ ರಿಕೆಯ 121 ಪ್ರಕರಣಗಳಲ್ಲಿ 27.370 ಲಕ್ಷ ರೂ. ದಂಡ ಹಾಗೂ ಅಕ್ರಮ ಮರಳು ಸಾಗಾಟದಡಿ 474 ವಾಹನಗಳಿಗೆ ದಂಡ ವಿಧಿಸಿ 38.540 ಲಕ್ಷ ರೂ. ಸಂಗ್ರಹಿಸಲಾಗಿದೆ ಎಂದು ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ರಾಮಪ್ಪ ತಿಳಿಸಿದರು. ಸಭೆಯಲ್ಲಿ ಜಿ.ಪಂ. ಸಿಇಒ ಶ್ರೀವಿದ್ಯಾ, ಎಎಸ್ಪಿ ಶೇಖರಪ್ಪ, ಸಹಾಯಕ ಸಾರಿಗೆ ಅಧಿಕಾರಿ ಜಿ.ಎಸ್. ಹೆಗ್ಡೆ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಮಿಕರ ಬಗ್ಗೆ ಮರುಗಿದ ಜಿಲ್ಲಾಧಿಕಾರಿ

ಮರಳುಗಾರಿಕೆಯಲ್ಲಿ ತೊಡಗಿರುವ ಕಾರ್ಮಿಕರ ಸ್ಥಿತಿ ಅತ್ಯಂತ ಶೋಚನೀಯ ವಾಗಿದೆ. ಬಹುತೇಕವಾಗಿ ಉತ್ತರ ಭಾರತ ಹಾಗೂ ಉತ್ತರ ಕರ್ನಾಟಕದ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಮರಳುಗಾರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾರ್ಮಿಕರಿಗೆ ಮೂಲಭೂತ ಸೌಕರ್ಯದ ಕೊರತೆ ಇದೆ. ಮಾತ್ರವಲ್ಲದೆ ಇತ್ತೀಚೆಗೆ ಇಬ್ಬರು ಕಾರ್ಮಿ ಕರು ಮರಳುಗಾರಿಕೆ ಸಂದರ್ಭ ನೀರಿನಲ್ಲಿ ಮುಳುಗಿ ಮೃತಪಟ್ಟಾಗ ಅವರ ಮೃತದೇಹವನ್ನು ಎತ್ತುವಲ್ಲಿ ಮರುಳುಗಾರಿಕೆ ನಡೆಸುವ ಗುತ್ತಿಗೆದಾ ರರಾಗಲಿ, ಇಲಾಖೆಯವರಾಗಲಿ ಕ್ರಮ ಕೈಗೊಳ್ಳದಿರುವ ಬಗ್ಗೆ ಜಿಲ್ಲಾಧಿಕಾರಿ ಸಭೆ ಯಲ್ಲಿ ಮರುಕ ವ್ಯಕ್ತಪಡಿಸಿದರು.

ಮರಳು ಸಾಗಾಟ ಪರವಾನಿಗೆ ಒಂದು ದಿನಕ್ಕೆ ಸೀಮಿತ

ಮರಳು ಸಾಗಾಟದಾರರು ಒಂದು ಲೋಡ್ ಮರಳು ಸಾಗಾಟ ಮಾಡಲು ಪರವಾನಿಗೆಯನ್ನು ಒಂದು ದಿನಕ್ಕೆ ಸೀಮಿತಗೊಳಿಸಬೇಕಿದೆ. ಈ ಬಗ್ಗೆ ಈಗಾಗಲೇ ರಾಜ್ಯದ ಸಂಬಂಧಪಟ್ಟ ಇಲಾಖೆಯ ಅಧಿಕಾರಿ ಜತೆ ಮಾತುಕತೆ ನಡೆಸಿದ್ದು, ಈ ಬಗ್ಗೆ ಪ್ರಸ್ತಾಪವನ್ನು ಸಲ್ಲಿಸಬೇಕಾಗಿದೆ. ಮಾತ್ರವಲ್ಲದೆ ಪರವಾನಿಗೆಯಲ್ಲಿ ಒಂದು ದಿನದ ಪರವಾನಿಗೆಯ ಸೀಲ್ ಕೂಡಾ ಹಾಕಬೇಕು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಸಭೆಯಲ್ಲಿ ತಿಳಿಸಿದರು. ಶನಿವಾರ ಸಭೆ: ಟಾಸ್ಕ್‌ಫೋರ್ಸ್ ಸಮಿತಿಯಲ್ಲಿ ಚರ್ಚಿ ಸಲಾದ ವಿಷಯಗಳ ಕುರಿತಂತೆ ಶನಿವಾರ ಸಂಜೆ 4:30ಕ್ಕೆ ಲಾರಿ ಚಾಲಕರ ಅಸೋಸಿಯೇಶನ್, ಮರಳು ಸಾಗಾಟಗಾರರ ಸಂಘ ಹಾಗೂ ಸಂಬಂಧಪಟ್ಟ ಅಧಿ ಕಾರಿಗಳ ಸಭೆ ಕರೆಯಲು ಗುರುವಾರದ ಸಭೆಯಲ್ಲಿ ತೀರ್ಮಾನಿಸಲಾಯಿತು.

Write A Comment