ಕನ್ನಡ ವಾರ್ತೆಗಳು

ಪತ್ರಿಕೋದ್ಯಮದಲ್ಲಿ ಎರಡುವರೆ ದಶಕದ ಅದ್ವೈತ ಸೇವೆಗೈದ ಯುವ ಪತ್ರಕರ್ತ ರೋನ್ಸ್ ಬಂಟ್ವಾಳ್‌ಗೆ `ಕರ್ನಾಟಕ ರಾಜ್ಯ ಮಾಧ್ಯಮ’ ಪ್ರಶಸ್ತಿ

Pinterest LinkedIn Tumblr

state_media_award

ಮುಂಬಂಯಿ.ಎ.08 :  ಕೆಮ್ಮಣ್ಣು ಡಾಟ್‌ಕಾಮ್, ಕೆನರಾನ್ಯೂಸ್ ಡಾಟ್‌ಕಾಮ್, ದಾಯ್ಜಿವರ್ಲ್ಡ್ ಡಾಟ್‌ಕಾಮ್  ಮುಂತಾದ ಜಗತ್ಪ್ರಸಿದ್ಧ ಅಂತರ್‌ಜಾಲಾ ಮಾಧ್ಯಮಗಳ ಮಹಾರಾಷ್ಟ್ರ ರಾಜ್ಯದ ಬ್ಯೂರೊ ಚೀಫ್, ಸುದ್ದಿ ಸಂಪಾದಕರಾಗಿ ಸೇವೆಸಲ್ಲಿಸುತ್ತಿರುವ ರೋನ್ಸ್ ಬಂಟ್ವಾಳ್ ಅವರನ್ನು `ಕರ್ನಾಟಕ ರಾಜ್ಯ ಮಾಧ್ಯಮ’ ಪ್ರಶಸ್ತಿಗೆ ಆಯ್ಕೆ ಗೊಳಿಸಿದೆ.

ಪ್ರಸ್ತುತ ಟೈಂಸ್ ಆಫ್ ಇಂಡಿಯಾ ಸಂಸ್ಥೆಯ ಮಾಲಕತ್ವದ ವಿಜಯ ಕರ್ನಾಟಕ ನಿಯೋಜಿತ ಪತ್ರಿಕೆಗಳ ಮುಂಬಯಿ ಪ್ರದೇಶಿಕ ವರದಿಗಾರರಾಗಿ ಸೇವೆಸಲ್ಲಿಸುತ್ತಿರುವ ಜನಪ್ರಿಯ ಯುವ ಪತ್ರಕರ್ತ ರೋನ್ಸ್ ಬಂಟ್ವಾಳ್ ಸದಾ ಪಾದರಸದಂತೆ ಓಡಾಡುವ ವಿಶ್ವ ಪ್ರಸಿದ್ಧ ಪತ್ರಕರ್ತ. ದೆಹಲಿವಾರ್ತೆ ಕನ್ನದ ದೈನಿಕದ ಮುಂಬಯಿ ಆವೃತ್ತಿಯ ಸಂಪಾದಕರಾಗಿ, ಉದಯವಾಣಿ, ಕರ್ನಾಟಕ ಮಲ್ಲ ಕನ್ನಡ ದೈನಿಕ ಸೇರಿದಂತೆ ಹತ್ತಾರು ಕನ್ನಡ-ಕೊಂಕಣಿ ವಾರಪತ್ರಿಕೆಗಳು,ಇಂಗ್ಲಿಷ್ ಸಾಪ್ತಾಹಿಕಗಳು, ಪಾಕ್ಷಿಕ ಮತ್ತು ಅನೇಕ ಮಾಸಿಕಗಳ ಅಧಿಕೃತ ವರದಿಗಾರರಾಗಿ ರಾಷ್ಟ್ರವನ್ನೇ ಪ್ರತಿನಿಧಿಸುತ್ತಿರುವ ಏಕೈಕ ಪತ್ರಕರ್ತರಾಗಿದ್ದಾರೆ. ತನ್ನ ಅವಿರತ, ನಿಷ್ಠಾವಂತಿಕೆಯ ಶ್ರಮದಿಂದ ಗುರುತಿಸಲ್ಪಟ್ಟ ರೋನ್ಸ್ ಅವರು ಉದಯವಾಣಿ, ತರಂಗ, ರೂಪತರ ಮುಂತಾದ ಪತ್ರಿಕೆಗಳಲ್ಲಿ ಸತತ ಆರುವರೆ ವರ್ಷಗಳ ಗಣನೀಯ ಸೇವೆಸಲ್ಲಿಸಿ ಆತ್ಮೀಯ, ಸಹೃದಯಿ ಸ್ನೇಹಮಯಿ ವ್ಯಕ್ತಿತ್ವದ ಜನಪ್ರೀಯ ಪತ್ರಕರ್ತನಾಗಿ ಪ್ರಸಿದ್ಧಿ ಪಡೆದಿರುವರು.

ಕಳೆದ 25 ವರುಷಗಳಿಂದ ಪತ್ರಿಕೋದ್ಯಮದಲ್ಲಿ ನಿರಂತರ ತೊಡಗಿಸಿಕೊಂಡು ಯಶಸ್ವೀ ಪಡೆದ ಓರ್ವ ಯುವ ಪತ್ರಿಕೋದ್ಯಮಿ ಆಗಿರುವ ಇವರು ಹಣಕಾಸು ಆಸೆಯನ್ನಿರಿಸದೆ ಸಮಾಜ ಸೇವೆಗೆ ಪೂರಕವಾಗಿ ಸದ್ದಿಲ್ಲದೆ ಮೌನವಾಗಿ ಕಾರ್ಯ ನಿರತರಾಗಿದ್ದಾರೆ. ಸಿವಿಲ್ ಇಂಜಿನೀಯರ್ ಪದವಿಧರನಾಗಿ ಕೆಲಸದ ನಿಮಿತ್ತ ಮುಂಬಯಿಗೆ ಸೇರಿದ್ದ ಬಂಟ್ವಾಳ್ ವ್ಯಂಗ್ಯಚಿತ್ರ ಕಲಾಕಾರನಾಗಿ ಪತ್ರಿಕೋದ್ಯಮದ ಕೃಷಿ ಆರಂಭಿಸಿದ್ದರು. ರಾಕ್ಣೊ ಕೊಂಕಣಿ ವಾರಪತ್ರಿಕೆಯ ಮೂಲಕ ಮುಂಬಯಿಯಲ್ಲಿ ಪತ್ರಿಕೋದ್ಯಮಕ್ಕೆ ನೆಲೆಯೂರಿಸಿದ ಬಂಟ್ವಾಳ್ ಕ್ರಮೇಣ `ಜನವಾಹಿನಿ’ ಕನ್ನಡ ದೈನಿಕ ಮುಂಬಯಿ ಮುಖ್ಯಸ್ಥರಾಗಿ ಪ್ರಸಿದ್ಧರಾಗಿದ್ದರು. ತದಾನಂತರ ತನ್ನ ಅವಿರತ, ನಿಷ್ಠಾವಂತಿಕೆಯ ಶ್ರಮದಿಂದ ಗುರುತಿಸಲ್ಪಟ್ಟ ರೋನ್ಸ್, ಉದಯವಾಣಿ, ತರಂಗ, ರೂಪತರ ಮುಂತಾದ ಪತ್ರಿಕೆಗಳಲ್ಲಿ ಸತತ ಆರುವರೆ ವರ್ಷಗಳ ಗಣನೀಯ ಸೇವೆಸಲ್ಲಿಸಿ ಆತ್ಮೀಯ, ಸಹೃದಯಿ ಸ್ನೇಹಮಯಿ ವ್ಯಕ್ತಿತ್ವದ ಜನಪ್ರೀಯ ಪತ್ರಕರ್ತನಾಗಿ ವಿಶ್ವ ಪ್ರಸಿದ್ಧಿ ಪಡೆದ ಏಕೈಕ ಕನ್ನಡಿಗ ಪತ್ರಕರ್ತರಾಗಿರುವರು.

ಕನ್ನಡ ಪತ್ರಿಕೋದ್ಯಮಕ್ಕೆನೇ ಮೊತ್ತ ಮೊದಲಿಗೆ ಇಲೆಕ್ಟ್ರಾನಿಕ್ ಕೆಮರಾ, ಲ್ಯಾಪ್‌ಟಾಪ್ ಅಳವಡಿಸಿ ಸುದ್ದಿಗಳನ್ನು ಘಟನೆಗಳ ಸ್ಥಳದಿಂದಲೇ ಛಾಯಾಚಿತ್ರಗ ಸಹಿತ ರವಾನಿಸಿ ಪ್ರಸಾರಿಸಿದ ಮೊತ್ತಮೊದಲ ಕನ್ನಡಿಗ ಪತ್ರಕರ್ತ ಎನ್ನುವ ಕೀರ್ತಿ ಇವರಿಗೆ ಸಲ್ಲುತ್ತದೆ. ದಿನವೊಂದಕ್ಕೆ ಕನಿಷ್ಠ ಹತ್ತಾರು ಕಾರ್ಯಕ್ರಮಗಳಿಗೆ ಖುದ್ಧಾಗಿ ಭೇಟಿಯನ್ನಿತ್ತು ಸುದ್ದಿಗಳನ್ನು ಸಂಗ್ರಹಿಸಿ ಪ್ರಸಾರಿಸುವ ಸಾಧನಾಶೀಲ ಪತ್ರಕರ್ತರಾದ ಬಂಟ್ವಾಳ್ ಔದಾರ್ಯದ ಸಾತ್ವಿಕತೆಯ ಪ್ರತೀಕರಾಗಿದ್ದಾರೆ. ದೇಶ-ವಿದೇಶದಾದ್ಯಂತ ಸುತ್ತಾಡುತ್ತಾ ಸಂಶೋಧನಾತ್ಮಕ ವರದಿಗಳನ್ನು ಮಾಡಿಯೂ ಸಮಾಜಪರ ಧ್ವನಿ ಎತ್ತುವಲ್ಲಿ ಇವರ ಶ್ರಮ ಅನನ್ಯವಾಗಿದೆ. ಅಂತೆಯೇ ಹಗಲಿರುಳು ಸಮಾಜ ಸೇವೆಯಲ್ಲಿ ಕಾರ್ಯ ನಿರತ ಬಂಟ್ವಾಳ್ ತುಳು-ಕನ್ನಡಿಗ, ಇಡೀ ಕರ್ನಾಟಕ ಜನತೆ ಸಮೂದಾಯದ ಆತ್ಮೀಯ ರೂವಾರಿಯಾಗಿ ಪ್ರಸಿದ್ಧರು. ತುಳು-ಕನಡಿಗ-ಕ್ರೈಸ್ತರು ಸೇರಿದಂತೆ ವಿವಿಧ ಜಾತೀಯ 19 -ಮೃತರನ್ನು (ಆಸ್ಪತ್ರೆ, ನಿವಾಸ ಸೇರಿದಂತೆ) ಮೃತದೇಹಗಳನ್ನು ಊರಿಗೆ ಸುಲಭವಾಗಿ ತಲುಪಿಸುವ ಯಾ ಖುದ್ಧಾಗಿ ಧಪನಗೈಯುವ ಸಮಾಜ ಸೇವಕರಾಗಿದ್ದಾರೆ. ಅನೇಕ ಕಾರಣಗಳಿಂದ  ಮಹಾರಾಷ್ಟ್ರದಾದ್ಯಂತ (ಮುಂಬಯಿ) ಯಲ್ಲಿ ನೆಲೆಯಾಗಿದ್ದ 21 ಕ್ಕೂ ಅಧಿಕ ಜನರನ್ನು ಹುಡುಕಿ ಊರಿಗೆ ಕಳುಹಿಸಿ ತಮ್ಮ ಸೇವಾ ಪ್ರಾಮಾಣಿಕತೆ ಮೆರೆದ ದಕ್ಷ ಪತ್ರಕರ್ತರೂ ಆಗಿದ್ದಾರೆ.

ಸದ್ಯ ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ ಇದರ ಸಂಸ್ಥಾಪಕ ಗೌ| ಪ್ರ| ಕಾರ್ಯದರ್ಶಿಯಾಗಿದ್ದು ನಿರಂತರ 3 ವರ್ಷಗಳಿಂದ ತನ್ನ ಸಂಪಾದಕತ್ವದಲ್ಲಿ ಪತ್ರಕರ್ತರ `ಡೈಯರಿ-ಡಿರೆಕ್ಟರಿ’ ಪ್ರಕಾಶಿಸಿದ್ದಾರೆ. ಸಾಂತಕ್ರೂಜ್ ವಿಮಾನ ನಿಲ್ದಾಣದ ಸನಿಹದಲ್ಲಿ ತನ್ನ ದೂರದೃಷ್ಠಿತ್ವದಲ್ಲಿ ಸುಮಾರು ಮೂರು ಕೋಟಿ ವೆಚ್ಚದಲ್ಲಿ ಪತ್ರಕರ್ತರ ಭವನವನ್ನು ರೂಪಿಸುವ ತಯಾರಿಯಲ್ಲಿರುವ ಬಂಟ್ವಾಳ್ ಮಹಾನಗರದ 30 ಕ್ಕೂ ಅಧಿಕ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದಾರೆ.

ಕೊಂಕಣಿ ಸಾಹಿತ್ಯ ಕಲಾ ಫೌಂಡೇಶನ್ ಸಂಸ್ಥೆಯಿಂದ (23.10.2005 ) `ಕೊಂಕಣಿ ಎಕ್ಸಲೆಂಟ್ ಅವಾರ್ಡ್’, ದಿವೋ ಕೊಂಕಣಿ ಸಾಪ್ತಾಹಿಕದಿಂದ (12.01.2008) ` ದಿವೋ ಕೊಂಕಣಿ ಸಾಹಿತ್ಯ ಪುರಸ್ಕಾರ-2007 ‘, ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದಿಂದ (19.03.2010) `ಸುವರ್ಣ ಪದಕ’ದೊಂದಿಗೆ ಗೌರವಾರ್ಪಣೆ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಬೆಂಗಳೂರು ಮತ್ತು ಶಾಫಿ ವೆಲ್ಫೇರ್ ಅಸೋಸಿಯೇಶನ್ ಮುಂಬಯಿ ವತಿಯಿಂದ (17.07.2010) `ಅಭಿಮಾನಿ ಪತ್ರಕರ್ತ’ ಪುರಸ್ಕಾರ ಬಾಹ್ರೇಯ್ನ್‌ನಲ್ಲಿ (29.09.2011 ) `ವಿಶ್ವಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಅಂತರಾಷ್ಟ್ರೀಯ ಪುರಸ್ಕಾರ, ಪರಿವರ್ತನ ಪ್ರತಿಷ್ಠಾನ ಮುಂಬಯಿ ಸಂಸ್ಥೆಯಿಂದ (23.11.2011 ) `ಪರಿವರ್ತನಾ ಪತ್ರಕರ್ತ ಪುರಸ್ಕಾರ’ ಅಂತರಾಷ್ಟ್ರೀಯ ಪುರಸ್ಕಾರ, ಕೋಲಾರದ ಮಾಲೂರುನಲ್ಲಿ ಜರುಗಿದ (30.12.2011) 43ನೇ ವರ್ಷದ ಕನ್ನಡ ರಾಜ್ಯೋತ್ಸವ ಅಭೂತಪೂರ್ವ ಸಂಭ್ರಮದಲ್ಲಿ ರೋನ್ಸ್ ಬಂಟ್ವಾಳ್ ಅವರಿಗೆ `ಸರ್ವೋತ್ಕೃಷ್ಟ ಅಭಿಮಾನಿ ವಿಶ್ವ ಕನ್ನಡಿಗ’ ಪುರಸ್ಕಾರ, ಗುಜರಾತ್‌ನ ಸೂರತ್‌ನಲ್ಲಿ (03.11.2012) `ಸಾಧಕ ಪತ್ರಕರ್ತ’ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಸಂಸ್ಥೆಯು ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ತುಮಕೂರುನಲ್ಲಿ (೦04.10.2012 ) ನೆರವೇರಿಸಿದ್ದ ಭಾರತೀಯ ಕಾರ್ಯನಿರತ ಪತ್ರಕರ್ತರ 65 ನೇ ಅಧಿವೇಶನದಲ್ಲಿ ಸಿದ್ಧಗಂಗಾ ಮಠದ ಶ್ರೀ ಡಾ| ಶಿವಕುಮಾರ ಮಹಾಸ್ವಾಮೀಜಿ ಅವರ ದಿವ್ಯೋಪಸ್ಥಿತಿಯಲ್ಲಿ ಕರ್ನಾಟಕ ಸರಕಾರದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಉಪಸ್ಥಿತಿಯಲ್ಲಿ ರೋನ್ಸ್ ಬಂಟ್ವಾಳ್‌ಗೆ `ಶ್ರೇಷ್ಠ ಭಾರತೀಯ ಪತ್ರಕರ್ತ’ ಪುರಸ್ಕಾರದೊಂದಿಗೆ ಸನ್ಮಾನಿಸಿ ಗೌರವ, ನವಚಿಂತನ ಸಂಸ್ಥೆಯಿಂದ `ಪತ್ರಕಾರ್ ರತ್ನ’ ಬಿರುದು ಪ್ರದಾನಿಸಿ ಗೌರವ, ಪತ್ರಕರ್ತರ ವೇದಿಕೆ ಬೆಂಗಳೂರು, ಕರ್ನಾಟಕ ಮೀಡಿಯಾ ಮತ್ತು ನ್ಯೂಸ್ ಸೆಂಟರ್ ಇವರ ವತಿಯಿಂದ ಕಳೆದ ಜುಲೈ.01 ರಂದು ಬೆಂಗಳೂರುನ ಕನ್ನಡ ಭವನದಲ್ಲಿ ಆಚರಿಸಲ್ಪಟ್ಟ ಪತ್ರಿಕಾ ದಿನಾಚರಣೆ-2014  ಸಂಭ್ರಮದಲ್ಲಿ ದಶಮಾನದ ಹೂಗಾರ ಸ್ಮಾರಕ ಮಾಧ್ಯಮ ಪ್ರಶಸ್ತಿ ಇತ್ಯಾದಿ ನೂರಾರು ಪುರಸ್ಕಾರಗಳಿಂದ ಗೌರವಿಲಸ್ಪಟ್ಟು ವಿಶ್ವಪ್ರಸಿದ್ಧಿಯಲ್ಲಿದ್ದಾರೆ.

ಕಳೆದ 03.08.2014  ರಂದು ಬಂಟ್ವಾಳದ ಪೊಳಲಿ ಶ್ರೀಕ್ಷೇತ್ರದ ನಡೆದ ದಕ್ಷಿಣ ಕನ್ನಡ ಜಿಲ್ಲಾ 19 ನೇ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ನಾಡೋಜ ಪ್ರೊ.ಕಿನ್ನಿಕಂಬಳ ಪದ್ಮನಾಭ ರಾವ್ ಅವರ ಸಮ್ಮೇಳನ ಅಧ್ಯಕ್ಷತೆಯಲ್ಲಿ ರೋನ್ಸ್ ಬಂಟ್ವಾಳ್ ಅವರನ್ನು ರಾಜ್ಯದ ಯುವಜನ ಸೇವೆ ಸಚಿವ ಕೆ.ಅಭಯಚಂದ್ರ ಜೈನ್ ಮತ್ತು ಡಾ| ಎಂ.ಮೋಹನ್ ಆಳ್ವ ಸನ್ಮಾಸಲ್ಪಟ್ಟ ರೋನ್ಸ್ ಸದಾ ಸೇವಾಳುವಾಗಿಯೇ ನ್ಯಾಯಕ್ಕಾಗಿ ಹೋರಾಡುತ್ತಿರುವ ಅಪರೂಪದ ಪತ್ರಕರ್ತರೂ ಆಗಿ ವಿದೇಶಗಳು ಸೇರಿದಂತೆ ರಾಷ್ಟ್ರದಾದ್ಯಂತೆ ಪ್ರವಾಸಗೈದು ಪತ್ರಕರ್ತರಾಗಿ ಶ್ರಮಿಸುತ್ತಿದ್ದಾರೆ.

ಅವರು ಯೋಚಿಸಿ ಯೋಜನೆಯನ್ನಾಗಿಸಿ ಹಗಲಿರುಳು ಶ್ರಮಿಸಿ ಕನಸಿನ ಮತ್ತೊಂದು ಬೃಹತ್ ಯೋಜನೆ ಅಖಿಲ ಭಾರತ ಕನ್ನಡ ಪತ್ರಕರ್ತರ ಬೃಹತ್ ಸಮಾವೇಶವನ್ನು ಇದೇ ಎ.11 ರಿಂದ 14 ರ ವರೇಗೆ ಮುಂಬಯಿಯಲ್ಲಿ ನಡೆಸಲಿದ್ದು ದೇಶದಾದ್ಯಂತ ನೂರಾರು ಪತ್ರಕರ್ತರು ಭಾಗವಹಿಸಲಿದ್ದಾರೆ. ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ್, ಮುಖ್ಯಮಂತ್ರಿಗಳ ಭೇಟಿ ಸಮಾವೇಶದ ಪ್ರಮುಖ ಭಾಗವಾಗಿದೆ.

 

Write A Comment