ಕನ್ನಡ ವಾರ್ತೆಗಳು

ಇಂಟರ್ ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನಿಂದ ಆರ್ಥಿಕ ಸಹಾಯ ವಿತರಣೆ

Pinterest LinkedIn Tumblr

Internation_bunts_sanga

ಮಂಗಳೂರು,ಎ.08: ಇಂಟರ್ ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಕೆಲವು ಫಲಾನುಭವಿಗಳಿಗೆ ಧನಸಹಾಯ ವಿತರಿಸುವ ಕಾರ್ಯಕ್ರಮ ಇತ್ತೀಚೆಗೆ ಟ್ರಸ್ಟ್ ನ ಆಡಳಿತ ಕಚೇರಿಯಲ್ಲಿ ನಡೆಯಿತು.

ಶ್ರೀಮತಿ ಗೀತಾ ಶೆಟ್ಟಿ ಮಂಗಳೂರು ಇವರಿಗೆ ಮಗಳ ವಿದ್ಯಾಭ್ಯಾಸಕ್ಕಾಗಿ, ಕುಪ್ಪೆಪದವು ಸುವೇದ ಶೆಟ್ಟಿ ಅವರಿಗೆ ಮನೆ ರಿಪೇರಿಗಾಗಿ, ಗೋಪಾಲ ರೈ ಬೆಳ್ತಂಗಡಿ ಇವರ ಮಗಳ ವಿವಾಹಕ್ಕಾಗಿ, ಅಜಯ್ ಕುಮಾರ್ ಶೆಟ್ಟಿ ಮಡಂತ್ಯಾರ್ ಇವರ ಉನ್ನತ ಶಿಕ್ಷಣಕ್ಕಾಗಿ, ಕು. ನಿರೀಕ್ಷಾ ಶೆಟ್ಟಿ ಕಾರ್ಕಳ ಇವರ ಕ್ಯಾನ್ಸರ್ ರೋಗದ ಮುಂದಿನ ಚಿಕಿತ್ಸೆಗಾಗಿ ಧನ ಸಹಾಯದ ಚೆಕ್ ನ್ನು ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ಪುಣೆಯ ಖ್ಯಾತ ವೈದ್ಯ ಡಾ.ದಯಾನಂದ ಶೆಟ್ಟಿ, ಹಾಗೂ ಟ್ರಸ್ಟ್ ನ ಚೇರ್‌ಮಾನ್ ಸದಾನಂದ ಶೆಟ್ಟಿ ಅವರು ವಿತರಿಸಿದರು.

ಟ್ರಸ್ಟ್ ನ ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ದೇವಿಚರಣ್ ಶೆಟ್ಟಿ, ಮಾತ್ರವಲ್ಲದೇ ಕಾವೂರು ಲಕ್ಷ್ಮಣ ಶೆಟ್ಟಿ, ಜೆಪ್ಪು ಶಶಿಧರ ಶೆಟ್ಟಿ, ರಾಜಗೋಪಾಲ್ ರೈ, ವಸಂತ ಕುಮಾರ್ ಶೆಟ್ಟಿ,ಪುಷ್ಪರಾಜ್ ಶೆಟ್ಟಿ, ಕೃಷ್ಣ ಶೆಟ್ಟಿ, ಪ್ರದೀಪ್ ಆಳ್ವ, ರಘುನಾಥ್ ಶೆಟ್ಟಿ, ಎಂ.ಸಿ.ಶೆಟ್ಟಿ, ವಿಶ್ವನಾಥ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Write A Comment