ಮಂಗಳೂರು,ಎಪ್ರಿಲ್.08 : ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅನೈತಿಕ ಪೊಲೀಸ್ ಗಿರಿ ಖಂಡಿಸಿ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ವತಿಯಿಂದ ನಗರದಲ್ಲಿ ಮೌನ ಪ್ರತಿಭಟನೆ ನಡೆಯಿತು. ನಗರದ ನೆಹರು ಮೈದಾನದ ಬದಿಯ ಪುಟ್ ಪಾತ್ ನಲ್ಲಿ ಮಹಿಳೆಯರು ಕಪ್ಪುಬಟ್ಟೆ ಧರಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಬಿ.ಸಿ.ರೋಡ್ ಮೆಲ್ಕಾರಿನಲ್ಲಿ ಕಾಫಿ ಕುಡಿಯಲು ಹೋಗಿದ್ದ ಕಾರಣಕ್ಕೆ ಹಲ್ಲೆ ಮಾಡಿದ್ದು, ಮುಡಿಪುವಿನಲ್ಲಿ ಕಾಲೇಜು ಪ್ರವಾಸಕ್ಕೆ ಹೋಗದಂತೆ ಅಡ್ಡಿಪಡ್ಸಿದ್ದು ಇವೇ ಮುಂತಾದ ಘಟನೆಗಳಲ್ಲಿ ಅನೈತಿಕ ಪೊಲೀಸ್ ಗಿರಿ ಪ್ರದರ್ಶಿಸಲಾಗಿದೆ ಎಂದು ದೂರಿದರು.
ಪೊಲೀಸ್ ಇಲಾಖೆ ಇಂಥ ಅನೈತಿಕ ಪೊಲೀಸ್ ಗಿರಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಪಡಿಸಲಾಯಿತು.



