ಉಳ್ಳಾಲ,ಎಪ್ರಿಲ್.07 : ಗೌಸಿಯಾ ಜುಮಾ ಮಸೀದಿ ಕುಕ್ಕೋಟು, ಬೋಳಿಯಾರ್ ಇದರ ಆಶ್ರಯದಲ್ಲಿ ವಿಸ್ತೃತ ಮಸೀದಿಯ ಕಟ್ಟಡದ ಶಿಲಾನ್ಯಾಸ ಮತ್ತು ಸಭಾ ಕಾರ್ಯಕ್ರಮವು ಕುಕ್ಕೋಟ್ಟು ಶಂಶುಲ್ ಉಲಮಾ ವೇದಿಕೆಯಲ್ಲಿ ನಡೆಯಿತು. ಕೇಂದ್ರ ಮುಶಾವರ ಸದಸ್ಯ ಶೈಖುನಾ ಅಲ್‌ಹಾಜ್ ಕೆ.ಪಿ.ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮದ್ರಸ ಮೆನೇಜ್‌ಮೆಂಟ್ ಅಧ್ಯಕ್ಷ ಎಸ್.ಅಬ್ಬಾಸ್ ಸಜಿಪ, ಎಸ್ ಅಬ್ಬು ಮದ್ಪಾಡಿ, ಸಬೀರ್, ಎಸ್.ಜಯರಾಮ ಶಾಂತಾ, ಸತೀಶ್ ಆಚಾರ್ಯ, ಮಧ್ಯನಡ್ಕ ಜುಮಾ ಮಸೀದಿ ಅಧ್ಯಕ್ಷ ಆಲಿಕುಂಞಿ ಹಾಜಿ, ದ.ಕ. ಜಿಲ್ಲಾ ಸಂಯುಕ್ತ ಜಮಾಅತ್‌ನ ಕಾರ್ಯದರ್ಶಿ ಇಬ್ರಾಹಿಂ ಕೊಣಾಜೆ, ಬೋಳ್ಯಾರ್ ಗ್ರಾಮ ಪಂಚಾಯತ್ ಇಬ್ರಾಹಿಂ ರಂತಡ್ಕ, ಗುಣಕರ ಆಳ್ವ, ಉಮೇಶ್ ಗಾಂಭೀರ್,ಭಾಸ್ಕರ ಶೆಟ್ಟಿ , ಚಂದ್ರಹಾಸ ಅಡಪ ಕಕ್ಕೋಟು, ತ್ಯಾಂಪಣ್ಣ ರೈ, ಹಮೀದ್, ಇಮ್ತಿಯಾಝ್ ಎನ್.ಜಿ. ಮೊದಲಾದವರು ಉಪಸ್ಥಿತರಿದ್ದರು.