ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್
ಮುಂಬಯಿ : ಮುಂಬಯಿಯಲ್ಲಿ ಸುಮಾರು ಅರ್ಧ ಶತಮಾನದಿಂದ ಆರತಿ ಪ್ರಿಂಟರ್ಸ್ ಹೆಸರಲ್ಲಿ ಮುಖ್ಯವಾಗಿ ಕನ್ನಡ ಮುದ್ರಣ ಕ್ಷೇತ್ರದಲ್ಲಿ ಖ್ಯಾತರಾದ ಪಿ. ಕೆ. ಸಾಲ್ಯಾನ್ – ಸಾವಿತ್ರಿ ದಂಪತಿಯಯ ವೈವಾಹಿಕ 50 ನೇ ವರ್ಷದ ಸಂಭ್ರಮವು ನಗರದ ಮೈಸೂರು ಅಸೋಷಿಯೇಷನಿನಲ್ಲಿ ತನ್ನ ಅಭಿಮಾನಿಗಳು, ಹೆತೈಷಿಗಳು ಹಾಗೂ ಇಲ್ಲಿನೆ ಅನೇಕ ಕನ್ನಡ – ತುಳು ಸಂಘಟನೆಗಳ ಪ್ರಮುಖರ ಉಪಸ್ಥಿತಿಯಲ್ಲಿ ನೆರವೇರಿತು.
ನಗರದ ಹಿರಿಯ ಕನ್ನಡಿಗ, ಬಂಟರ ಸಂಘದ ಮಾಜಿ ಅಧ್ಯಕ್ಷ ಎಂ. ಡಿ. ಶೆಟ್ಟಿಯವರು ಉಪಸ್ಥಿತರಿದ್ದು ಪಿ. ಕೆ. ಸಾಲ್ಯಾನ್ ಅವರ ಸಾಧನೆ ಬಗ್ಗೆ ಮಾತನಾಡಿ ಅಭಿನಂದಿಸಿದರು. ಜಯಶ್ರೀಕೃಷ್ಣ ಪರಿಸರ ಪ್ರೇಮಿಯ ಸಂಸ್ಥಾಪಕ ಜಯಶ್ರೀಕೃಷ್ಣ ಶೆಟ್ಟಿ, ಕುಲಾಲ ಸಂಘದ ಅಧ್ಯಕ್ಷ ಗಿರೀಶ್ ಸಾಲ್ಯಾನ್, ಎನ್. ಕೆ. ಇ. ಎಸ್. ಶಾಲೆಯ ಪ್ರಾಂಶುಪಾಲೆ ಸರೋಜ ರಾವ್, ಶ್ರೀ ಶನಿಮಾಹಾತ್ಮ ಸೇವಾ ಸಮಿತಿ, ಇರಾನಿ ಕಾಲನಿಯ ನಾರಾಯಣ ಸಾಲ್ಯಾನ್ ದಂಪತಿಗಳಿಗೆ ಶುಭ ಹಾರೈಸಿದರು.
ಸನ್ಮಾನಕ್ಕೆ ಉತ್ತರಿಸಿದ ಪಿ.ಕೆ. ಸಾಲ್ಯಾನ್ ಅವರು ಇಲ್ಲಿನ ಎಲ್ಲಾ ಸಂಘ ಸಂಸ್ಥೆಗಳ ಕೆಲಸ ಮುದ್ರಣದ ಕೆಲಸ ಮಡುವ ಅವಕಾಶ ತನಗೆ ದೊರೆತಿದ್ದು ಎಲ್ಲರಿಗೂ ತಲೆಬಾಗಿ ವಂದಿಸಿದರು.
ದಂಪತಿಯ ಮಕ್ಕಳಾದ ಜೈರಾಜ್ , ಶ್ಯಾಮರಾಜ್, ರವಿರಾಜ್, ಆರತಿ – ಶ್ರೀಧರ್, ಸೊಸೆಯಂದಿರು, ಮೊಮ್ಮಕ್ಕಳು ಉಪಸ್ಥಿತರಿದ್ದರು. ಕುಲಾಲ ಸಂಘ ಮುಂಬಯಿಯ ಉಪಾಧ್ಯಕ್ಷ ದೇವದಾಸ ಕುಲಾಲ್ ಕಾರ್ಯಕ್ರಮವನ್ನು ನಿರೂಪಿಸಿದರು.