ಕನ್ನಡ ವಾರ್ತೆಗಳು

ಬಹುನಿರೀಕ್ಷಿತ “ಒರಿಯನ್ ತೂಂಡ ಒರಿಯಗಾಪುಜಿ’ ತುಳು ಚಿತ್ರದ ಆಡಿಯೋ ಸಿಡಿ ಬಿಡುಗಡೆ

Pinterest LinkedIn Tumblr

Oriyan_Tunda_Cd_1

ವರದಿ / ಚಿತ್ರ : ಸತೀಶ್ ಕಾಪಿಕಾಡ್

ಮಂಗಳೂರು,ಎ.06: ಶ್ರೀ ಮಂಗಳಾ ಗಣೇಶ ಕಂಬೈನ್ಸ್‌ರವರ ಬಿ. ಅಶೋಕ್‌ ಕುಮಾರ್‌ ಹಾಗೂ ಎ. ಗಂಗಾಧರ ಶೆಟ್ಟಿ ಅಳಕೆ ನಿರ್ಮಾಣದ ಹ.ಸೂ. ರಾಜಶೇಖರ್‌ ನಿರ್ದೇಶನದ ಬಹುನಿರೀಕ್ಷೆಯ “ಒರಿಯನ್‌ ತೂಂಡ ಒರಿಯಗಾಪುಜಿ” ತುಳುಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭ ರವಿವಾರ ಸಂಜೆ ಮಂಗಳೂರಿನ ನೆಹರೂ ಮೈದಾನಿನಲ್ಲಿ ಬಹಳ ಅದ್ದೂರಿಯಾಗಿ ನೆರವೇರಿತು.

Oriyan_Tunda_Cd_2 Oriyan_Tunda_Cd_3 Oriyan_Tunda_Cd_5 Oriyan_Tunda_Cd_6 Oriyan_Tunda_Cd_7

ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಆಡಿಯೋ ಸಿಡಿ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ತುಳುಚಿತ್ರರಂಗದಲ್ಲಿ ಒಂದು ವರ್ಷಕ್ಕೆ ಒಂದೇರೆಡು ಸಿನೆಮಾಗಳು ಮಾತ್ರ ತೆರೆ ಕಾಣುವ ದಿನಗಳಿದ್ದವು. ಆದರೆ ಇಂದು ತುಳು ಚಿತ್ರರಂಗ ಬಹುದೊಡ್ಡ ಸಾಧನೆಯ ಹಂತದವರೆಗೆ ಬೆಳೆದು ನಿಂತಿದೆ. ವರ್ಷಕ್ಕೆ ಹಲವು ಯಶಸ್ವಿ ಚಿತ್ರಗಳು ತೆರೆಕಂಡು ಮೆಚ್ಚುಗೆ ಪಡೆಯುವಂತಾಗಿದೆ ಎಂದರು.

Oriyan_Tunda_Cd_8 Oriyan_Tunda_Cd_9

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶಾಸಕ ಜೆ.ಆರ್‌. ಲೋಬೋ ಅವರು ಮಾತನಾಡಿ, ತುಳುಚಿತ್ರರಂಗದಲ್ಲಿ ಪ್ರಸ್ತುತ ದಿನಗಳು ಅತ್ಯಂತ ಶೋಭಾಯಮಾನ ವಾತಾವರಣವನ್ನು ಹೊಂದಿದೆ ಎಂದರು. ಶಾಸಕ ಮ್ಯೊದಿನ್ ಬಾವ ಮಾತನಾಡಿ, ತುಳು ಚಿತ್ರದ ಈ ಹಿಂದಿನ ಒಂದೊಂದು ಸಾಧನೆಗಳು ಇಂದಿನ ಬೆಳವಣಿಗೆಗೆ ಆಧಾರಸ್ತಂಭವಾಗಿದೆ ಎಂದರು.

ಸಂಗೀತ ನಿರ್ದೇಶಕ ವಿ. ಮನೋಹರ್‌, ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ, ಮಾಜಿ ಉಪಮೇಯರ್‌ ಕವಿತಾವಾಸು, ಮನಪಾ ಸದಸ್ಯರಾದ ದಿವಾಕರ್‌, ಪ್ರೇಮಾನಂದ ಶೆಟ್ಟಿ, ಅಬ್ದುಲ್‌ ಲತೀಫ್‌, ರಾಜೇಂದ್ರ ಕುಮಾರ್, ಹಿರಿಯ ರಂಗಕರ್ಮಿ ಡಾ | ಸಂಜೀವ ದಂಡಕೇರಿ, ರಂಗ ಕಲಾವಿದ ವಿ.ಜಿ.ಪಾಲ್‌, ರಂಗ ನಟ,ನಿರ್ದೇಶಕ ದೇವದಾಸ್‌ ಕಾಪಿಕಾಡ್‌, ಚಿತ್ರ ನಟ ಹಾಗೂ ಕಿರುತೆರೆಯ ಹಾಸ್ಯ ನಟ ಮಿತ್ರ, ಚಿತ್ರ ನಟ ಕಾಸರಗೋಡು ಚಿನ್ನ, ರಂಗ ನಟ ಹಾಗೂ ಸಿನಿಮಾ ನಟ ಭೋಜರಾಜ್‌ ವಾಮಂಜೂರ್‌ ಮುಂತಾದವರು ಅತಿಥಿಗಳಾಗಿದ್ದರು.

Oriyan_Tunda_Cd_4

Oriyan_Tunda_Cd_10 Oriyan_Tunda_Cd_11 Oriyan_Tunda_Cd_12 Oriyan_Tunda_Cd_13 Oriyan_Tunda_Cd_14 Oriyan_Tunda_Cd_15 Oriyan_Tunda_Cd_16 Oriyan_Tunda_Cd_17 Oriyan_Tunda_Cd_18 Oriyan_Tunda_Cd_19 Oriyan_Tunda_Cd_20 Oriyan_Tunda_Cd_21 Oriyan_Tunda_Cd_22 Oriyan_Tunda_Cd_23 Oriyan_Tunda_Cd_24 Oriyan_Tunda_Cd_25 Oriyan_Tunda_Cd_26 Oriyan_Tunda_Cd_27 Oriyan_Tunda_Cd_28 Oriyan_Tunda_Cd_29 Oriyan_Tunda_Cd_30 Oriyan_Tunda_Cd_31 Oriyan_Tunda_Cd_32 Oriyan_Tunda_Cd_33 Oriyan_Tunda_Cd_34 Oriyan_Tunda_Cd_35 Oriyan_Tunda_Cd_36 Oriyan_Tunda_Cd_37 Oriyan_Tunda_Cd_38 Oriyan_Tunda_Cd_39 Oriyan_Tunda_Cd_40 Oriyan_Tunda_Cd_41

ಚಿತ್ರದ ನಿರ್ಮಾಪಕರಾದ ಬಿ. ಅಶೋಕ್‌ ಕುಮಾರ್‌ ಹಾಗೂ ಎ. ಗಂಗಾಧರ ಶೆಟ್ಟಿ ಅಳಕೆ, ನಿರ್ದೇಶಕ ಹ.ಸೂ. ರಾಜಶೇಖರ್‌, ನಾಯಕ ನಟ ಅರ್ಜುನ್‌ ಕಾಪಿಕಾಡ್‌, ನಾಯಕಿ ಪ್ರಜ್ಯು ಪೂವಯ್ಯ ಉಪಸ್ಥಿತರಿದ್ದರು. ನವೀನ್ ಶೆಟ್ಟಿ ಅಳಕೆ ಹಾಗೂ ಮಧು ಕಾರ್ಯಕ್ರಮ ನಿರೂಪಿಸಿದರು.

ಸಂಗೀತಾ, ನೃತ್ಯ – ವಿಶೇಷ ಆಕರ್ಷಣೆ

ಕಾರ್ಯಕ್ರಮದಲ್ಲಿ ವಿಶೇಷವಾಗಿ ಆಯೋಜಿಸಲಾದ ಸಂಗೀತಾ ರಸಮಂಜರಿ ಹಾಗೂ ವಿಶಿಷ್ಠ ನೃತ್ಯ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

Write A Comment