ಕುಂದಾಪುರ: ಶಿಲುಭೆಗೆರಿಸಲ್ಪಟ್ಟ ಏಸು ಮೂರು ದಿನಗಳ ನಂತರ ಪುನರಾತ್ಥಾನಗೊಂಡ ಪಾಸ್ಕಾ ಹಬ್ಬವನ್ನು ಕತ್ತಲೆಯಲ್ಲಿ ಹೊಸದಾಗಿ ಬೆಂಕಿ ಉರಿಸಿ ಅದನ್ನು ಆಶಿರ್ವದಿಸಿ, ಪಾಸ್ಕಾ ಮೊಂಬತ್ತಿಯನ್ನು ಬೆಳಗಿಸಲ್ಪಟ್ಟು ಕುಂದಾಪುರ ರೊಜರಿ ಅಮ್ಮನವರ ಇಗರ್ಜಿಯಲ್ಲಿ ಪಾಸ್ಕ ಹಬ್ಬದ ವಿಧಿ ವಿಧಾನಗಳನ್ನು ನಡೆಸಲಾಯಿತು.
ಈ ಧಾರ್ಮಿಕ ವಿಧಿಯಲ್ಲಿ ಕುಂದಾಪುರ ಇಗರ್ಜಿಯ ವ| ಧರ್ಮಗುರು ಅನೀಲ್ ಡಿಸೋಜಾ, ವ|ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್ ಮತ್ತು ವ|ಧರ್ಮಗುರು ಪ್ರಕಾಶ್ ಪಾವ್ಲ್ ಡಿಸೋಜಾ, ಸಹಭಾಗಿಯಾಗಿದ್ದರು.
ಅಥಿತಿ ವ|ಧರ್ಮಗುರು ಐವನ್‌ಡಿಸೋಜಾ ಪ್ರವಚನ ನೀಡಿದರು, ಈ ಪ್ರಾರ್ಥನ ವಿಧಿಯಲ್ಲಿ ಸಹಸ್ರಾರು ಭಕ್ತರು ಪ್ರಾರ್ಥನಾ ವಿಧಿಯಲ್ಲಿ ಪಾಲ್ಘೊಂಡರು.
-ಚಿತ್ರ ಬರ್ನಾಡ್ ಡಿಕೋಸ್ತಾ