ಕನ್ನಡ ವಾರ್ತೆಗಳು

ಹೆಚ್. ಬಿ. ಎಲ್‌ ರಾಯರಿಗೆ ಕಲ್ಕೂರ ಪ್ರಶಸ್ತಿ

Pinterest LinkedIn Tumblr

HBL_snmana_photo

ಮಂಗಳೂರು,ಎ.02 : ಯಕ್ಷಗಾನ ಸಂಘ, ಸಾಹಿತ್ಯ ಸಂಘ, ಬಿ.ಎಸ್.ಕೆ ಅಸೋಶಿಯೇಶನ್,ಕನ್ನಡ ಸಾಹಿತ್ಯ ಪರಿಷತ್ತಿನ ಮಹಾರಾಷ್ಟ್ರ ಘಟಕದ‌ ಅಧ್ಯಕ್ಷರಾಗಿ ಕಲೆ, ಸಾಹಿತ್ಯ, ಸಂಸ್ಕೃತಿ, ಧಾರ್ಮಿಕ ಸಂಘಟನೆ ‌ಇತ್ಯಾದಿ ಹಲವು ಮಜಲುಗಳಲ್ಲಿ ಕಳೆದ ಆರು ದಶಕಗಳಿಂದ ಮುಂಬಯಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಾ ಜನಾನುರಾಗಿ ಸರ್ವರಿಗೂ ಮಾನ್ಯರಾದ ಕರ್ಮಯೋಗಿ ‌ಎಚ್.ಬಿ.ಎಲ್. ರಾಯರಿಗೆ 80ರ ಹರೆಯದ ಸಂಭ್ರಮಾಚರಣೆಯ ಶುಭಾವಸರದಲ್ಲಿ ಕಲ್ಕೂರ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಎ.5, ಭಾನುವಾರ ಮುಂಬೈಯ ಮಾಟುಂಗದಲ್ಲಿ ಜರಗಲಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಿರಿಯ ಸಾಹಿತಿ ಡಾ. ವ್ಯಾಸರಾವ್ ನಿಂಜೂರು ಪ್ರಶಸ್ತಿ ಪ್ರದಾನ ಮಾಡಲಿರುವರೆಂದು ಪ್ರತಿಷ್ಠಾನದ‌ ಅಧ್ಯಕ್ಷ‌ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಟಣೆಯಲ್ಲಿ ತಿಳಿಸಿದ್ದಾರೆ.

Write A Comment