ಕನ್ನಡ ವಾರ್ತೆಗಳು

ಚಿನ್ನದ ಮೈಕಾಂತಿಗೆ ಅಲೋವರ

Pinterest LinkedIn Tumblr

belli

ಮಾರುಕಟ್ಟೆಯಲ್ಲಿ ದೊರೆಯುವ ಸಿಕ್ಕ ಸಿಕ್ಕ ರಾಸಾಯನಿಕ ಸೌಂದರ್ಯವರ್ಧಕ ಸಾಮಗ್ರಿಗಳನ್ನು ಬಳಸಿ ತ್ವಚೆಯನ್ನು ಹಾಳುಮಾಡಿಕೊಳ್ಳುವ ಬದಲು ನೈಸರ್ಗಿಕವಾಗಿ ದೊರೆಯುವ ಅಲೋವರದಿಂದ ಹೊಂಬಣ್ಣದ ಮೈಕಾಂತಿ ಪಡೆಯಬಹುದಾಗಿದೆ. ಅಲೋವರದಿಂದ ಏನಲ್ಲ ಪ್ರಯೋಜನಗಳನ್ನು ಪಡೆಯಬಹುದೆಂಬ ಬಗ್ಗೆ ಇಲ್ಲಿದೆ ಕಿರು ಮಾಹಿತಿ.
1. ಉತ್ತಮ ಪ್ಯಾಕ್
ಒಂದು ಚಿಟಿಕೆ ಅರಿಶಿನ , ಒಂದು ಟೀ ಸ್ಪೂನ್ ಜೇನುತುಪ್ಪ, ಒಂದು ಟೀ ಸ್ಪೂನ್ ಹಾಲು ಮತ್ತು ಒಂದೆರಡು ಹನಿ ರೋಸ್ ವಾಟರ್ ಇವೆಲ್ಲವನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ, ಈ ಪೇಸ್ಟ್‌ಗೆ ಅಲೋವರ ಜೆಲ್ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಹೊತ್ತಿನ ಬಳಿಕ ತಣ್ಣನೆಯ ನೀರಿನಿಂದ ತುಳಿಯಿರಿ. ಇದು ಉತ್ತಮ ಪ್ಯಾಕ್ ಆಗಿ ಕಾರ‌್ಯ ನಿರ್ವಹಿಸುತ್ತದೆ.

2. ಫೇಸಿಯಲ್ ಕ್ಲೆನ್ಸರ್
ಒಂದು ಟೀ ಸ್ಪೂನ್ ಆಲಿವ್ ಆಯಿಲ್, ರೋಸ್ ವಾಟರ್ ಮತ್ತು ದ್ರಾಕ್ಷಿ ಬೀಜ ಎಣ್ಣೆಯ ಕೆಲವು ಹನಿಗಳನ್ನು ಮಿಕ್ಸ್ ಮಾಡಿ. ಅದನ್ನು ನಿಮ್ಮ ಮುಖಕ್ಕೆ ಹಚ್ಚಿ. ಸ್ವಲ್ಪ ಹೊತ್ತಿನ ನಂತರ ತಣ್ಣನೆಯ ನೀರಿನಿಂದ ತೊಳೆಯಿರಿ. ಇದನ್ನು ನಿಯಮಿತವಾಗಿ ಮಾಡಿಕೊಂಡು ಬರುವುದರಿಂದ ಮುಖದ ಅಂದ ಹೆಚ್ಚುತ್ತದೆ. ಉಳಿದ ಮಿಶ್ರಣವನ್ನು ಇನ್ನೊಮ್ಮೆ ಬಳಕೆಗೆ ರೆಫ್ರಿಜರೇಟರ್‌ನಲ್ಲಿ ಇಡಿ.

3. ಚರ್ಮದ ಮಾಯಿಶ್ಚರೈಸರ್
ಮೃದು, ಹೊಳೆಯುವ ಮೈಕಾಂತಿಗಾಗಿ ಬೆಳಗ್ಗೆ ಮತ್ತು ರಾತ್ರಿ ಮುಖವನ್ನು ಕ್ಲೆನ್ಸಿಂಗ್ ಮಾಡಿದ ನಂತರ ಅಲೋವರ ಜೆಲ್ ಅನ್ನು ನೇರವಾಗಿ ನಿಮ್ಮ ಮುಖಕ್ಕೆ ಅಪ್ಲೈ ಮಾಡಿ.

4. ಚರ್ಮದ ಪೋಷಣೆಗೆ
ಅಲೋವರದಲ್ಲಿ ಅಮಿನೊ ಆ್ಯಸಿಡ್, ಬಿ 12 ಸೇರಿದಂತೆ ಬಿ ಗ್ರೂಪ್ ವಿಟಮಿನ್ಸ್, ವಿಟಮಿನ್ ಸಿ, ಇ, ಕ್ಯಾಲ್ಸಿಯಂ, ಕಬ್ಬಿಣ , ಮ್ಯಾಗ್ನೇಶಿಯಂ, ಪೊಟಾಷಿಯಂ, ಸೋಡಿಯಂ ಮತ್ತು ಜಿಂಕ್‌ನಂತಹ ಖನಿಜಾಂಶಗಳು ಹೇರಳವಾಗಿರುವುದರಿಂದ ಚರ್ಮದ ಪೋಷಣೆಗೆ ಹೇಳಿಮಾಡಿಸಿದಂತಿದೆ.

5. ಸ್ಕಿನ್ ಸ್ಕ್ರಬ್
ಸಾವಯವ ಸಕ್ಕರೆ ಸ್ಕ್ರಬ್ ಅನ್ನು ತಯಾರಿಸಿಕೊಳ್ಳಿ. ಇದನ್ನು ತಯಾರಿಸಿಕೊಳ್ಳಲು 2 ಟೇಬಲ್ ಸ್ಪೂನ್ ಅಲೋವರ, 2 ಟೇಬಲ್ ಸ್ಪೂನ್ ಬ್ರೌನ್ ಶುಗರ್ ಮತ್ತು ಒಂದು ಟೇಬಲ್ ಸ್ಪೂನ್ ನಿಂಬೆಹಣ್ಣಿನ ರಸ ಸೇರಿಸಿ ಮಿಶ್ರಣ ಮಾಡಿ . ಹಚ್ಚಿಕೊಳ್ಳಿ.

6. ಒಣಪ್ಯಾಚ್‌ಗೆ ಸಾಲ್ಟ್ ಸ್ಕ್ರಬ್

2 ಕಪ್ ಸೀ ಸಾಲ್ಟ್, 1 ಕಪ್ ಅಲೋವರ, 1 ಕಪ್ ಬೇಬಿ ಆಯಿಲ್ , 2 ಟೇಬಲ್ ಸ್ಪೂನ್ ಹನಿ. ಇವೆಲ್ಲವನ್ನು ಮಿಶ್ರಣ ಮಾಡಿ ಹಚ್ಚಿಕೊಳ್ಳಿ.

7. ಚರ್ಮ ಬಿಗಿಗೊಳಿಸಲು
ಅಲೋವರ ಚರ್ಮವನ್ನು ಬಿಗಿಗೊಳಿಸುವ ಗುಣ ಹೊಂದಿದೆ. ಅಲೋವರ ಕ್ರೀಮ್ ಅನ್ನು ಮುಖಕ್ಕೆ ಉಜ್ಜುವುದರಿಂದ ಅದು ಮುಖದಲ್ಲಿರುವ ದೊಡ್ಡದಾದ ರಂಧ್ರಗಳನ್ನು ಕಿರಿದು ಮಾಡುತ್ತದೆ.

8. ಮೊಡವೆ ನಿವಾರಣೆಗೆ
ಅಲೋವರವು ಸತ್ತ ಚರ್ಮವನ್ನು ತೆಗೆದುಹಾಕಲು ನೆರವು ನೀಡುತ್ತದೆ.ಮೊಡವೆಯಿಂದ ಉಂಟಾದ ಕಲೆ ನಿವಾರಣೆಗೂ ಉಪಯುಕ್ತ .

9. ತಲೆಹೊಟ್ಟು ನಿವಾರಣೆ ಮತ್ತು ಸುಂದರವಾದ ಕೂದಲಿಗಾಗಿ
ನಿಮಗೆ ತಲೆಹೊಟ್ಟಿನ ಸಮಸ್ಯೆಯಿದ್ದರೆ ಅಲೋವರ ಶ್ಯಾಂಪುವನ್ನು ತಲೆಬುಡಕ್ಕೆ ಹಚ್ಚಿ 15 ನಿಮಿಷ ಹಾಗೆಯೇ ಬಿಡಿ. ಬಳಿಕ ಕೂದಲನ್ನು ತೊಳೆಯಿರಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ನಿಮ್ಮ ಕೂದಲು ತಲೆಹೊಟ್ಟಿನಿಂದ ಮುಕ್ತವಾಗುತ್ತದೆ.

10. ಕೂದಲಿನ ಬೆಳವಣಿಗೆಗೆ
ಅಲೋವರ ಜೆಲ್ ಅನ್ನು ತಲೆ ಬುಡಕ್ಕೆ ಮಸಾಜ್ ಮಾಡಿ. 30 ನಿಮಿಷ ಬಿಡಿ. ಇದು ನೆತ್ತಿಯಲ್ಲಿ ಕಿಣ್ವಗಳ ಉತ್ಪಾದನೆಗೆ ಪ್ರಚೋದನೆ ನೀಡುವುದರಿಂದ ಕೂದಲ ಬೆಳವಣಿಗೆಗೆ ಸಹಕಾರಿಯಾಗಿದೆ.

11. ಕಂಡೀಷನರ್
ಅಲೋವರ ಉತ್ತಮ ಹೇರ್‌ಕಂಡೀಷನರ್ ಆಗಿ ಕಾರ‌್ಯ ನಿರ್ವಹಿಸುತ್ತದೆ,. ಮಾರುಕಟ್ಟೆಯಲ್ಲಿ ದೊರೆಯುವ ಯಾವುದೇ ಹೇರ್ ಕಂಡೀಷನರ್‌ಗಿಂತ ಉತ್ತಮವಾಗಿದ್ದು, ಇದರ ಬಳಕೆಯಿಂದ ನಿಮ್ಮ ಕೂದಲು ರೇಷ್ಮೆಯಂತೆ ನುಣುಪಾಗುತ್ತದೆ.

12. ಕಲರಿಂಗ್ ಹೇರ್
ಮಾರುಕಟ್ಟೆಯಲ್ಲಿ ದೊರೆಯುವ ಹೇರ್ ಕಲರೆಂಟ್ಸ್ ರಾಸಾಯನಿಕದಿಂದ ಕೂಡಿದ್ದು, ಕೂದಲಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಅಲೋವರ ಬಳಸುವುದರಿಂದ ಅದು ನಿರ್ದಿಷ್ಟ ರಕ್ಷಣೆಯನ್ನು ನೀಡುತ್ತದೆ. ಕೂದಲನ್ನು ಡೈ ಮಾಡುವ ಮುನ್ನ ಹೇರ್ ಡೈ ಪೌಡರ್‌ಗೆ ಅಲೋವರವನ್ನು ಮಿಶ್ರಣ ಮಾಡಿ. ಇದು ಮಾಯಿಶ್ಚರೈಸರ್ ನಷ್ಟವಾಗುವುದನ್ನು ತಡೆಯುತ್ತದೆ.

Write A Comment