ಕನ್ನಡ ವಾರ್ತೆಗಳು

ಮನಸು ರಿಲ್ಯಾಕ್ಸ್ ಆಗಿರಲಿ

Pinterest LinkedIn Tumblr

rain

ಸಣ್ಣದೊಂದು ಚಿಂತೆ, ಅಸಮಾಧಾನ ಕೂಡ ಮಾನಸಿಕ ಸಮತೋಲನ ತಪ್ಪಿಸಬಹುದು. ಹಂತಹಂತವಾಗಿ ಅದು ಖಿನ್ನತೆ ರೂಪ ತಾಳಬಹುದು.

ಸಣ್ಣದೊಂದು ಕಾರಣಕ್ಕೆ ಶುರುವಾದ ಚಿಂತೆ ಅನ್ನುವುದು ಮಾನಸಿಕ ಒತ್ತಡ ಹೆಚ್ಚಿಸುತ್ತದೆ. ದೈಹಿಕವಾಗಿಯೂ ನಾನಾ ರೋಗಗಳ ರೂಪದಲ್ಲಿ ಕಾಡಬಹುದು. ಅಷ್ಟೆಲ್ಲ ಆಗ್ಬೇಕಾ? ನಿಮ್ಮೊಳಗಿನ ಚಿಂತೆ ದೂರ ಮಾಡಿಕೊಳ್ಳುವುದನ್ನು ಮೊದಲು ಕಲಿಯಿರಿ.

* ಯೋಗ, ಧ್ಯಾನ, ಪ್ರಾಣಾಯಾಮ ಕಲಿತುಕೊಳ್ಳಿ.

* ಮನಸ್ಸು ಖಿನ್ನವಾಗುವಂತಾದರೆ ಒಂದು ವಾಕ್ ಹೋಗಿಬನ್ನಿ. ಕೆಲಸವನ್ನು ಆನಂತರ ಮಾಡಬಹುದು.

* ಚಿಕ್ಕಪುಟ್ಟದ್ದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ.

* ಸಮಯ ನಿರ್ವಹಣೆ ಮಾಡುವುದು ಕಲಿತುಕೊಳ್ಳಿ.

* ಓದುವುದು, ಬರೆಯುವ ಕ್ರಿಯೆ ಯಾವತ್ತೂ ಮನಸ್ಸಿಗೆ ಚೇತೋಹಾರಿ. ಸಂಗೀತ ಕೇಳಿ.

* ಕಾಫಿ, ಟೀ ಸೇವನೆ ಹೆಚ್ಚು ಬೇಡ.

Write A Comment