ಮಂಗಳೂರು,ಎ.02 : ‘ಜಾಗ್ರತಿ’ ಮಕ್ಕಳ ಸುರಕ್ಷತೆ ಮತ್ತು ಮಕ್ಕಳ ಆತ್ಮರಕ್ಷಣೆಯ ತಂತ್ರಗಳ ಕಾರ್ಯಾಗಾರವು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಕೊಡಿಕಲ್ ನಲ್ಲಿ ಬುಧವಾರ ಸ೦ತ ಅಲೋಶಿಯಸ್ ಕಾಲೇಜಿನ ಮಾಧ್ಯಮ ವಿಭಾಗದ (ಎಂ.ಸಿ.ಎಂ.ಎಸ್) ವಿದ್ಯಾರ್ಥಿಗಳು ಇವರು ಮಂಗಳೂರು ಮೂಲದ ಎನ್ಜಿಒ , ಇಂಚರ ಫೌಂಡೇಶನ್ (ರಿ) ಮತ್ತು ಅಲೋಶಿಯಸ್ ಕಾಲೇಜಿನ ಸಮಾಜ ಇಲಾಖೆ ಸಹಯೋಗದೊಂದಿಗೆ ನಡೆಸಲಾಯಿತು.
ಇಂಚರ ಪ್ರತಿಷ್ಠಾನದ ಶ್ರೀ ಪ್ರೀತಮ್ ರೊಡ್ರಿಗಸ್ ತಮ್ಮ ತಂಡದ ಸದಸ್ಯರು ಜೊತೆಗೆ ಮಕ್ಕಳ ಸುರಕ್ಷತೆಯ ಬಗ್ಗೆ ಒಳನೋಟಗಳನ್ನು ನೀಡಿದರು. ಯಶಸ್ವಿಯಾಗಿ ‘ ಪ್ರಾಜೆಕ್ಟ್ ಏಂಜೆಲ್ ‘ ಯೆನ್ನುವ ಮಕ್ಕಳ ಸುರಕ್ಷತೆ ಜಾಗೃತಿ ಕಾರ್ಯಕ್ರಮವು 2500 ಮಕ್ಕಳಿಗೆ ನಡೆಸಿರುವ ಅನುಭವವಿದೆ . ಯಾವುದೇ ಸಮಸ್ಯೆಯನ್ನು ನಿಭಾಯಿಸವುದು ಬಹಳ ಮುಖ್ಯ ಮತ್ತು ಪ್ರತಿ ಸನ್ನಿವೇಶದಲ್ಲಿ ಎಚ್ಚರವಾಗಿರಲು ಮಕ್ಕಳಿಗೆ ಹೆಳಿದರು.
ನಂತರ ‘ ಸ್ಟಂಟ್ ಏಕಲವ್ಯ ‘, ‘ಮಂಗಳೂರು ಏಕಲವ್ಯ ‘ ಎಂದು ಕರೆಯಲ್ಪಡುವ ಕಾರ್ತಿಕ್ ಕಟೀಲು ಮಕ್ಕಳಿಗೆ ಆತ್ಮರಕ್ಷಣೆಯ ಪ್ರದರ್ಶನ ನೆರವೇರಿಸಿದರು. ತಮ್ಮ 123ನೆ ಸ್ವಯಂ ರಕ್ಷಣಾ ಟೆಕ್ನಿಕ್ ನಡೆಸಿ ಮತ್ತು ಅವುಗಳನ್ನು ಹೇಗೆ ಮಾಡಬಹುದೆಂದು ಹೇಳಿಕೊಟರು. ಕಾರ್ತಿಕ್ ಕಟೀಲುರವರು ರಾಜ್ಯಾದ್ಯಂತ ಸುಮಾರು 30,000 ಹುಡುಗಿಯರು ಮತ್ತು ಮಹಿಳೆಯರಿಗೆ ಆತ್ಮರಕ್ಷಣೆಯ ಕರ್ಯಕ್ರಮ ಆಯೋಜಿಸಿದ್ದಾರೆ .
ಅಲೋಶಿಯಸ್ ಕಾಲೇಜಿನ ಮಾಧ್ಯಮ ವಿಭಾಗದ(ಎಂ.ಸಿ.ಎಂ.ಎಸ್) ವಿದ್ಯಾರ್ಥಿಗಳು ವಿವಿಧ ಸಮಾಜಮುಕಿ ಕಾರ್ಯಕ್ರಮಗಳನ್ನು ಮಾದುತಿದ್ದು, ಮಂಗಳೂರು ನಲ್ಲಿ ಮಕ್ಕಳ ಮೇಲೆಆದ ಅನೇಕ ಘಟನೆಗಳು ತಡೆಗಟುವ ಸಲುವಾಗಿ ‘ಜಾಗ್ರತಿ’ ಎಂಬ ಮಕ್ಕಳ ಸುರಕ್ಷತೆ ಮತ್ತು ಮಕ್ಕಳ ಆತ್ಮರಕ್ಷಣೆಯ ಕಾರ್ಯಾಗಾರ ಆಯೋಜಿಸಲಾಯಿತು.











