ಕಾಸರಗೋಡು,ಎಪ್ರಿಲ್.01 : ಬೈಕ್ ಕಳವು ಜಾಲದ 2 ಮಂದಿಯನ್ನು ಕಾಸರಗೋಡು ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಶ್ರೀನಿವಾಸ್ ನೇತೃತ್ವದ ಪೊಲೀಸರು ಬಂಧಿಸಿದ್ದು, ಅವರಿಂದ 12 ಬೈಕ್‌ಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಂಧಿತರು ಅಪ್ರಾಪ್ತ ವಯಸ್ಕರಾಗಿದ್ದು. ಮಂಗಳೂರಿನಿಂದ ಎರ್ನಾಕುಲಂವರೆಗೆ ವಿವಿಧೆಡೆಗಳಿಂದ 40ಕ್ಕೂ ಅಧಿಕ ಬೈಕ್‌ಗಳನ್ನು ಈ ಜಾಲವು ಕಳವು ಮಾಡಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ. ಬಂಧಿತರನ್ನು ತಲಂಗರೆ ಗುಡ್ಡೆಯ ಶಮಾಸ್(18), ಬದಿಯಡ್ಕ ಅಂಗಾರ ಮೂಲೆಯ ಶಯದಾಫ್ (18) ಎಂದು ತಿಳಿದು ಬಂದಿದೆ.
ಅವರಿಂದ ವಶಪಡಿಸಿಕೊಂಡ ಬೈಕ್‌ಗಳ ನಂಬರ್ ನಕಲಿ ಎಂದು ಪೊಲೀಸರು ತಿಳಿಸಿದ್ದಾರೆ. ಬೈಕ್‌ಗಳನ್ನು ಕಳವು ಗೈದು ನಂಬರ್ ಪ್ಲೇಟ್ ಬದಲಾಯಿಸಿ ಮಾರಾಟ ಮಾಡುತ್ತಿದ್ದರು. ಕೇರಳದಿಂದ ಕಳವುಗೈದ ಬೈಕ್‌ಗಳನ್ನು ಕರ್ನಾಟಕದಲ್ಲಿ ಮಾರಾಟ ಮಾಡಿದ್ದರು ಎಂದು ಬಂಧಿತರಿಂದ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ತಿಳಿಸಿದ್ದಾರೆ.