ಉಡುಪಿ: ಇಯರ್ ಎಂಡ್ ದಿನವಾದ ಇಂದು (ಮಾ.31 ಮಂಗಳವಾರ) ಮುಂಜಾನೆಯಿಂದಲೇ ಉಡುಪಿ ಜಿಲ್ಲೆಯ ಹಲವೆಡೆ ವರುಣನ ಆರ್ಭಟ ಜೋರಾಗಿದ್ದು ಗುಡುಗು ಸಿಡಿಲಿನ ಸಹಿತ ಗಾಳಿ ಮಳೆಯಾಗುತ್ತಿದೆ. ಜಿಲ್ಲೆಯ ಕುಂದಾಪುರ, ಬ್ರಹ್ಮಾವರ, ಬೈಂದೂರು ಭಾಗಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಅಲ್ಲಲ್ಲಿ ಮರ ಬಿದ್ದು ಹಾನಿ ಸಂಭವಿಸಿರುವ ಬಗ್ಗೆಯೂ ವರದಿಯಾಗಿದೆ.
ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಜನಜೀವನ ಅಸ್ಥವ್ಯಸ್ಥಗೊಂಡಿದ್ದು ಒಂದೆಡೆಯಾದರೇ ಬೇಸಿಗೆ ಬಿಸಿಲಿನ ಪ್ರಕರತೆಯಿಂದ ಕಂಗೆಟ್ಟಿದ್ದ ಜನರಿಗೆ ಮಳೆಯು ಸ್ವಲ್ಪ ಕೂಲ್ ವಾತಾವರಣ ಸ್ರಷ್ಟಿ ಮಾಡಿಕೊಟ್ಟಿದೆ.
ಬೈಂದೂರು ಭಾಗದಲ್ಲಿ ಮುಂಜಾನೆ 5 ಗಂಟೆಗೆ ಆರಂಭವಾಗಿದ್ದ ಮಳೆ ಬೆಳಿಗ್ಗೆ 9 ಗಂಟೆಯವರೆಗೂ ಮುಂದುವರಿದಿತ್ತು. ಅಲದೇ ಕುಂದಾಪುರದಲ್ಲಿ 6.30ಕ್ಕೆ ಆರಂಭಗೊಂಡ ಮಳೆ 9 ಗಂಟೆಯವರೆಗೂ ಸುರಿಯುತ್ತಿದೆ.