ಮಂಗಳಗಂಗೋತ್ರಿ, ಮಾರ್ಚ್ .27: ಪ್ರಾದೇಶಿಕ ಅನುಷ್ಠಾನ ಕಚೇರಿ( ದಕ್ಷಿಣ ಮತ್ತು ನೈರುತ್ಯ) ಹಾಗೂ ನಗರ ಅಧಿಕೃತ ಭಾಷಾ ಅನುಷ್ಠಾನ ಸಮಿತಿ ವತಿಯಿಂದ ನಗರದ ಹೋಟೆಲ್ ಓಶಿಯನ್ ಪರ್ಲ್‌ನಲ್ಲಿ ಅಯೋಜಿಸಲಾದ ಪ್ರಾದೇಶಿಕ ಮತ್ತು ಅಧಿಕೃತ ಭಾಷಾ ದಕ್ಷಿಣ ಹಾಗೂ ಪಶ್ಚಿಮ ವಯಲಗಳ ಸಮಾವೇಶವನ್ನು ಶುಕ್ರವಾರ ಕರ್ನಾಟಕದ ರಾಜ್ಯಪಾಲ ವಜೂಬಾಯಿ ರುಡಾಬಾಯಿ ವಾಲಾ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರಾದೇಶಿಕ ಭಾಷೆಗಳಲ್ಲಿ ಆಗಿರುವ ಕೆಲಸಗಳನ್ನು ಹಿಂದಿಗೆ ಭಾಷಾಂತರಿಸುವ ಮೂಲಕ ರಾಷ್ಟ್ರ ಭಾಷೆಯನ್ನು ರಾಷ್ಟ್ರೀಯ ಐಕ್ಯತೆ ವೃದ್ಧಿಗೆ ಬಳಕೆ ಮಾಡುವ ಅಗತ್ಯವಿದೆ ಹೇಳಿದರು.
ದಕ್ಷಿಣ ಭಾರತ ಅರಿವಿನ ಗಂಗೆಯಿದಂತೆ ಕನ್ನಡ, ತಮಿಳು, ತೆಲುಗು, ಮಳಿಯಾಳಂ ಮುಂತಾದ ಪ್ರಾದೇಶಿಕ ಭಾಷೆಗಳ ಚಿಂತನೆ, ಸಾಹಿತ್ಯ ಹಿಂದಿಗೆ ಭಾಷಾಂತರವಾಗಿ ಅದು ಇಡೀ ದೇಶದ ಜನರಿಗೆ ತಿಳಿಯುವಂತಾಗಬೇಕು. ಹಿಂದಿಯನ್ನು ರಾಷ್ಟ್ರ ಭಾಷೆಯೆಂದು ಸಂವಿಧಾನದಲ್ಲಿ ಒಪ್ಪಿಕೊಂಡಿರುವುದರಿಂದ ನಾವು ಯಾರೂ ಹಿಂದಿ ವಿರೋಧಿಗಳಲ್ಲವೆಂದರು. ಇಂಗ್ಲೀಷ್ ಭಾಷೆ ಕಲಿಯಲು ತೋರುವ ಉತ್ಸಾಹವನ್ನು ಹಿಂದಿ ಭಾಷೆ ಕಲಿಯಲು ತೋರಿಸಬೇಕು. ಭಾಷೆ ಬೇರೆ ಇರಬಹುದು ಆದರೆ ದೇಶ ಒಂದೇ ಎನ್ನುವ ಮನೋಭಾವ ಎಲ್ಲ ಜನರಲ್ಲಿ ಇರಬೇಕು ಎಂದು ರಾಜ್ಯಪಾಲರು ಹೇಳಿದರು.
ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವಾಲಯ(ಅಧಿಕೃತ ಭಾಷಾ ಇಲಾಖೆ) ಜಂಟೀ ಕಾರ್ಯದರ್ಶಿ ಸ್ನೇಹಲತಾ ಕುಮಾರ್ ಮುಖ ಅತಿಥಿಯಾಗಿದ್ದರು. ದಕ್ಷಿಣ ಭಾರತದ ರಾಜ್ಯಗಳ ವಿವಿಧ ಕೇಂದ್ರೀಯ ಇಲಾಖೆಗಳ, ಬ್ಯಾಂಕುಗಳ, ಸಾರ್ವಜನಿಕ ಸಂಸ್ಥೆಗಳ ಪ್ರತಿನಿಧೀಗಳು ಭಾಗವಹಿಸಿದರು.
ಇದೇ ಸಂದರ್ಭದಲ್ಲಿ ಹಿಂದಿ ಅನುಷ್ಠಾನದಲ್ಲಿ ಉತ್ಕೃಷ್ಟ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.