ಕನ್ನಡ ವಾರ್ತೆಗಳು

ವಿದೇಶಾಂಗ ಸಚಿವಾಲಯದ ನೂತನ ವಕ್ತಾರನಾಗಿ ‘ಸ್ಲಂ ಡಾಗ್ ಮಿಲಿಯನೇರ್’ ಲೇಖಕ

Pinterest LinkedIn Tumblr

Swarup_vikas_akurdihn

ನವದೆಹಲಿ,ಮಾರ್ಚ್.27: ಹಿರಿಯ ಅಧಿಕಾರಿ ವಿಕಾಸ್ ಸ್ವರೂಪ್ ಅವರ ಚೊಚ್ಚಲ ಕಾದಂಬರಿ ‘ಕ್ಯು&ಎ’, ‘ಸ್ಲಂ ಡಾಗ್ ಮಿಲಿಯನೇರ್’ ಸಿನೆಮಾವಾಗಿ ರೂಪಾಂತರ ಪಡೆದು ಆಸ್ಕರ್ ಗೆದ್ದಿದ್ದು ತಿಳಿದಿರಬೇಕಷ್ಟೇ. ಈಗ ವಿಕಾಸ್ ಸ್ವರೂಪ್ ವಿದೇಶಾಂಗ ಸಚಿವಾಲಯದ ವಕ್ತಾರರಾಗಿ ಸಯ್ಯದ್ ಅಕ್ಬರುದ್ದೀನ್ ಅವರನ್ನು ಬದಲಿಸಿದ್ದಾರೆ. ಸಯ್ಯದ್ ಅಕ್ಬರುದ್ದೀನ್ ಅವರಿಗೆ ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾಗಿ ಮುಂಬಡ್ತಿ ನೀಡಿರುವುದರಿಂದ 1986  ಐ ಎಫ್ ಎಸ್ ಅಧಿಕಾರಿ ಸ್ವರೂಪ್, ಸಯ್ಯದ್ ಅವರನ್ನು ಬದಲಿಸಿದ್ದಾರೆ. ಸಯ್ಯದ್ ಅಕ್ಬರುದ್ದೀನ್ ಅಕ್ಟೋಬರ್ ನಲ್ಲಿ ನಡೆಯಲಿರುವ ಭಾರತ-ಆಫ್ರಿಕಾ ಶೃಂಗಸಭೆಯ ಮುಖ್ಯ ಒಡಂಬಡಿಗರಾಗಿ ಕೂಡ ಹೆಚ್ಚುವರಿ ಅಧಿಕಾರ ಕೂಡ ನೀಡಲಾಗಿದೆ.

ಸದ್ಯಕ್ಕೆ ವಿದೇಶಾಂಗ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿರುವ (ವಿಶ್ವಸಂಸ್ಥೆ-ರಾಜಕೀಯ) ಸ್ವರೂಪ್ ಏಪ್ರಿಲ್ 18  ರಿಂದ ಈ ಹೊಸ ಅಧಿಕಾರವನ್ನು ಸ್ವೀಕರಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷತೆ ಮತ್ತು ವೃತ್ತಿಪರತೆಗೆ ಹೆಸರುವಾಸಿಯಾದ ಅಕ್ಬರುದ್ದೀನ್ ಈ ಹುದ್ದೆಯಲ್ಲಿ ಮೂರು ವರ್ಷಗಳಿಂದ ನಿರತರಾಗಿದ್ದರು.

Write A Comment