ಟೊರಾಂಟೋ,ಮಾರ್ಚ್.27 : ನೀವು ನಿಮ್ಮ ಜೀಮೇಲ್ ಅಥವಾ ಫೇಸ್‌ಬುಕ್ ಅಕೌಂಟ್‌ಗೆ ಸ್ಟ್ರಾಂಗ್ ಆಗಿರುವ ಪಾಸ್‌ವರ್ಡ್ ಕೊಟ್ಟಿದ್ದೀರಾ ಪಾಸ್‌ವರ್ಡ್ ಸೆಟ್ ಮಾಡುವಾಗ ನಿಮ್ಮ ಪಾಸ್‌ವರ್ಡ್ ಸ್ಟ್ರಾಂಗ್ ಆಗಿಲ್ಲ ಎಂದು ಗ್ರೀನ್ ಲೈನ್ ಕಾಣಿಸಿಕೊಂಡರೆ ಅದನ್ನು ಕಡೆಗಣಿಸಬೇಡಿ ಎಂದು ಇತ್ತೀಚಿನ ಅಧ್ಯಯನ ವರದಿಯೊಂದು ಹೇಳಿದೆ.
ಕಾನ್‌ಕೋರ್ಡಿಯಾ ಯುನಿವರ್ಸಿಟಿ ನಡೆಸಿದ ಅಧ್ಯಯನವೊಂದರಲ್ಲಿ ದುರ್ಬಲವಾಗಿರುವ ಪಾಸ್‌ವರ್ಡ್ ಕೊಡುವಾಗ ಪಾಸ್ ವರ್ಡ್ ಮೀಟರ್ ಪಾಸ್‌ವರ್ಡ್ ಸ್ಟ್ರಾಂಗ್ ಇದೆಯೋ ಇಲ್ಲವೋ ಎಂದು ತೋರಿಸುತ್ತದೆ. ನಾವು ಸ್ಟ್ರಾಂಗ್ ಆಗಿರುವ ಪಾಸ್‌ವರ್ಡ್ ಕೊಟ್ಟ ಕೂಡಲೇ ಅದು ಪಾಸ್‌ವರ್ಡ್ ಸ್ಟ್ರಾಂಗ್ ಎಂದು ತೋರಿಸುತ್ತದೆ, ಅಲ್ಲಿಗೆ ನಾವು ಸಮಾಧಾನ ಪಟ್ಟುಕೊಳ್ಳುತ್ತೇವೆ.ಆದರೆ ಎಲ್ಲ ವೆಬ್‌ಸೈಟ್‌ಗಳಿಗೆ ಇದು ಅನ್ವಯಿಸುವುದಿಲ್ಲ. ಒಂದು ವೆಬ್‌ಸೈಟ್‌ನಲ್ಲಿ ಇದು ಸ್ಟ್ರಾಂಗ್ ಆಗಿದ್ದರೆ ಇನ್ನೊಂದರಲ್ಲಿ ಇದು ದುರ್ಬಲವಾಗಿರುತ್ತದೆ ಎಂದು ಅಧ್ಯಯನ ತಂಡದ ನಾಯಕ ಫ್ರೊಫೆಸರ್ ಮೊಹಮ್ಮದ್ ಮನ್ನನ್ ಹೇಳಿದ್ದಾರೆ.
ಈ ವೈರುಧ್ಯಗಳಿಂದಾಗಿ ಬಳಕೆದಾರ ಗೊಂದಲಗೊಳಗಾಗುತ್ತಾನೆ ಎಂದು ಅಧ್ಯಯನ ತಂಡ ಹೇಳಿದೆ. ಗೂಗಲ್, ಯಾಹೂ, ಡ್ರಾಪ್ ಬಾಕ್ಸ್, ಟ್ವಿಟರ್ ಮತ್ತು ಸ್ಕೈಪ್‌ಗಳಲ್ಲಿ ಬಳಸಲಾಗುವ ಪಾಸ್‌ವರ್ಡ್ ಮತ್ತು ಈ ಸೈಟ್‌ಗಳಲ್ಲಿ ಉಪಯೋಗಿಸಲ್ಪಡುವ ಪಾಸ್‌ವರ್ಡ್ ಮೀಟರ್‌ಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಿದ್ಧಪಡಿಸಿದೆ. ಸಾಮಾನ್ಯವಾಗಿ ಬಳಸಲ್ಪಡುವ ಪಾಸ್‌ವರ್ಡ್‌ನ್ನು ಮತ್ತೆ ಮತ್ತೆ ಬಳಸುವಾಗ ಈ ಪಾಸ್‌ವರ್ಡ್ ಮೀಟರ್ ನಿಮ್ಮ ಪಾಸ್‌ವರ್ಡ್ ದುರ್ಬಲ ಎಂದು ತೋರಿಸುತ್ತದೆ ಎಂದು ಅಧ್ಯಯನ ತಂಡ ಹೇಳಿದೆ.