ಮಂಗಳೂರು,ಮಾರ್ಚ್.27 : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶತಮಾನದ ಶತನಮನ ಕಾರ್ಯಕ್ರಮ ಮಾಲಿಕೆಯಲ್ಲಿಡಾ. ಎಸ್. ಎಲ್ ಭೈರಪ್ಪ ಸಾಹಿತ್ಯ ಅನುಸಂಧಾನ – ಸಂವಾದ ಕಾರ್ಯಕ್ರಮ ಇತ್ತೀಚಿಗೆ ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿರುವ ಶಾರದಾ ವಿದ್ಯಾಲಯ ಸಭಾಂಗಣದಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಸಂವಾದದಲ್ಲಿ ಡಾ. ವರದ ರಾಜಚಂದ್ರಗಿರಿ, ಡಾ. ಅಜಕ್ಕಳ ಗಿರೀಶ್ ಭಟ್, ಡಾ. ಹೆಚ್. ಆರ್. ವಿಶ್ವಾಸ್, ಸುಹಾಸಂ ಅಧ್ಯಕ್ಷ ಹೆಚ್. ಶಾಂತರಾಜ ಐತಾಳ್, ಸದಾನಂದ ಪೆರ್ಲ, ಡಾ. ರಾಧಾಕೃಷ್ಣ ಬೆಳ್ಳೂರು, ಡಾ. ವೀಣಾಎನ್. ಉಪಸ್ಥಿತರಿದ್ದರು.
ಮನೋಹರ್ ಪ್ರಸಾದ್ ಮತ್ತು ಮಾಧುರಿ ಶ್ರೀರಾಮ್ ಕಾರ್ಯಕ್ರಮ ನಿರ್ವಹಿಸಿದರು.