ಮಂಗಳೂರು: ಮಂಗಳೂರು-ಅಬುದಾಬಿ ನಡುವೆ ಜೆಟ್ ಏರ್‌ವೇಸ್‌ನ ವಿಮಾನ ಸಂಚಾರ ಮಾ. 29ರಿಂದ ಆರಂಭವಾಗಲಿದೆ. ಮಾ. 29ರಂದು ಮಧ್ಯಾಹ್ನ 1.45ಕ್ಕೆ ಅಬುದಾಬಿಯಿಂದ ಮಂಗಳೂರಿಗೆ ವಿಮಾನ ಆಗಮಿಸಲಿದೆ. ಮಂಗಳೂರಿನಿಂದ 5.50ಕ್ಕೆ ಅಬುದಾಬಿಗೆ ತೆರಳಲಿದೆ.
ಜೆಟ್ ಏರ್‌ವೇಸ್ ಈಗಾಗಲೇ ದುಬಾಯಿಗೆ ಆಪರೇಟ್ ಮಾಡುತ್ತಿದ್ದು, ಇದು ಎರಡನೇ ವಿಮಾನವಾಗಿದೆ. ಮಂಗಳೂರಿನಿಂದ ಜೆಟ್‌ಏರ್‌ವೇಸ್ ಆಪರೇಟ್ ಮಾಡುತ್ತಿರುವ 10ನೇ ವಿಮಾನ ಇದಾಗಿದೆ. 8 ದೇಶೀಯ ಹಾಗೂ ಎರಡು ಅಂತಾರಾಷ್ಟ್ರೀಯ ವಿಮಾನಗಳನ್ನು ಜೆಟ್ ಏರ್‌ವೇಸ್ ಮಂಗಳೂರಿನಿಂದ ಆಪರೇಟ್ ಮಾಡುತ್ತಿವೆ. ಇದರ ಜತೆಗೆ ಸೈಸ್ ಜೆಟ್ ವಿಮಾನ ಮಂಗಳೂರು-ಬೆಂಗಳೂರಿನ ನಡುವೆ ಮಾ. 29ರಿಂದ ಆರಂಭವಾಗಲಿದೆ.
