ಮಂಗಳೂರು,ಮಾರ್ಚ್.25 : ನಗರದ ಮಣ್ಣಗುಡ್ಡೆ ಬಳಿ ಯುವಕನ ತಲೆಗೆ ಕಲ್ಲು ಎತ್ತಿ ಹಾಕಿ ಹತ್ಯೆಗೈಯಲು ಯತ್ನಿಸಿದ ಘಟನೆ ಬುಧವಾರ ಮುಂಜಾನೆ 5.30 ರ ವೇಳೆ ನಡೆದಿದೆ. ಯುವಕನನ್ನು ಸುರತ್ಕಲ್ ಚಿತ್ರಾಪುರದ ನಾಗರಾಜ ಪ್ರಭು (36) ಎಂದು ಗುರುತಿಸಲಾಗಿದ್ದು, ಬಲವಾದ ಏಟಿನಿಂದ ಗಂಭೀರಾ ಗಾಯಗೊಂಡಿರುವ ಈತನನ್ನು ಚಿಕಿತ್ಸೆಗಾಗಿ ನಗರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಬೆಳಿಗ್ಗೆ ಕೆನಾರ ಕಾಲೇಜು ಬಳಿಯ ದ್ವಿಚಕ್ರ ವಾಹನ ಕಂಪನಿಯೊಂದರ ಸರ್ವೀಸ್ ಸೆಂಟರ್‌ನ ಮೆಟ್ಟಲಿನಲ್ಲಿ ಕಲ್ಲೇಟಿನಿಂದ ಗಂಭೀರಾ ಗಾಯಗೊಂಡಿರುವ ಈತ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಯುವಕನ ತಲೆಗೆ ಕಲ್ಲು ಎತ್ತಿ ಹಾಕಿದವರರು ಯಾರೆಂಬುವುದು ತಿಳಿದುಬಂದಿಲ್ಲ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.