ಕನ್ನಡ ವಾರ್ತೆಗಳು

ಉಡುಪಿಯ ಪೋರನಿಗೆ ಸರಿಗಮಪ ಲಿಟಲ್ ಚಾಂಪ್ ಪಟ್ಟ; ವಿನ್ನರ್ ಆದ ಗಗನ್ ಗಾಂವ್ಕರ್

Pinterest LinkedIn Tumblr
ಉಡುಪಿ: ಜೀ ಟಿವಿ ಹಿಂದಿ ವಾಹಿನಿಯು ನಡೆಸುತ್ತಿದ್ದ  ಸರಿಗಮಪ ಲಿಟಲ್ ಚಾಂಪ್ಸ್-5 ರಿಯಾಲಿಟಿ ಶೋಗೆ ತೆರೆಬಿದ್ದಿದ್ದು ಈ ಬಾರಿಯ ಲಿಟಲ್ ಚಾಂಪ್ಸ್ ಪಟ್ಟವನ್ನು ಕರ್ನಾಟಕದ ಏಕೈಕ ಸ್ವರ್ಧಿಯಾಗಿದ್ದ ಉಡುಪಿಯ ಪ್ರತಿಭೆ ಗಗನ್ ಗಾಂವ್ಕರ್ ಅಲಂಕರಿಸಿದ್ದಾರೆ.
ತನ್ನ ಪ್ರತಿಭೆಯ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಈ 13ರ ಹರೆಯದ ಗಗನ್ ಫೈನಲ್ ಹಂತವನ್ನು ಓಟಿಂಗ್ ಮೂಲಕ ಸುಲಭವಾಗಿ ತಲುಪಿ, ಅಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಆಕರ್ಷಕ ಟ್ರೋಫಿ ಮತ್ತು ನಿಸಾನ್ ಸನ್ನಿ ಕಾರನ್ನು ಪ್ರಶಸ್ತಿಯಾಗಿ ಪಡೆದುಕೊಂಡಿದ್ದಾನೆ.
Littale Champs_Gagan_Udp
ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಮಾತನಾಡಿದ ಗಗನ್ ಭವಿಷ್ಯದಲ್ಲಿ ಎಂಜಿನಿಯರ್ ಹಾಗೂ ಮ್ಯೂಸಿಕ್ ಕಂಪೋಸರ್ ಆಗಬೇಕೆಂದಿದ್ದೇನೆ. ಮುಂದಿನ ದಿನಗಳಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಅವರನ್ನು ಭೇಟಿಯಾಗುವ ಮತ್ತು  ಅವರ ಚಿತ್ರಕ್ಕೆ ಹಾಡುವ ಆಕಾಂಕ್ಷೆಯಿದೆ ಇದೆ ಎಂದಿದ್ದಾನೆ. ಇದೇ ಸಂದರ್ಭದಲ್ಲಿ ತನ್ನ ಗೆಲುವಿಗೆ ಕಾರಣರಾದ ಎಲ್ಲರಿಗೂ ಆತ ಕೃತಜ್ಞತೆಯನ್ನು ಸಲ್ಲಿಸಿದ್ದಾನೆ.
ಗಗನ್ ಬಗ್ಗೆ ಒಂದಷ್ಟು: ಸಂಗೀತದ ಬಗ್ಗೆ ಗಗನ್‌ಗೆ ಚಿಕ್ಕಂದಿನಿಂದಲೇ ಒಲವು. ಯಾರೇ ಹಾಡಿದರೂ ಅದನ್ನು ಅನುಕರಣೆಗೆ ತೊಡಗುತ್ತಿದ್ದ. ಪಾಲಕರಿಗೂ ಸಂಗೀತ ಇಷ್ಟ ಆಗಿರುವುದರಿಂದ ಮನೆಯಲ್ಲಿ ಸಿ.ಡಿ. ಹಾಕಿ ಹಾಡುತ್ತಿದ್ದರು.
ಈತ ಬ್ರಹ್ಮಾವರ ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್‌ನಲ್ಲಿ ಕಲಿಯುತ್ತಿದ್ದು, ನಾಲ್ಕನೇ ಕ್ಲಾಸ್‌ನಲ್ಲಿ ಇರುವಾಗ ಬ್ರಹ್ಮಾವರದಲ್ಲಿ ನಡೆದ ಅಂತರ್‌ಜಿಲ್ಲಾ ಮಟ್ಟದ ಹಾಡು ಸ್ಪರ್ಧೆ ಗಾನಕೋಗಿಲೆ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿದ್ದ. ಇದೇ ಆತನ ಪ್ರಥಮ ಶೋ. 5ನೇ ಕ್ಲಾಸ್‌ನಲ್ಲಿರುವಾಗ ಝಿ ಕನ್ನಡದ ಸರಿಗಮ ಲಿಟ್ಲ್‌ಚಾಂಪ್ ಸ್ಫರ್ಧೆಗೆ ಆಯ್ಕೆಯಾಗಿದ. ಆನಂತರ ಲಿಟ್ಲ್‌ಚಾಂಪ್‌ನ ಚಾಂಪಿಯನ್ ಆಗಿ ಹೊರಹೊಮ್ಮುತ್ತಲೇ ರಾಜ್ಯದ ವಿವಿಧ ಕಡೆಯಿಂದ ಹಲವು ಅವಕಾಶಗಳು ಅರಸಿ ಬಂದಿದ್ದವು. ರಜೆ ಸಮಯದಲ್ಲಿ ಮಾತ್ರ ಮುಖ್ಯವಾದುದನ್ನು ಒಪ್ಪಿಕೊಂಡು ಕಾರ್ಯಕ್ರಮ ನೀಡಿದ್ದ.

 

Write A Comment