ಕನ್ನಡ ವಾರ್ತೆಗಳು

ಸರ್ಕಾರ ಪ್ರಾಮಾಣಿಕವಾಗಿದ್ದರೇ ಸಿಬಿ‌ಐ ತನಿಖೆಗೆ ಭಯವೇಕೆ ? ಕುಂದಾಪುರದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

Pinterest LinkedIn Tumblr

ಕುಂದಾಪುರ : ರಾಜ್ಯ ಕಂಡ ದಕ್ಷ ಐ.ಎ.ಎಸ್. ಅಧಿಕಾರಿ ಡಿ.ಕೆ. ರವಿಯವರ ಸಂಶಯಾಸ್ಪದ ಸಾವಿನ ಪ್ರಕರಣ ಕುರಿತು ತಕ್ಷಣವೇ ಸಿ.ಬಿ.ಐ. ತನಿಖೆ ನಡೆಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಕುಂದಾಪುರದ ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಂದಾಪುರ ಘಟಕವು ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

Kundapura_Students_Protest Kundapura_Students_Protest (1) Kundapura_Students_Protest (2) Kundapura_Students_Protest (3) Kundapura_Students_Protest (4) Kundapura_Students_Protest (5) Kundapura_Students_Protest (6) Kundapura_Students_Protest (7) Kundapura_Students_Protest (8) Kundapura_Students_Protest (9) Kundapura_Students_Protest (10) Kundapura_Students_Protest (11)

ಡಿಕೆ ರವಿ ಅವರ ಸಂಶಯಾಸ್ಪದ ಸಾವಿನ ಹಿಂದೆ ರಾಜಕೀಯ ಮತ್ತು ಭೂಮಾಫಿಯಾ, ಭ್ರಷ್ಟರ ಕೈವಾಡವಿದೆ. ಈಗಾಗಲೇ ಡಿ.ಕೆ. ರವಿ ಅವರ ಪೋಷಕರು ವಿಧಾನಸೌಧದ ಎದುರು ಧರಣಿ ನಡೆಸಿದ್ದಾರೆ. ಪೋಷಕರ ರೋದನೆಯನ್ನು ಕೇಳದೇ ಕಿವುಡುತನ, ಭಂಡತನವಾಗಿ ಸರ್ಕಾರ ವರ್ತಿಸುತ್ತಿದೆ. ಹಾಗೂ ಕಳೆದ ಎರಡು ದಿನಗಳಿಂದ ರಾಜ್ಯದ ಎಲ್ಲ ಜನತೆ, ವಿರೋಧ ಪಕ್ಷಗಳು, ನೂರಾರು ಸಂಘ ಸಂಸ್ಥೆಗಳು ಸೇರಿದಂತೆ ಎಲ್ಲಾ ಸಾರ್ವಜನಿಕ ವಲಯಗಳಿಂದ ಒಕ್ಕೊರಲಿನಿಂದ ಸಿಬಿ‌ಐ ತನಿಖೆಗೆ ಆಗ್ರಹಿಸಿ ನಿರಂತರವಾಗಿ ಪ್ರತಿಭಟನೆ, ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತವೆ. ಆದರೆ ರಾಜ್ಯ ಸರ್ಕಾರ ಮಾತ್ರ ತನ್ನ ಕುರುಡುತನ ಹಾಗೂ ಕಿವುಡುತನದಿಂದ ತನ್ನ ಭಂಡತನವನ್ನು ಪ್ರದರ್ಶಿಸುತ್ತದೆ ಹಾಗೂ ಈ ಪ್ರಕರಣವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸುತ್ತದೆ. ಆದ್ದರಿಂದ ಸಾರ್ವಜನಿಕ ವಲಯದ ಅಭಿಪ್ರಾಯವನ್ನು ಸರ್ಕಾರ ಮನ್ನಿಸಿ ಕೂಡಲೇ ಸಿಬಿ‌ಐ ತನಿಖೆಗೆ ನೀಡಬೇಕೆಂದು ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಆಗ್ರಹಿಸಿದರು.

ರಾಜ್ಯ ಸರ್ಕಾರ ಪ್ರಾಮಾಣಿಕವಾಗಿದ್ದರೇ ಸಿಬಿ‌ಐ ತನಿಖೆ ಮುಖಾಂತರ ನಡೆಸಲು ಹಿಂದೇಟು ಹಾಕುತ್ತಿರುವುದೇಕೆ ಮತ್ತು ನಿಮಗೆ ಭಯವೇಕೆ ? ಈ ನಡೆಯು ಮತ್ತಷ್ಟು ಸಂಶಯವಾಗಿದೆ. ಅಲ್ಲದೇ ಸಿ‌ಐಡಿ ತನಿಖೆಗೆ ವಹಿಸಿದ ಮರುದಿನವೇ ಸರ್ಕಾರ ಏಕಾ‌ಏಕಿ ಐಜಿಪಿ ಪ್ರಣಬ್ ಮೊಹಂತಿಯನ್ನು ವರ್ಗಾವಣೆ ಮಾಡಿರುವುದೇಕೆ ? ಅಲ್ಲದೇ ಇಂತಹ ಸಂದರ್ಭದಲ್ಲಿ ಮತ್ತೊಬ್ಬ ಅಧಿಕಾರಿಯನ್ನು ನೇಮಕ ಮಾಡಿರುವುದು ಮತ್ತಷ್ಟು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ರಾಜ್ಯ ಸರ್ಕಾರ ಸಿ‌ಐಡಿ ಮುಖಾಂತರ ತನಿಖೆ ನಡೆಸಿ ಈ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ ಹಾಗೂ ಮಾಫಿಯಾಗಳ ರಕ್ಷಣೆಗೆ ಸರ್ಕಾರ ಮುಂದಾಗಿರುವುದು ದುರಂತವಾಗಿದೆ ಎಂದು ಕಿಡಿಕಾರಿದರು.

ಆದ್ದರಿಂದ ರಾಜ್ಯ ಸರ್ಕಾರ ಉನ್ನತ ಅಧಿಕಾರಿಗಳಿಗೆ ಸೂಕ್ತವಾದ ಭದ್ರತೆ ಮತ್ತು ಅಧಿಕಾರಿಗಳಿಗೆ ನೈತಿಕ ಸ್ಥೈರ್ಯವನ್ನು ತುಂಬಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ತಕ್ಷಣವೇ ಸಿಬಿ‌ಐ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇಲ್ಲದಿದ್ದರೇ ರಾಜ್ಯ ಸರ್ಕಾರದ ವಿರುದ್ಧ ವಿದ್ಯಾರ್ಥಿ ಪರಿಷತ್ ತೀವ್ರವಾಗಿ ರಾಜ್ಯಾದ್ಯಂತ ಹೋರಾಟ ನಡೆಸುತ್ತದೆ ಎಂದು ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ಎಚ್ಚರಿಕೆ ನೀಡಿದರು.

ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳು, ನಗರದ ಬಿಜೆಪಿ, ಬಜರಂಗದಳ, ವಿಶ್ವ ಹಿಂದೂ ಪರಿಷತ್ ಬೆಂಬಲ ಸೂಚಿಸಿದರು. ಬಳಿಕ ಕುಂದಾಪುರ ತಹಶಿಲ್ದಾರ್ ಗಾಯತ್ರಿ ನಾಯಕ್ ಅವರಿಗೆ ಮನವಿ ನೀಡಲಾಗಿತ್ತು.

Write A Comment