ಕನ್ನಡ ವಾರ್ತೆಗಳು

ಎಸ್‌ಎಸ್‌ಎಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ನ ಉರೂಸ್ ಪ್ರಚಾರಾರ್ಥ ಬಡ ಕುಟುಂಬಕ್ಕೆ ರೇಶನ್ ವಿತರಣೆ

Pinterest LinkedIn Tumblr

ullala_urus_ration_1

ಉಳ್ಳಾಲ,ಮಾರ್ಚ್.20 : ದಿನಬಳಕೆಯ ವಸ್ತುಗಳನ್ನು ಬಡ ಕುಟುಂಬಗಳಿಗೆ ವಿತರಣೆ ಮಾಡುವುದು ಉತ್ತಮವಾದ ಕಾರ್ಯ. ಇಸ್ಲಾಂ ನಮಗೆ ಬಡ ಕುಟುಂಬಗಳಿಗೆ ನೆರವಾಗಬೇಕೆಂದು ಬೋಧಿಸಿದೆ. ಪ್ರವಾದಿಯವರು ನೆರಮನೆಯಲ್ಲಿ ಹಸಿದಿರುವುವಾಗ ಹೊಟ್ಟೆ ತುಂಬಾ ತಿನ್ನುವವನು ಮಸ್ಲಿಂ ಅಲ್ಲ ಎಂದು ಹೇಳಿದ್ದಾರೆ. ಬಡವರಿಗೆ ನೆರವಾಗುವುದು ಮುಸ್ಲಿಮರ ಕರ್ತವ್ಯವಾಗಿದ್ದು, ಅದನ್ನು ಒಗ್ಗಟ್ಟಾಗಿ ಮಾಡಬೇಕೆಂದು ಬಶೀರ್ ಅಹ್ಸನಿ ತೋಡಾರ್ ಹೇಳಿದರು.

ಅವರು ಎಸ್‌ಎಸ್‌ಎಫ್ ತಿಕ್ಕೊಟ್ಟು ಸೆಕ್ಟರ್‌ನ ರಿಲೀಫ್ ಸರ್ವಿಸ್‌ನ ಉಳ್ಳಾಲ ಉರೂಸ್‌ನ ಪ್ರಚಾರಾರ್ಥವಾಗಿ ತೊಕ್ಕೊಟ್ಟುವಿನಲ್ಲಿ ನಡೆದ ರೇಶನ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ullala_urus_ration_2

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಳ್ಳಾಲ ದರ್ಗಾ ಅಧ್ಯಕ್ಷ ಯು.ಎಸ್. ಹಂಝ ಹಾಜಿ ಮಾತನಾಡಿ ಬಡ ಕುಟುಂಬಗಳನ್ನು ಗುರುತಿಸಿ ಅವರಿಗೆ ದಿನಬಳಕೆಯ ವಸ್ತುಗಳನ್ನು ಮನೆಮನೆಗೆ ವಿತರಣೆ ಮಾಡುವ ಕಾರ್ಯವನ್ನು ತೊಕ್ಕೊಟ್ಟು ಎಸ್‌ಎಸ್‌ಎಫ್ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಇದು ನಾವು ಮಾಡುವ ಸೇವೆಯಲ್ಲಿ ದೊಡ್ಡ ಸೇವೆ ಆಗಿರುತ್ತದೆ. ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ. ಇಸ್ಲಾಂ ಧರ್ಮ ಏನನ್ನು ಬೋಧಿಸಿದೆಯೋ ಅದನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಬರಬೇಕೆಂದು ಕರೆ ನೀಡಿದರು.

ಎಸ್‌ಎಸ್‌ಎಫ್ ನಿರ್ದೇಶಕ ಅಬ್ದುಲ್ ನಾಸರ್ ಮದನಿ ದುವಾ ನೆರವಾರಿಸಿದರು. ಎಸ್‌ಎಸ್‌ಎಫ್ ತೊಕ್ಕೊಟ್ಟು ಸೆಕ್ಟರ್‌ನ ನಿರ್ದೇಶಕ ರಶೀದ್ ಹಾಜಿ ಪಾಂಡೇಶ್ವರ, ಉದ್ಯಮಿ ಖಾಸಿಂ ಹಾಜಿ, ಸಲಹಾ ಸಮಿತಿ ಸದಸ್ಯ ಜಬ್ಬಾರ್, ಅಶ್ರಫಿ, ಎಸ್‌ಎಸ್‌ಎಫ್ ತೊಕ್ಕೊಟ್ಟು ಅಧ್ಯಕ್ಷ ಇಲ್ಯಾಸ್ ಸಖಾಫಿ, ಕೋಶಾಧಿಕಾರಿ ಶಮೀರ್, ಎಸ್‌ಎಸ್‌ಎಫ್‌ನ ಉಳ್ಳಾಲ ಡಿವಿಷನ್‌ನ ಕೋಶಾದಿಕಾರಿ ಫಾರೂಕ್ ಸಖಾಫಿ, ಎಸ್‌ಎಸ್‌ಎಫ್ ಅಕ್ಕರೆಕರೆ ಅಧ್ಯಕ್ಷ ನವಾಝ್ ಸಖಾಫಿ, ಶರೀಫ್ ಮೊದಲಾದವರು ಉಪಸ್ಥಿತರಿದ್ದರು.
ಎಸ್‌ಎಸ್‌ಎಫ್ ತೊಕ್ಕೊಟ್ಟು ಸೆಕ್ಟರ್‌ನ ರಿಲೀಫ್ ಸರ್ವಿಸ್‌ನ ಚಯರ್‌ಮ್ಯಾನ್ ಅಲ್ತಾಫ್ ಅತಿಥಿಗಳನ್ನು ಸ್ವಾಗತಿಸಿದರು.

Write A Comment